ಮೂಡಿಗೆರೆ: ಕಾಫಿ ಉದ್ದಿಮೆಯಲ್ಲಿ ಮಹಿಳೆಯರು ತೊಡಗಿಸಿಕೊಂಡು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಕಷ್ಟು ಅವಕಾಶಗಳಿವೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಹೇಳಿದರು.
ಪಟ್ಟಣದ ಬೆಳೆಗಾರರ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಪ್ರಾರಂಭೋತ್ಸವ ದಲ್ಲಿ ಸಂಘಟನೆಯ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿದರು. ಭಾರತದ ಕಾಫಿಗೆ ವಿಶ್ವ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಆದರೆ, ನಾವು ನಮ್ಮ ದೇಶದ ಕಾಫಿಯನ್ನು ಬ್ರಾಂಡ್ ಮಾಡುವುದರಲ್ಲಿ ಸಫಲರಾಗಿಲ್ಲ. ಈ ನಿಟ್ಟಿನಲ್ಲಿ ಕಾಫಿ ಮಂಡಳಿ ಕಾರ್ಯಪ್ರವೃತ್ತವಾಗಿದ್ದು, ನಮ್ಮ ದೇಶದ ಕಾಫಿಯನ್ನು ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಮಾಡಿ ಆ ಮೂಲಕ ಬೆಳೆಗಾ ರರಿಗೆ ಮತ್ತು ಉದ್ದಿಮೆದಾರರಿಗೆ ಉತ್ತಮ ಬೆಲೆ ದೊರಕುವಂತೆ ಮಾಡಲು ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದರು. ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ಮಲೆನಾಡಿನಲ್ಲಿ ಕಾಫಿ ತೋಟಗಳ ನಿರ್ವಹಣೆ ಮತ್ತು ವಿಶಿಷ್ಟವಾದ ಕಾಫಿ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖವಾಗಿದೆ. ಅನೇಕ ಕಡೆ ಮಹಿಳೆಯರೇ ಸ್ವತಃ ಕಾಫಿ ತೋಟಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಉತ್ತಮ ಕಾಫಿ ಮಾಡುವುದು ಒಂದು ಕಲೆ, ಇದರ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು. ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಅಧ್ಯಕ್ಷೆ ಪವಿತ್ರಾ ರತೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷೆ ಪಲ್ಲವಿ ಸಿ.ಟಿ.ರವಿ, ಕೆಜಿಎಫ್ ಗೌರವ ಕಾರ್ಯದರ್ಶಿ ಸುರೇಂದ್ರ, ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್.ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ರತೀಶ್ ಕುಮಾರ್, ಕಾರ್ಯದರ್ಶಿ ಕೆರೆಮಕ್ಕಿ ಮಹೇಶ್, ರಮ್ಯಾ ಸಂದೇಶ್, ರೇಷ್ಮಾ ಸುಧೀರ್, ಶಾಲಿನಿ ಪಾಟೀಲ್, ಸ್ಮಿತಾ ಸುನಿಲ್, ಸೌಮ್ಯ ದಯಾನಂದ್ ಉಪಸ್ಥಿತರಿದ್ದರು.16 ಮೂಡಿಗೆರೆ 1ಎಮೂಡಿಗೆರೆ ಬೆಳೆಗಾರರ ಭವನ ಸಭಾಂಗಣದಲ್ಲಿ ಚಿಕ್ಕಮಗಳೂರು ವುಮೆನ್ಸ್ ಕಾಫಿ ಫೋರಂ ಪ್ರಾರಂಭೋತ್ಸವದಲ್ಲಿ ಸಂಘಟನೆಯ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.