ಕರಾವಳಿಯ 'ಗಟ್ಟಿ ಚಿನ್ನ' ಕಲ್ಲು ಜೆಂಜಿ: ಪದಾರ್ಥ ಘಮಘಮ, ಆದಾಯ ಅನುಪಮ!

Published : Jun 12, 2026, 12:35 PM IST
Crab

ಸಾರಾಂಶ

ಕರಾವಳಿ ಅಂದ್ರೆ 'ಮೀನು ಸಹಿತ ಇತರ ಸೀಫುಡ್ ಸ್ವರ್ಗ.' ಅದ್ರಲ್ಲೂ ಸೀಫುಡ್ ಪ್ರಿಯರ ನೆಚ್ಚಿನ ತಿನಿಸು ಅಂದ್ರೆ 'ಕಲ್ಲು ಜೆಂಜಿ, ಕಲ್ಲು ಏಡಿ' ಅಥವಾ 'ಮಡ್ ಕ್ರಾಬ್'. ಇಂಗ್ಲಿಷ್‌ನಲ್ಲಿ Scylla serrata ಅಂತ ಕರೆಯೋ ಈ ಏಡಿ, ರುಚಿಯಲ್ಲಿ ಬೇರೆ ಏಡಿಗಳಿಗಿಂತಲೂ ಸೂಪರ್.

ಮಂಗಳೂರು: ಕರಾವಳಿ ಅಂದ್ರೆ 'ಮೀನು ಸಹಿತ ಇತರ ಸೀಫುಡ್ ಸ್ವರ್ಗ.' ಅದ್ರಲ್ಲೂ ಸೀಫುಡ್ ಪ್ರಿಯರ ನೆಚ್ಚಿನ ತಿನಿಸು ಅಂದ್ರೆ 'ಕಲ್ಲು ಜೆಂಜಿ, ಕಲ್ಲು ಏಡಿ' ಅಥವಾ 'ಮಡ್ ಕ್ರಾಬ್'. ಇಂಗ್ಲಿಷ್‌ನಲ್ಲಿ Scylla serrata ಅಂತ ಕರೆಯೋ ಈ ಏಡಿ, ರುಚಿಯಲ್ಲಿ ಬೇರೆ ಏಡಿಗಳಿಗಿಂತಲೂ ಸೂಪರ್.

ಕಲ್ಲು ಜೆಂಜಿ ಮುಖ್ಯವಾಗಿ ಕರಾವಳಿಯ ಹಿನ್ನೀರು, ನದಿ- ಸಮುದ್ರ ಸೇರುವ ಅಳಿವೆ ಪ್ರದೇಶ, ಮ್ಯಾಂಗ್ರೋವ್(ಕಾಂಡ್ಲಾ) ಕಾಡುಗಳಲ್ಲಿ ಸಿಗುತ್ತೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ನದಿ ಮುಖಜ ಭೂಮಿ ಆವಾಸ ಸ್ಥಾನ. ಮಣ್ಣಿನಲ್ಲಿ ಬಿಲ ಮಾಡಿಕೊಂಡು ಇರೋದ್ರಿಂದ 'ಮಡ್ ಕ್ರಾಬ್' ಅಂತ ಹೆಸರು.

ಹೆಸರೇ ಹೇಳೋ ಹಾಗೆ ಇದರ ಚಿಪ್ಪು ಕಲ್ಲಿನಂತೆ ಗಟ್ಟಿ. ಅದಕ್ಕೆ 'ಕಲ್ಲು ಜೆಂಜಿ' ಅಂತ ಹೆಸರು.1 ಕೆ.ಜಿ.ಯಿಂದ 2-3 ಕೆ.ಜಿ.ವರೆಗೂ ಬೆಳೆಯುತ್ತೆ. 1 ಕೆ.ಜಿ. ಮೇಲಿನ ಜೆಂಜಿಗೆ ಮಾರ್ಕೆಟ್‌ನಲ್ಲಿ ಭಾರೀ ಡಿಮ್ಯಾಂಡ್. ಈ ಜೆಂಜಿ ಮಾಂಸ ಹದವರಿತ ಗಟ್ಟಿ, ಸಿಹಿ ಮತ್ತು ರಸಭರಿತ. ಅದ್ರಲ್ಲೂ ಕೊಂಡಿ (ಕಾಲು) ಗಳಲ್ಲಿರೋ ಮಾಂಸಕ್ಕೆ ಫ್ಯಾನ್ಸ್ ಜಾಸ್ತಿ. ಗಾತ್ರ ಮತ್ತು ಸೀಸನ್ ಮೇಲೆ ಬೆಲೆ ನಿಗದಿ. 1 ಕೆ.ಜಿ.ಗೆ ₹800 ರಿಂದ ₹2500 ವರೆಗೂ ಮಾರಾಟವಾಗುತ್ತೆ. ಕ್ವಾಲಿಟಿಗೆ ತಕ್ಕಂತೆ ಬೆಲೆ ನಿಗದಿ ಆಗುತ್ತಿರುತ್ತವೆ. ವಿದೇಶಗಳಿಗೆ ರಫ್ತು ಕೂಡ ಆಗುತ್ತೆ.

ಕರಾವಳಿ ಸ್ಟೈಲ್ ಅಡುಗೆ ಕಲ್ಲು ಜೆಂಜಿ ಸುಕ್ಕ, ಜೆಂಜಿ ಘೀ ರೋಸ್ಟ್, ಜೆಂಜಿ ಗಸಿ ಕರಾವಳಿಯ ಸಿಗ್ನೇಚರ್ ಡಿಶ್‌ಗಳು. ತೆಂಗಿನ ತುರಿ, ಹುಳಿ, ಖಾರ ಮಸಾಲೆ ಹಾಕಿ ಮಾಡೋ ಗಸಿ ಜೊತೆ ಬಿಸಿ ಅನ್ನದ ಊಟ ನಳಪಾಕವೇ ಸರಿ. ಮಳೆಗಾಲದಲ್ಲಂತೂ ಈ ಏಡಿ ರುಚಿ ಇನ್ನೂ ಹೆಚ್ಚು.

ಹಲವಾರು ಆರೋಗ್ಯ ಲಾಭ ಈ 'ಸ್ಪೆಷಲ್ ಏಡಿ'ಯಲ್ಲಿ ಪ್ರೋಟೀನ್, ಒಮೆಗಾ-3 ಫ್ಯಾಟಿ ಆ್ಯಸಿಡ್, ಜಿಂಕ್, ಸೆಲೆನಿಯಂ ಜಾಸ್ತಿ ಇದೆ. ಕಡಿಮೆ ಕೊಬ್ಬು ಇರೋದ್ರಿಂದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಈ ಕಲ್ಲು ಜೆಂಜಿಯ ಕಾಲಿನ ಸೂಪ್ ಅಂತೂ ಬಲು ಸೂಪರ್ ಮಾರ್ರೆ.

ಮಳೆಗಾಲದಲ್ಲಿ ಶಿಕಾರಿ ಭರ್ಜರಿ

"ಕಲ್ಲು ಜೆಂಜಿಗಳನ್ನೇ ಹಿಡಿಯುವ ವಿಶೇಷ ಬಲೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಳೆಗಾಲದ ಸುಮಾರು ಒಂದು ತಿಂಗಳವರೆಗೆ ಕಲ್ಲುಜೆಂಜಿಗಳು ಭರಪೂರ ಸಿಗುತ್ತವೆ" ಎಂದು ಸಾಂಪ್ರದಾಯಿಕ ನಾಡದೋಣಿ ಮೀನುಗಾರ, ಮಾಜಿ ಕ್ರೀಡಾಪಟು 65ರ ಹರೆಯದ ಬೆಂಗ್ರೆಯ ಮಿತ್ತಮನೆ ಸುಭಾಸ್ ಸಾಲ್ಯಾನ್ ತಿಳಿಸಿದರು.

-ಮನೋಜ್ ಕೆ.ಬೆಂಗ್ರೆ, ಮಂಗಳೂರು

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ತಿಮರೋಡಿಯಿಂದ ₹50 ಲಕ್ಷದ ಆಮಿಷ : ಚಿನ್ನಯ್ಯ
ಧರ್ಮಸ್ಥಳ ವಿರುದ್ಧ ಷಡ್ಯಂತ್ರಕ್ಕೆ ₹200 ಕೋಟಿ ಬಜೆಟ್‌ : ಮಾಸ್ಕ್‌ಮ್ಯಾನ್‌ ಚಿನ್ನಯ್ಯ!