ಹೆಚ್ಚಿನ ಮಕ್ಕಳು ವ್ಯಾಸಂಗ ಮಾಡುತ್ತಿರುವ ಕಾರಣ ವಾರಕ್ಕೆ ಒಮ್ಮೆ ಬಂದು ಪಾಠ ಮಾಡುವುದರ ಜೊತೆಗೆ ಅವರ ಮುಂದಿನ ಜೀವನದ ಗುರಿಯನ್ನು ತಲುಪಲಿಕ್ಕೆ ಮಾರ್ಗದರ್ಶನ ನೀಡುತ್ತಿದ್ದೇನೆ ಎಂದು ತಹಸೀಲ್ದಾರ್ ವೆಂಕಟೇಶ್ವಪ್ಪ ಹೇಳಿದ್ದಾರೆ
ಬಂಗಾರಪೇಟೆ: ತಾಲೂಕಿನ ಕೆಪಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ವೆಂಕಟೇಶಪ್ಪ ಒಂದು ಗಂಟೆಗೂ ಹೆಚ್ಚು ಕಾಲ ಪಾಠ ಮಾಡಿದರು.
ಬಳಿಕ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಎಲ್ಲಾ ಬಗೆಯ ಮೂಲಭೂತ ಸೌಕರ್ಯಗಳನ್ನು ನೀಡುವುದರ ಜೊತೆಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ನೀಡಲಾಗುತ್ತಿದೆ. ಆದರೂ ಸಹ ಎಸ್.ಎಸ್.ಎಲ್.ಸಿಯಲ್ಲಿ ಮಕ್ಕಳು ಅನುತ್ತೀರ್ಣ ಆಗುತ್ತಿರುವುದರಿಂದ ಅವರ ಮುಂದಿನ ಗುರಿಯನ್ನು ತಲುಪಲಿಕ್ಕೆ ತೊಂದರೆ ಆಗುತ್ತಿದೆ. ಈ ನಿಟ್ಟಿನಲ್ಲಿ ಬೋಧನಾ ಕ್ರಮದಲ್ಲಿ ಪರಿಣಿತರಲ್ಲದಿದ್ದರೂ ಅವರಲ್ಲಿ ಆತ್ಮಸೈರ್ಯ ತುಂಬಿದರೆ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಇದಕ್ಕಾಗಿ ಕೆಪಿಎಸ್ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಕಾರಣ ವಾರಕ್ಕೆ ಒಮ್ಮೆ ಬಂದು ಪಾಠ ಮಾಡುವುದರ ಜೊತೆಗೆ ಅವರ ಮುಂದಿನ ಜೀವನದ ಗುರಿಯನ್ನು ತಲುಪಲಿಕ್ಕೆ ಮಾರ್ಗದರ್ಶನ ನೀಡುತ್ತಿದ್ದೇನೆ. ಇದರಿಂದ ಮಕ್ಕಳಲ್ಲಿ ಬದಲಾವಣೆ ಕಂಡು ಚೆನ್ನಾಗಿ ಓದಿ ಶೇ.100ರಷ್ಟು ಫಲಿತಾಂಶ ತಂದುಕೊಟ್ಟರೆ ಶಾಲೆಗೆ ಮತ್ತು ತಾಲೂಕಿಗೆ ಉತ್ತಮ ಕೀರ್ತಿ ಬರುತ್ತದೆ ಎಂಬ ನಂಬಿಕೆ ಇದೆ ಎಂದರು.
ಫೋಟೋ: ಬಂಗಾರಪೇಟೆ ತಾಲೂಕಿನ ಕೆಪಿಎಸ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ತಹಸೀಲ್ದಾರ್ ವೆಂಕಟೇಶಪ್ಪ ಪಾಠ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.