ಹಣದ ಬೆನ್ನತ್ತಿ ಹೋದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗದು

KannadaprabhaNewsNetwork |  
Published : Jun 13, 2026, 01:15 AM IST
೧೨ಕೆಎಲ್‌ಆರ್-೪ಕೋಲಾರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ವಿಶ್ವ ಬಾಲ ಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ನೀಲಾಚಾರಿ ಬಡಿಗೆರ್ ಚಾಲನೆ ನೀಡುತ್ತಿರುವುದು. | Kannada Prabha

ಸಾರಾಂಶ

ಹಣದ ಬೆನ್ನತ್ತಿ ಹೋದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳಬೇಕಾಗುವುದು. ಜೀವನದಲ್ಲಿ ಶಾಂತಿ, ತಾಳ್ಮೆ ಮುಖ್ಯ. ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು, ಯಾರಿಂದ ಬೇಕಾದರೂ ತಪ್ಪಿಸಿ ಕೊಂಡರೂ ಭಗವಂತನಿಂದ ಮಾತ್ರ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ಆತ್ಮಸಾಕ್ಷಿಯೇ ದೇವರು, ಆತ್ಮಸಾಕ್ಷಿಗಿಂತ ಮತ್ತೊಂದು ಸಾಕ್ಷಿ ಅಗತ್ಯವಿಲ್ಲ, ಜೀವನದಲ್ಲಿ ಸಿಹಿ, ಕಹಿ ಎರಡು ನಿಮ್ಮ ಕೈಯಲ್ಲಿದೆ

ಕನ್ನಡಪ್ರಭ ವಾರ್ತೆ ಕೋಲಾರ

ಮಕ್ಕಳು ದೇಶದ ಆಸ್ತಿ, ಸಮಾಜದ ಭವಿಷ್ಯದ ನಿರ್ಮಾತೃರು. ಪೋಷಕರು ಮಕ್ಕಳನ್ನು ದುಡಿಮೆಗೆ ನೂಕದೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜ ಮುಖಿಗಳಾಗಿ ಸೇವೆ ಸಲ್ಲಿಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ನೀಲಾಚಾರಿ ಬಡಿಗೇರ್ ಕರೆ ನೀಡಿದರು.

ನಗರದ ಟಿ. ಚೆನ್ನಯ್ಯ ರಂಗಮಂದಿರದಲ್ಲಿ ವಿಶ್ವ ಬಾಲ ಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರವು ಮಕ್ಕಳಿಗೆ ನೀಡುವ ಸೌಲಭ್ಯಗಳು ಈ ಹಿಂದೆ ನೀಡುತ್ತಿರಲಿಲ್ಲ, ಮಕ್ಕಳು ಸರ್ಕಾರ ನೀಡುವ ಸೌಲಭ್ಯ ಸದ್ಬಳಿಸಿಕೊಂಡು ಜೀವನದಲ್ಲಿ ನಿಮ್ಮ ಪೋಷಕರು ಕಂಡ ಕನಸುಗಳು ನೀವು ಹೊಂದಿರುವ ಗುರಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.

ಹಣದ ಬೆನ್ನತ್ತಿ ಹೋದರೆ ಜೀವನದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳಬೇಕಾಗುವುದು. ಜೀವನದಲ್ಲಿ ಶಾಂತಿ, ತಾಳ್ಮೆ ಮುಖ್ಯ. ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು, ಯಾರಿಂದ ಬೇಕಾದರೂ ತಪ್ಪಿಸಿ ಕೊಂಡರೂ ಭಗವಂತನಿಂದ ಮಾತ್ರ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ, ಆತ್ಮಸಾಕ್ಷಿಯೇ ದೇವರು, ಆತ್ಮಸಾಕ್ಷಿಗಿಂತ ಮತ್ತೊಂದು ಸಾಕ್ಷಿ ಅಗತ್ಯವಿಲ್ಲ, ಜೀವನದಲ್ಲಿ ಸಿಹಿ, ಕಹಿ ಎರಡು ನಿಮ್ಮ ಕೈಯಲ್ಲಿದೆ ಎಂದು ತಿಳಿಸಿದರು.

ಜಿಪಂ ಯೋಜನಾ ನಿರ್ದೇಶಕ ರವಿಚಂದ್ರನ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಶ್ರೀನಿವಾಸ್, ಕಾರ್ಮಿಕ ಇಲಾಖೆಯ ಯೋಜನಾ ನಿರ್ದೇಶಕಿ ಶೃತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ, ಗಮಹ ಸಂಸ್ಥೆಯ ಆಂದ್ರಹಳ್ಳಿ ಶಾಂತಮ್ಮ, ಕಾರ್ಮಿಕ ಇಲಾಖೆಯ ನಿರೀಕ್ಷಕಿ ಆಶಾರಾಣಿ, ಬಾಲ ಕಾರ್ಮಿಕ ನಿಯಂತ್ರಣಾಧಿಕಾರಿ ಚೇತನ, ಸಂಪನ್ಮೂಲ ವ್ಯಕ್ತಿ ಸತೀಶ್ ಇದ್ದರು.

ಜಾನಪದ ಕಲಾವಿದರಾದ ಮಾರುತಿ ಹಾಗೂ ರವಿಚಂದ್ರ ತಂಡದಿಂದ ವಿವಿಧ ಗೀತೆಗಳು ನಾಡಗೀತೆ. ಕೊಂಡರಾಜನಹಳ್ಳಿ ಮಂಜುಳ ನಿರೂಪಣೆ, ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮೀ.ಆರ್ ಪ್ರತಿಜ್ಞಾವಿಧಿ ಬೋಧಿಸಿ, ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಪಟೂರಿನಲ್ಲಿ ರಾತ್ರಿಯೇ ಸ್ವಚ್ಛವಾಗಲಿದೆ ನಗರ
ಕುಡಿವ ನೀರು ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳೇ ಹೊಣೆ