ಕನ್ನಡಪ್ರಭ ವಾರ್ತೆ ಮದ್ದೂರು
ಈ ವೇಳೆ ಮಾತನಾಡಿದ ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಜಿಲ್ಲೆಯ ಅಭಿವೃದ್ಧಿಯಲ್ಲಿ ಹಲವು ರಾಜಕೀಯ ಮುಖಂಡರ ದುಡಿಮೆ ಇದೆ. ಇದರಲ್ಲಿ ಕೃಷಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅಪಾರವಾಗಿ ಶ್ರಮಿಸುವ ಮೂಲಕ ಜನರ ಹೃದಯದಲ್ಲಿ, ಶಾಶ್ವತವಾದ ಸ್ಥಾನ ಪಡೆದಿದ್ದಾರೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ಕ್ರಾಂತಿಸಿಂಹ ಮಾತನಾಡಿ, ಸಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ಹಂತ ಹಂತವಾಗಿ ಬೆಳೆದು ಕೃಷಿ ಸಚಿವರಾಗಿ ಜನಪ್ರಿಯ ನಾಯಕರಾಗಿ ಇದ್ದ ಕಾಲಘಟ್ಟದಲ್ಲಿ ಬಹಿರಂಗವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಂತ ದಿಟ್ಟ ನಿರ್ಧಾರ ಮಾಡಿರುವುದು ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ ಎಂದರು.ಸಚಿವರ ಆಶಯದಂತೆ ರೈತರಿಗೆ ತೆಂಗಿನ ಸಸಿ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೃಷಿ ಸಚಿವರ ಕೈ ಬಲಪಡಿಸುವ ಕೆಲಸ ಮಾಡೋಣ. ಆ ಮೂಲಕ ಸಮಸಮಾಜದ ನಿರ್ಮಾಣಕ್ಕಾಗಿ ಎಲ್ಲರೂ ದುಡಿಯಬೇಕು ಎಂದರು.