ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಅವರು ಶನಿವಾರ ನರಸಿಂಹರಾಜಪುರ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟೀಯ ಲೋಕ ಅದಾಲತ್ ನಲ್ಲಿ ಮಾತನಾಡಿದರು.
ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟಿನ ಸೂಚನೆಯಂತೆ ನ್ಯಾಯಲದಲ್ಲಿರುವ ಪ್ರಕರಣವನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕು ಎಂಬ ಉದ್ದೇಶದಿಂದ ನ್ಯಾಯಾಲಯದಲ್ಲಿರುವ ಕೇಸುಗಳಲ್ಲಿ ಇಬ್ಬರು ಕಕ್ಷಿದಾರರ ಒಪ್ಪಿಗೆ ಮೇರೆಗೆ ರಾಷ್ಟೀಯ ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸಲಾಗುತ್ತದೆ. ಇದರಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳು ಸಹ ಸೇರಿರುತ್ತದೆ ಎಂದು ತಿಳಿಸಿದರು.ಪ್ರತಿ 2-3 ತಿಂಗಳಿಗೊಮ್ಮೆ ಲೋಕ ಅದಾಲತ್ ನಡೆಸುತ್ತೇವೆ. ಕಂದಾಯ ವಸೂಲಿಗೆ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಗಳು ನೋಟಿಸ್ ನೀಡಿರುವ ಪ್ರಕರಣ, ಬ್ಯಾಂಕಿನ ಚೆಕ್ ಬೌನ್ಸ್ ಪ್ರಕರಣ ಸೇರಿದೆ. ಮುಂದಿನ ದಿನಗಳಲ್ಲೂ ಲೋಕ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.
ರಾಷ್ಟೀಯ ಲೋಕ ಅದಾಲತ್ ನಲ್ಲಿ ಕಿರಿಯ ನ್ಯಾಯಾಲಯದ ಕಂದಾಯ ವಸೂಲಾತಿಯ 568 ಪ್ರಕರಣಗಳಲ್ಲಿ 242 ಪ್ರಕರಣ ಮುಕ್ತಾಯವಾಗಿದ್ದು, ಬ್ಯಾಂಕುಗಳ 600 ಪ್ರಕರಣಗಳಲ್ಲಿ 15 ಪ್ರಕರಣ ಮುಕ್ತಾಯಗೊಳಿಸಲಾಯಿತು. ಇದರ ಜೊತೆಗೆ ಚೆಕ್ ಬೌನ್ಸ್, ಪೊಲೀಸ್ ಠಾಣೆಯ ಕೆಲವು ಪ್ರಕರಣ ಮುಕ್ತಾಯಗೊಳಿಸಲಾಯಿತು.
ರಾಷ್ಟೀಯ ಲೋಕ ಅದಾಲತ್ ನಲ್ಲಿ ಕಡಹಿನಬೈಲು ಗ್ರಾಮ ಪಂಚಾಯಿತಿ ಪಿ.ಡಿ.ಓ. ವಿಂದ್ಯಾ, ವಕೀಲರುಗಳಾದ ಚಂದ್ರಶೇಖರ್, ವಿಶ್ವನಾಥ್,ಶಿವಕುಮಾರ್, ವೆಂಕಟೇಶಮೂರ್ತಿ, ಸುಜಿಯ, ಗ್ರಾಮ ಪಂಚಾಯಿತಿಯ ಪಿ.ಡಿ.ಓಗಳು, ಬ್ಯಾಂಕುಗಳ ವ್ಯವಸ್ಥಾಪಕರು ಇದ್ದರು.