ಮುಂದೆ ಗುರಿ, ಹಿಂದೆ ಗುರು ಇದ್ದರೆ ಸಾಧನೆಗೆ ಸಾಧ್ಯ-ಗಾಜೀಗೌಡರ

KannadaprabhaNewsNetwork |  
Published : Jun 28, 2024, 12:49 AM IST
೨೬ಎಚ್‌ವಿಆರ್೨ | Kannada Prabha

ಸಾರಾಂಶ

ಸಾಧನೆಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯ. ಗುರು ಶಿಷ್ಯ ಪರಂಪರೆಗೆ ಅನ್ವರ್ಥವಾದ ಭಾರತದಲ್ಲಿ ಇಂಥಹ ಗುರುವಂದನೆ ಕಾರ್ಯಕ್ರಮಗಳು ನಡೆಯುವುದು ಶ್ಲಾಘನೀಯ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡರ ಹೇಳಿದರು.

ಹಾವೇರಿ: ಸಾಧನೆಗೆ ಮುಂದೆ ಗುರಿ, ಹಿಂದೆ ಗುರು ಇದ್ದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯ. ಗುರು ಶಿಷ್ಯ ಪರಂಪರೆಗೆ ಅನ್ವರ್ಥವಾದ ಭಾರತದಲ್ಲಿ ಇಂಥಹ ಗುರುವಂದನೆ ಕಾರ್ಯಕ್ರಮಗಳು ನಡೆಯುವುದು ಶ್ಲಾಘನೀಯ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡರ ಹೇಳಿದರು.ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ೧೯೯೪-೯೫ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಯಾಗಿದ್ದ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಮಾತನಾಡಿ, ಶಿಕ್ಷಣವು ವ್ಯಾಪಾರೀಕರಣವಾದ ಈ ದಿನಗಳಲ್ಲಿ ಬೆಲೆಬಾಳುವ ಭೂಮಿಯನ್ನು ಕನ್ನಡ ಮಾಧ್ಯಮದ ಶಾಲೆ ಆರಂಭಿಸಲು ದಾನ ನೀಡಿದ ಗಾಜೀಗೌಡ್ರ ಕಾರ್ಯ ಸದಾ ಅನುಕರಣೀಯವಾಗಿದೆ. ಇಂತಹ ದಾನಿಗಳು ಇನ್ನೂ ಹೆಚ್ಚು ಬರಬೇಕು. ಅಂದಾಗ ಮೌಲ್ಯ ಶಿಕ್ಷಣಕ್ಕೆ ಹೆಚ್ಚು ಮಹತ್ವ ಸಿಗುತ್ತದೆ ಎಂದು ಹೇಳಿದರು.ಕಸಾಪದ ತಾಲೂಕ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಮಾತನಾಡಿ, ಕಷ್ಟಕಾಲದಲ್ಲಿ ಶಾಲೆ ಆರಂಭವಾಗಿದ್ದು, ೩೨ ವರ್ಷಗಳ ಕಾಲ ಅವಿರತವಾಗಿ ಸೇವೆ ಸಲ್ಲಿಸಿ, ಇಂದು ಬೃಹದಾಕಾರವಾಗಿ ಬೆಳದಿದೆ. ಶಿಷ್ಯರು ತಾವು ಕಲಿತ ಶಾಲೆಗೆ ಮತ್ತು ಗುರುವೃಂದಕ್ಕೆ ಗೌರವ ಸಲ್ಲಿಸಿರುತ್ತಿರುವದು ಉತ್ತಮ ಕಾರ್ಯವಾಗಿದೆ ಎಂದರು.ಬ್ಯಾಡಗಿ ಬಿಇಓ ಎಸ್.ಜೆ. ಕೋಟಿ, ಡಯಟ್ ಉಪನ್ಯಾಸಕ ಎಸ್.ಎಸ್.ಅಡಿಗ, ಮುಖ್ಯ ಶಿಕ್ಷಕ ಎಂ.ಎಸ್. ಕೆಂಚನಗೌಡರ, ಪ್ರಭುಗೌಡ ಗಾಜಿಗೌಡ್ರ ಮಾತನಾಡಿದರು.ಸಮಾರಂಭದಲ್ಲಿ ಸಿ.ಜಿ. ಚಿಕ್ಕಮಠ, ಎನ್.ಎಂ. ಗೋಣೆಪ್ಪನವರ, ಕಲಾವತಿ ಗಾಜಿಗೌಡ್ರ, ಅಲ್ಲಭಕ್ಷ ಮುಲ್ಲಾ, ಹನುಮಂತ ಧರೆಣ್ಣನವರ, ವೆಂಕಟೇಶ ಇಟಗಿ, ಅಜ್ಜಪ್ಪ ಕಾಡಪ್ಪನವರ, ರಮೇಶ ತುಮರಿ, ಶೀಲಾ ಪಾಟೀಲ, ಶೋಭಾ ಮತ್ತಿತರರು ಉಪಸ್ಥಿತರಿದ್ದರು.ವರ್ಷಾ ವೆಂಕಾಪುರ ಸ್ವಾಗತಿಸಿದರು. ಪ್ರತಿಭಾ ದೊಡ್ಡಗೌಡ್ರ ಮತ್ತು ಶಂಭು ಮಲ್ಲಿಗಾರ ನಿರೂಪಿಸಿದರು. ಕೊನೆಯಲ್ಲಿ ಧರ್ಮಪ್ಪ ಮಳಮ್ಮನರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ