ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಶ್ರಮ ಅನ್ನುವುದು ಯಾರನ್ನೂ ಕೊಲ್ಲುವುದಿಲ್ಲ. ಆದರೆ ಚಿಂತೆ ಅನ್ನುವುದು ಬಹಳಷ್ಟು ಜನರನ್ನು ಜೀವಂತವಾಗಿ ಕೊಲ್ಲುತ್ತದೆ. ಸಮಯ ಸ್ನೇಹ ಮತ್ತು ಆರೋಗ್ಯ ಮೊದಲಾದವುಗಳಿಗೆ ಬೆಲೆ ಕಟ್ಟಲಾಗದು. ಕಳೆದುಕೊಂಡಾಗಲಷ್ಟೇ ಅವುಗಳ ನಿಜವಾದ ಬೆಲೆ ತಿಳಿಯುತ್ತದೆ. ಪ್ರಪಂಚದಲ್ಲಿ ಎರಡಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ಪ್ರೀತಿ ತಂದೆಯ ಜವಾಬ್ದಾರಿ ಎಂಬುದನ್ನು ಮರೆಯುವಂತಿಲ್ಲ. ವೀರಶೈವ ಧರ್ಮ ಸಂವಿಧಾನದಲ್ಲಿ ಜೀವನ ವಿಕಾಸಕ್ಕೆ ಹಾಗೂ ಸುಖ ಶಾಂತಿ ಬದುಕಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಅನ್ವಯಿಸುತ್ತವೆ ಎಂದರು.ಸೀಗೆ ಹುಣ್ಣಿಮೆ ಪ್ರಯುಕ್ತ ಭೂ ತಾಯಿಗೆ ವಿಶೇಷ ಪೂಜೆ ನಡೆಯಿತು. ಪ್ರಾತಃಕಾಲ ಎಲ್ಲ ದೈವಗಳಿಗೆ ವಿಶೇಷ ಪೂಜೆ ಅಷ್ಟೋತ್ತರ ಮಹಾಮಂಗಲ ನೆರವೇರಿತು.
ಇದೇ ಸಂದರ್ಭದಲ್ಲಿ ಹೂಲಿ ಶ್ರೀ ಗುರು ಸಿದ್ಧನಂಜೇಶ ವಿರಚಿತ ಅದ್ಭುತ ಕಾಲಜ್ಞಾನ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಮಳಲಿಮಠದ ಡಾ. ನಾಗಭೂಷಣ ಶಿವಾಚಾರ್ಯರು, ಕರ್ಪುರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯರು, ಹಾಸನ ತಣ್ಣಿರಹಳ್ಳಿಮಠದ ವಿಜಯಕುಮಾರ ಸ್ವಾಮೀಜಿ, ಮುಳವಾಡ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಕುಂಟೋಜಿ ಕರವೀರೇಶ್ವರ ಹಿರೇಮಠದ ರುದ್ರಮುನಿ ದೇವರು, ಅರಸೀಕೆರೆ ಕೆ.ವಿ.ನಿರ್ವಾಣಸ್ವಾಮಿ, ಜಿ.ಎನ್.ಷಡಕ್ಷರಿ, ಮುರುಂಡಿ ಶಿವಯ್ಯ, ಹಾಸನದ ಶಿವಕುಮಾರ್ ಕಟ್ಟಾಯ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.೧೭ಬಿಹೆಚ್‌ಆರ್ ೧:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಪೌರ್ಣಿಮೆ ಧರ್ಮ ಸಮಾರಂಭದಲ್ಲಿ ಹೂಲಿ ಶ್ರೀ ಗುರು ಸಿದ್ಧನಂಜೇಶ ವಿರಚಿತ ಅದ್ಭುತ ಕಾಲಜ್ಞಾನ ಕೃತಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.