ಕ್ಷಮೆ ಕೇಳದಿದ್ದರೆ ತಮಿಳು ಚಿತ್ರ ಬಿಡುಗಡೆ ಮಾಡಲು ಬಿಡಲ್ಲ

KannadaprabhaNewsNetwork |  
Published : Jun 02, 2025, 12:09 AM IST
ಸಿಕೆಬಿ-3 ನಗರದ ಅಂಬೇಡ್ಕರ್ ವೃತ್ತದಲ್ಲಿ ನಟ ಕಮಲಹಾಸನ್ ವಿರುದ್ದ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಮಲಹಾಸನ್ ಬಾವಚಿತ್ರಗಳಿಗೆ ಅಗ್ನಿ ಸ್ಪರ್ಶ ಮಾಡಿದರು | Kannada Prabha

ಸಾರಾಂಶ

ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ನಟ ಕಮಲ್‌ ಹಾಸನ್‌ ವಿರುದ್ಧ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಭಾನುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಮಲಹಾಸನ್ ಕನ್ನಡಿಗರ ಕ್ಷಮೆಗೆ ಮತ್ತು ರಾಜ್ಯದಲ್ಲಿ‘ಥಗ್‌ ಲೈಫ್‌’ ಸಿನಿಮಾ ನಿಷೇಧಿಸಲು ಆಗ್ರಹಿಸಿದವು. ನಟ ಕಮಲ್‌ ಹಾಸನ್‌ ಭಾವಚಿತ್ರವನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕನ್ನಡ ಭಾಷೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದಿರುವ ನಟ ಕಮಲ್‌ ಹಾಸನ್‌ ವಿರುದ್ಧ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಭಾನುವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಮಲಹಾಸನ್ ಕನ್ನಡಿಗರ ಕ್ಷಮೆಗೆ ಮತ್ತು ರಾಜ್ಯದಲ್ಲಿ‘ಥಗ್‌ ಲೈಫ್‌’ ಸಿನಿಮಾ ನಿಷೇಧಿಸಲು ಆಗ್ರಹಿಸಿದವು. ನಟ ಕಮಲ್‌ ಹಾಸನ್‌ ಭಾವಚಿತ್ರವನ್ನು ಸುಟ್ಟು ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ವಾಟಾಳ್‌ ನಾಗರಾಜ್‌, "ನಟ ಕಮಲ್‌ ಹಾಸನ್‌ ತಾವಾಡಿರುವ ಮಾತಿಗೆ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ಅವರು ಕ್ಷಮೆ ಕೇಳದಿದ್ದರೆ, ಅವರ ಅಭಿನಯದ ಚಿತ್ರಗಳು ಮಾತ್ರವಲ್ಲ, ಯಾವುದೇ ತಮಿಳು ಚಿತ್ರಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ " ಎಂದು ಎಚ್ಚರಿಸಿದರು.

ಕಮಲ್ ಹಾಸನ್ ಒಬ್ಬ ಕೊಂಗ: ರಾಜ್ಯಾದ್ಯಂತ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ. ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಕಮಲ್ ಹಾಸನ್ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕಮಲ್ ಹೇಳಿಕೆಯನ್ನು ಕನ್ನಡಿಗರು ಖಂಡಿಸಿದ್ದಾರೆ. ಆದರೆ ತಮಿಳು ಸಿನಿಮಾ ನಟರು ಕಮಲ್ ಹಾಸನ್ ಗೆ ಬೆಂಬಲ ಸೂಚಿಸಿ ಆತನ ಜೊತೆಗಿರುವ ಭರವಸೆ ನೀಡಿದ್ದಾರೆ. ಕಮಲ್ ಹಾಸನ್ ಒಬ್ಬ ಕೊಂಗ, ದುರಹಂಕಾರಿ ಎಂದು ಕಿಡಿಕಾರಿದರಲ್ಲದೇ. ಅವನಿಗೂ ಭಾಷೆಗೂ ಸಂಬಂಧವಿಲ್ಲ ಎಂದರು.

ತಮಿಳುನಾಡಿನಲ್ಲಿ ಕಮಲ ಹಾಸನ್ ಪ್ರಭಾವ ಬಿದ್ದು ಹೋಗಿದೆ. ತನ್ನ ಪ್ರಭಾವ ಹೆಚ್ಚಿಸಲು ಪ್ರಾಮಾಣಿಕತೆ ಬಿಟ್ಟು ತನ್ನ ಅಹಂಕಾರದಿಂದ ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳುವ ಮೂಲಕ ಇಡೀ ನಾಡಿನ, ದೇಶದ, ವಿಶ್ವದ ಎಲ್ಲಡೆಇರುವ ಕನ್ನಡಿಗರಿಗೆ ಅವಮಾನ ಮಾಡಿದ್ದಾನೆ. ಕಮಲ ಹಾಸನ್ ಮೇಲೆ ಕರ್ನಾಟಕ ಸರ್ಕಾರ ಕಾನೂನು ಕ್ರಮ ಕೈಗೊಂಡು ಆತನನ್ನು ಬಂಧಿಸಿ ಜೈಲಿಗಟ್ಟಬೇಕು.

ಈತನಿಗೆ ಕನ್ನಡದ ಇತಿಹಾಸ ಗೊತ್ತಿಲ್ಲಾ ಇಡೀ ದೇಶದಲ್ಲೆ ಕನ್ನಡ ಒಂದು ಸುಂದರ ಭಾಷೆ, ಕನ್ನಡದ ಅಕ್ಷರಗಳು ಪೋಣಿಸಿದ ಮುತ್ತಿನಂತೆ ಇವೆ. ನಮ್ಮ ಭಾಷೆಯ ಧ್ವನಿ ಸುಂದರವಾಗಿದೆ. ವಿಶ್ವದೆಲ್ಲಡೆ ಕನ್ನಡದ ಕಂಪು ಹರಡಿದೆ. ಆದರೆ ತಮಿಳು ಭಾಷೆಗೆ ಇವ್ಯಾವು ಇಲ್ಲಾ ,ತಮಿಳು ಬಾಷೆ ದೆವ್ವ, ಪಿಶಾಚಿಗಳು ಮಾತನಾಡುವ ಭಾಷೆಯಾಗಿದೆ. ಕಮಲ ಹಾಸನ್ ಕನ್ನಡಿಗರ ಕ್ಷಮೆ ಕೇಳಲೇ ಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡುತ್ತೇವೆ ಎಂದರು.

ಇಡಿ ಕರ್ನಾಟಕದ ಜನತೆ, ಕನ್ನಡ ನಟರು, ರಾಜಕಾರಣಿಗಳು ಒಂದಾಗಿ ಪ್ರತಿ ಭಟನೆ ನಡೆಸಬೇಕು. ಆದರೆ ನಮ್ಮಲ್ಲಿಯೇ ಅಪಸ್ವರ ಮೂಡುತ್ತಿದೆ. ಇದು ನಿಲ್ಲಬೇಕು. ಅಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನನ್ನನ್ನು ಬಂಧಿಸಿ ತಿರುವೆಳ್ಳುವಾರ್ ಪ್ರತಿಮೆ ಸ್ಥಾಪಿಸಿದರು. ಇಂದು ಇದರ ಫಲ ನಾವು ಅನುಭವಿಸುತ್ತಿದ್ದೇವೆ. ಬಿಜೆಪಿ, ಕಾಂಗ್ರೆಸ್, ಜನತಾದಳ ಮೂರು ಪಕ್ಷಗಳದೂ ಓಲೈಕೆ ರಾಜಕಾರಣವಾಗಿದೆ.

ಕೂಡಲೇ ಕರ್ನಾಟಕ ಸರ್ಕಾರ ಸರ್ವ ಪಕ್ಷಗಳ ವಿಶೇಷ ಶಾಸನ ಸಭೆ ಕರೆದು ಕೂಡಲೆ ಕಮಲಹಾಸನ್ ವಿರುದ್ದ ಹಕ್ಕು ಚ್ಯುತಿ ನಿರ್ಣಯ ಮಂಡಿಸಬೇಕು. ಆದರೆ ಜೂನ್ 5ರಂದು ಅವರ ಸಿನಿಮಾವೇನಾದರರೂ ಬಿಡುಗಡೆಯಾದರೆ ಕನ್ನಡಪರ ಸಂಘಟನೆಗಳು,ಕನ್ನಡ ಸಾಹಿತ್ಯ ಪರಿಷತ್,ಇಡಿ ಕರ್ನಾಟಕದ ಜನತೆ, ಕನ್ನಡ ನಟರು, ರಾಜಕಾರಣಿಗಳು, ಫಿಲಂ ಚೇಂಬರ್, ಪತ್ರಕರ್ತರು, ಎಲ್ಲರೂ ಸೇರಿ ಧರಣಿ ನಡೆಸಿ ಚಿತ್ರದ ಪ್ರದರ್ಶನ ನಿಲ್ಲಿಸಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.

ಪ್ರತಿಭಟನೆಯಲ್ಲಿ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ವಿ.ರವಿಕುಮಾರ್, ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಮುಖಂಡ ಪಿ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ ಶ್ರೀರಾಮೇಗೌಡ, ಕನ್ನಡ ಸಿಂಹ ದ ಜಿ.ಎನ್.ಶ್ರೀನಿವಾಸಗೌಡ, ಪ್ರಣವ್,ವೆಂಕಟಲಕ್ಷ್ಮಿ, ಕೃಷ್ಣಮೂರ್ತಿ,ಜಯದೇವ್, ಹರೀಶ್,ಮತ್ತಿತರರು ಇದ್ದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು