ಸತ್ಯ, ಅಹಿಂಸೆ ಪಾಲಿಸಿದರೆ ಠಾಣೆಯಲ್ಲಿನ ಪ್ರಕರಣಗಳು ದೂರ

KannadaprabhaNewsNetwork |  
Published : Oct 06, 2025, 01:00 AM IST
3ಕೆಎಂಎನ್ ಡಿ20 | Kannada Prabha

ಸಾರಾಂಶ

ಪ್ರೀತಿ, ಪ್ರೇಮ, ಕರ್ತವ್ಯ ನಿಷ್ಠೆಯಿಂದ ಎಲ್ಲವನ್ನು ಜಯಿಸಬಹುದು ಎಂದು ತೋರಿಸಿಕೊಟ್ಟ ಇಂತಹ ಮಹಾತ್ಮರ ಗುಣಗಾನ ನಿತ್ಯ ಮಾಡಬೇಕಿದೆ. ಟಿವಿ, ಮೊಬೈಲ್‌ನಿಂದ ದೂರವಿದ್ದು, ಮೌನದಲ್ಲಿ ಎಲ್ಲವನ್ನು ಉತ್ತರಕಂಡು ಜಯಶೀಲರಾದ ಸತ್ಯದ ಮಾರ್ಗವನ್ನು ಕಾಣಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪ್ರತಿಯೊಬ್ಬರೂ ಗಾಂಧೀಜಿಯ ಕನಸು ನನಸಾಗಿಸಲು ಸತ್ಯ, ಅಹಿಂಸೆ ಮಾರ್ಗದಲ್ಲಿ ನಡೆದರೆ ಠಾಣೆಯಲ್ಲಿನ ಪ್ರಕರಣಗಳೇ ದೂರವಾಗಲಿವೆ ಎಂದು ಪ್ರಾಂಶುಪಾಲ ಎಂ.ಆರ್.ಸಹದೇವು ಹೇಳಿದರು.

ಕೆಪಿಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಗಾಂಧೀಜಿ, ಲಾಲ್ ಬಹಾದೂರ್‌ ಶಾಸ್ತ್ರೀ ಜಯಂತಿಯಲ್ಲಿ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಎಳೆಯರಿಂದ ಎಲ್ಲರೂ ಆದರ್ಶವಾಗಿ ರೂಪಿಸಿಕೊಳ್ಳಬೇಕಿದೆ ಎಂದರು.

ಪ್ರೀತಿ, ಪ್ರೇಮ, ಕರ್ತವ್ಯ ನಿಷ್ಠೆಯಿಂದ ಎಲ್ಲವನ್ನು ಜಯಿಸಬಹುದು ಎಂದು ತೋರಿಸಿಕೊಟ್ಟ ಇಂತಹ ಮಹಾತ್ಮರ ಗುಣಗಾನ ನಿತ್ಯ ಮಾಡಬೇಕಿದೆ. ಟಿವಿ, ಮೊಬೈಲ್‌ನಿಂದ ದೂರವಿದ್ದು, ಮೌನದಲ್ಲಿ ಎಲ್ಲವನ್ನು ಉತ್ತರಕಂಡು ಜಯಶೀಲರಾದ ಸತ್ಯದ ಮಾರ್ಗವನ್ನು ಕಾಣಬೇಕು ಎಂದರು.

ಲಾಲ್‌ ಬಹಾದೂರ್‌ ಶಾಸ್ತ್ರೀಜಿ, ಗಾಂಧೀಜಿ ಅವರ ಜನ್ಮ ದಿನ ನಾಡಿಗೆ ಪವಿತ್ರ ದಿನವಾಗಿದೆ. ಬಡತನದಲ್ಲಿ ನಲುಗುತ್ತಿದ್ದ ದೇಶವನ್ನು ಕೃಷಿ ಸಾಮ್ರಾಜ್ಯವಾಗಿಸಲು, ಚೀನಾ ಆಕ್ರಮಣಕ್ಕೆ ತಕ್ಕ ಪಾಠ ಕಲಿಸಲು ಯುದ್ಧಕ್ಕೆ ಸಜ್ಜಾದ ಶಾಸ್ತ್ರೀಜಿಯವರ ನಿಲುವು ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಈ ವೇಳೆ ಎನ್‌ಎಸ್‌ಎಸ್‌ ಯೋಜನಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಉಪನ್ಯಾಸಕರಾದ ಎ.ಎಂ.ಮಂಜುನಾಥ್, ಎಸ್.ಡಿ. ಹರೀಶ್, ಅರ್ಪಿತ, ಚಂದ್ರಿಕಾ, ಲಾವಣ್ಯ, ಫಾಜಿಲಾ ಖಾನಂ ಭಾಗವಹಿಸಿದ್ದರು.

ಇವರೇ ನೋಡಿ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರು

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿ ಕೆಳಗಿನಂತಿದೆ.

ಪ್ರೌಢಶಾಲಾ ವಿಭಾಗ:

ಪಾಂಡವಪುರ ತಾಲೂಕಿನ ಟಿ.ಎಸ್. ಛತ್ರ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷ್ಮೀ ಪ್ರಥಮ, ಮಂಡ್ಯ ಗ್ಲೋಬಲ್ ಪಬ್ಲಿಕ್ ಶಾಲೆಯ ಕೆ.ಎಸ್‌.ದೀಪ್ತಿಶ್ರೀ ದ್ವಿತೀಯ, ಮದ್ದೂರು ತಾಲೂಕಿನ ಪೂರ್ಣಪ್ರಜ್ಞಾ ಶಾಲೆಯ ಎಸ್‌.ಪಿ.ಚಂದನಾ ತೃತೀಯ ಸ್ಥಾನ.

ಪದವಿ ಪೂರ್ವ ಶಿಕ್ಷಣ ವಿಭಾಗ:

ಮಂಡ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಮಾಜಿ ಪುರಸಭೆ) ಲಕ್ಷ್ಮೀ ಪ್ರಥಮ, ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಕಲ್ಲುಕಟ್ಟಡ) ನಿಸರ್ಗ ದ್ವಿತೀಯ, ಕೆ.ಆರ್. ಪೇಟೆ ತಾಲೂಕಿನ ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಛಾಯಾವತಿ ತೃತೀಯ.

ಪದವಿ-ಸ್ನಾತಕೋತ್ತರ ಪದವಿ ವಿಭಾಗ:

ನಾಗಮಂಗಲ ತಾಲೂಕಿನ ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಕಾಲೇಜಿನ ಬಿ.ಎಸ್‌.ನೇತ್ರಾ ಪ್ರಥಮ, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ) ಎಸ್‌.ಯುಕ್ತಿ ದ್ವಿತೀಯ, ಮದ್ದೂರು ತಾಲೂಕಿನ ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ಎಸ್‌.ಭವಾನಿ ತೃತೀಯ ಸ್ಥಾನ ಪಡೆದಿರುವುದಾಗಿ ಜಿಪಂ ಸಿಇಒ ಕೆ.ಆರ್‌.ನಂದಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಪಿಎಸ್‌ಐ 545 ಹುದ್ದೆಗಳ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ
ಕನ್ನಡಿಗ ಪಾಟೀಲ್‌ಗೆ ಅಮೆರಿಕ ಎಐ ಕಂಪನಿಯ ಉನ್ನತ ಹುದ್ದೆ