ಸದಾಚಾರ, ಸದ್ಗತಿ ಇದ್ದರೆ ಬದುಕಿಗಿಲ್ಲ ಕೊರತೆ

KannadaprabhaNewsNetwork |  
Published : Apr 04, 2025, 12:46 AM IST
3ಕೆಕೆಆರ್1: ಕುಕನೂರು ಪಟ್ಟಣದ ಗುದ್ನೇಪ್ಪನಮಠದ ಶ್ರೀ ನೀಲಗುಂದ ಮಠದಲ್ಲಿ ಶ್ರೀ ನೀಲಗುಂದ ಗುದ್ನೇಶ್ವರ ಸ್ವಾಮೀಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ  ಸಾಮೂಹಿಕ ವಿವಾಹ ಜರುಗಿದವು. | Kannada Prabha

ಸಾರಾಂಶ

ಪರಮಾತ್ಮನ ಮೇಲೆ ಶ್ರದ್ಧೆ ಇಟ್ಟರೆ ಮನುಷ್ಯ ಜೀವಾತ್ಮನಾಗುತ್ತಾನೆ. ಬದುಕಿನ ಜತೆಗೆ ದೇವರನ್ನು ಸಹ ಪ್ರೀತಿಸಬೇಕು. ಈ ಪ್ರಪಚಂದಲ್ಲಿ ಎಲ್ಲವೂ ಅಸ್ಥಿರ. ಸಾಮಾಜಿಕ ಕಲ್ಯಾಣ ಕಾರ್ಯ ಮಾತ್ರ ಶಾಶ್ವತ. ಸದಾಚಾರದಿಂದ ಬದುಕಬೇಕು.

ಕುಕನೂರು:

ಬದುಕಿನಲ್ಲಿ ಸದಾಚಾರ, ಸದ್ಗತಿ ಇದ್ದರೆ ಯಾವುದೇ ಕೊರತೆ ಆಗದು ಎಂದು ನೀಲಗುಂದ-ಗುದ್ನೇಪ್ಪನಮಠದ ಶ್ರೀಪ್ರಭುಲಿಂಗ ದೇವರು ಹೇಳಿದರು.

ಪಟ್ಟಣದ ಗುದ್ನೇಪ್ಪನಮಠದ ಶ್ರೀನೀಲಗುಂದ ಮಠದಲ್ಲಿ ನೀಲಗುಂದ ಗುದ್ನೇಶ್ವರ ಸ್ವಾಮೀಗಳ 19ನೇ ವರ್ಷದ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಜರುಗಿದ ಧಾರ್ಮಿಕ ಹಾಗೂ 11 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಪರಮಾತ್ಮನ ಮೇಲೆ ಶ್ರದ್ಧೆ ಇಟ್ಟರೆ ಮನುಷ್ಯ ಜೀವಾತ್ಮನಾಗುತ್ತಾನೆ. ಬದುಕಿನ ಜತೆಗೆ ದೇವರನ್ನು ಸಹ ಪ್ರೀತಿಸಬೇಕು. ಈ ಪ್ರಪಚಂದಲ್ಲಿ ಎಲ್ಲವೂ ಅಸ್ಥಿರ. ಸಾಮಾಜಿಕ ಕಲ್ಯಾಣ ಕಾರ್ಯ ಮಾತ್ರ ಶಾಶ್ವತ. ಸದಾಚಾರದಿಂದ ಬದುಕಬೇಕು. ದುಡಿದು ಊಟ ಮಾಡಬೇಕು. ಉಳಿದಿದ್ದರಲ್ಲಿ ದಾನ ಮಾಡಬೇಕು. ಇದುವೇ ಮುಂದಿನ ಜೀವನಕ್ಕೆ ಬುತ್ತಿ. ಭಕ್ತಿ ಶಕ್ತಿಯಿಂದ ದೈವಿಶಕ್ತಿ ಪ್ರಾಪ್ತಿ ಆಗುತ್ತದೆ ಎಂದರು.

ನವ ದಂಪತಿಗಳು ಅವಿನಾಭಾವ ಸಂಬಂಧ ಹೊಂದಬೇಕು. ಒಬ್ಬರನ್ನು ಒಬ್ಬರು ಸದಾ ಪ್ರೀತಿಸಬೇಕು ಎಂದು ತಿಳಿ ಹೇಳಿದರು.

ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, ಗುದ್ನೇಪ್ಪನಮಠ ನಿವಾಸಿಗಳು ದಾನದ ಶ್ರೇಷ್ಠತೆ ಅರಿತಿದ್ದಾರೆ. ಸಾಮೂಹಿಕ ಕಲ್ಯಾಣ ಕಾರ್ಯದಿಂದ ಬಡವರ್ಗದ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಧಾರ್ಮಿಕ ಶಕ್ತಿಯಿಂದ ಸಾಮಾಜಿಕ ಕಳಕಳಿ ಕಾಣಬಹುದು ಎಂದರು.

ಪಟ್ಟಣದ ಅನ್ನದಾನೀಶ್ವರ ಶಾಖಾಮಠದ ಶ್ರೀಮಹಾದೇವ ಸ್ವಾಮೀಜಿ ಮಾತನಾಡಿ, ಗುದ್ನೇಪ್ಪನಮಠದಲ್ಲಿ ಜಂಗಮ ಸಮಾಜದವರು ಹೆಚ್ಚಿದ್ದಾರೆ. ಇವರು ಬೇಡುವ ಜಂಗಮರಲ್ಲ. ಕೊಡುವ ಜಂಗಮರು. ಕಾಯಕ ತತ್ವದಲ್ಲಿ ದುಡಿಮೆ ಅಪ್ಪಿಕೊಂಡು ದೊಡ್ಡವರಾಗಿದ್ದಾರೆ. ಮನುಷ್ಯ ತನ್ನ ಸ್ವಂತ ಶಕ್ತಿಯಿಂದ ಮೇಲಕ್ಕೆ ಬೆಳೆಯಬೇಕು, ಇನ್ನೊಬ್ಬರನ್ನು ಅವಲಂಬಿಸಬಾರದು. ಧರ್ಮ, ಸಂಸ್ಕಾರ ಇದ್ದಲ್ಲಿ ಸಹಾಯ ಮಾಡುವ ಗುಣ ಇರುತ್ತದೆ. ಇಲ್ಲಿನ ಶ್ರೀಪ್ರಭುಲಿಂಗ ದೇವರು ಭಕ್ತರ ಅಭಿವೃದ್ಧಿಗೆ ಶಕ್ತಿಯಾಗಿ ನಿಂತಿದ್ದಾರೆ. ಹಾಗಾಗಿ ಗುದ್ನೇಪ್ಪನಮಠ ಪವಿತ್ರ ಸ್ಥಳವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಹಿರಿಯ ಗುದ್ನೇಯ್ಯ ಬಂಡಿಮಠ, ಗುದ್ನೇಪ್ಪನಮಠದ ಜಂಗಮರ ಜೋಳಿಗೆ ಮೂಲಕ ಸಮಾಜ ಕಟ್ಟುವ ಕೆಲಸ ಆಗುತ್ತಿದೆ. ಕಲ್ಯಾಣ ಕಾರ್ಯದಿಂದ ಗ್ರಾಮಕ್ಕೆ ಶ್ರೇಯಸ್ಸು ಎಂದರು.

ಮುಖಂಡರಾದ ಬಸವನಗೌಡ ತೊಂಡಿಹಾಳ, ಸಚಿನ ಆಚಾರ್, ಪ್ರಾಂಶುಪಾಲೆ ಜಯಾ, ಚನ್ನಬಸಯ್ಯ ಧೂಪದ, ಸಿದ್ಲಿಂಗಯ್ಯ ಬಂಡಿಮಠ, ರುದ್ರಯ್ಯ ಗಲಬಿ, ವೀರಯ್ಯ ದೇವಗಣಮಠ, ಪಪಂ ಸದಸ್ಯ ಜಗನ್ನಾಥ ಭೋವಿ, ಎಎಸ್ಐ ನಿರಂಜನ ತಳವಾರ, ರುದ್ರಯ್ಯ ಇನಾಮದಾರ, ಶಶಿಕುಮಾರ, ಶಿವು, ಶರಣಯ್ಯ ಹಳೆಮನಿ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ