- ಕಚೇರಿಗಳಲ್ಲಿ ಲೋಕಾಯುಕ್ತ ಕಚೇರಿ ದೂರವಾಣಿ ಸಂಖ್ಯೆ, ವಿವರ ಪ್ರದರ್ಶನ ಕಡ್ಡಾಯ - - - ಕನ್ನಡಪ್ರಭ ವಾರ್ತೆ ಹರಿಹರ
ನಗರದ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಬುಧವಾರ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳ ಸಂಬಂಧ ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಲೋಕಾಯುಕ್ತ ಕಚೇರಿ ದೂರವಾಣಿ ಸಂಖ್ಯೆ ಹಾಗೂ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸುವ ನಾಮಫಲಕ ಹಾಕಬೇಕು. ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸುವ ಸಾರ್ವಜನಿಕರ, ವಿಕಲಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಕಡ್ಡಾಯವಾಗಿ ಕಲ್ಪಿಸಬೇಕು ಎಂದರು.ಸರ್ಕಾರಿ ನೌಕರರು ಯಾವುದೇ, ತರಹದ ಲಂಚಕ್ಕಾಗಲಿ, ಸರ್ಕಾರ ನಿಗದಿಪಡಿಸಿರುವ ಶುಲ್ಕ ಹಣದ ಬದಲಿಗೆ ಅಧಿಕ ಹಣ ಪಡೆಯುವುದಾಗಲಿ ಮಾಡಬಾರದು. ಲಂಚ ಸ್ವೀಕರಿಸದೇ, ಭಯಮುಕ್ತರಾಗಿ ತಮ್ಮ ಕರ್ತವ್ಯ ಮಾಡಲು ಮುಂದಾದಲ್ಲಿ ಒಳಿತಾಗಲಿದೆ. ಇಲ್ಲದಿದ್ದಲ್ಲಿ ಸಾರ್ವಜನಿಕರು ಹಾಗೂ ಲೋಕಾಯುಕ್ತದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಂದಾಯ ಇಲಾಖೆಯಲ್ಲಿ ಖಾತೆ ಬದಲಾವಣೆ ಸಮಯದಲ್ಲಿ ದಿಶಾಂಕ್ ಆ್ಯಪ್ ನೋಡಿಯೇ ಖಾತೆ ಬದಲಾವಣೆ ಮಾಡಬೇಕೆಂಬ ನಿಯಮವಿದೆ. ಸಾರ್ವಜನಿಕರು ಸಲ್ಲಿಸಿದ ಅರ್ಜಿಗೆ ಹಿಂಬರಹ ನೀಡುವ ಸಮಯದಲ್ಲಿ ಅಧಿಕಾರಿಗಳು ಎಚ್ಚರ ವಹಿಸಬೇಕು. ಶಿಕ್ಷಣ ವಂಚಿತರಾದ ಜನರಿಗೆ ಶಿಕ್ಷಣ ಕಲಿಸಲು ಎಲ್ಲರೂ ಮುಂದಾಗಬೇಕು ಎಂದು ತಹಸೀಲ್ದಾರ್ ಸೂಚಿಸಿದರು.
ಬಾಕ್ಸ್ * ದೇವಸ್ಥಾನದ ರಸ್ತೆ ನಿವಾಸಿ ಶಶಿಕಲಾ ತನ್ನ ಮಗ ಬಿ.ಇ. 2ನೇ ವರ್ಷದಲ್ಲಿ ಓದುತಿದ್ದಾನೆ. ಧನಸಹಾಯಕ್ಕಾಗಿ ಸ್ಥಳೀಯ ನಗರಸಭೆಗೆ ಕಳೆದ 4 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಹಣಕಾಸು ನೆರವು ನೀಡಲು ಸತಾಯಿಸುತ್ತಿದ್ದಾರೆ. ಸೂಕ್ತ ಪರಿಹಾರ ನೀಡಬೇಕೆಂದು ಲೋಕಾಯಕ್ತರಿಗೆ ಮನವಿ ಸಲ್ಲಿಸಿದರು. * ಕರುನಾಡ ಕದಂಬ ರಕ್ಷಣಾ ವೇದಿಕೆಯ ಎಚ್. ಸುಧಾಕರ, ಹಲವಾರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಬೀದಿದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ತಾಲೂಕು ಕೇಂದ್ರ ಸ್ಥಾನದಿಂದ ಗ್ರಾಮಾಂತರ ಪ್ರದೇಶಗಳಿಗೆ ತಲುಪುವ ರಸ್ತೆಗಳು ಸಂಪೂರ್ಣ ಹಾಳಾಗಿವೆ ಎಂದು ದೂರಿದರು. * ನಗರ ಹಾಗೂ ಗ್ರಾಮಾಂತರ ಪ್ರದೇಶದ ಅನೇಕ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳು, ಸರ್ಕಾರದಿಂದ ಪರವಾನಗಿ ಹಾಗೂ ಅನುದಾನ ಪಡೆಯುವಾಗ ನೀಡಿರುವ ಮುಚ್ಚಳಿಕೆ ಪ್ರಕಾರ ನಡೆದುಕೊಳ್ಳುತ್ತಿಲ್ಲ, ಅಬಕಾರಿ ಇಲಾಖೆಯ ನಿರ್ಲಕ್ಷದ ಬಗ್ಗೆಯೂ ಕೆಲವರು ಮನವಿ ಸಲ್ಲಿಸಿದರು.
- - --13ಎಚ್.ಆರ್.ಆರ್03: