ಮಹಿಳೆಯರ ಸಿಂದೂರ ಅಳಿಸಲು ಬಂದರೆ ಬಿಡುವುದಿಲ್ಲ

KannadaprabhaNewsNetwork |  
Published : May 27, 2025, 01:03 AM IST
ತಿರಂಗ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು | Kannada Prabha

ಸಾರಾಂಶ

ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಭಾರತವು ಸನಾತನ ಹಿಂದೂ ರಾಷ್ಟ್ರವಾಗಿದ್ದು, 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದ್ದು, ಭಾರತವು ಇದುವರೆಗೂ ಯಾವ ದೇಶದ ಮೇಲು ದಂಡೆತ್ತಿ ಯುದ್ಧಕ್ಕೆ ಹೋದ ಉದಾಹರಣೆಗಳಿಲ್ಲ. ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಇಂದು ನಮ್ಮ ಭಾರತೀಯ ಮಹಿಳೆಯರ ಸಿಂದೂರವನ್ನು ಅಳಿಸಲು ಬಂದರೆ ಬಿಡುವುದಿಲ್ಲ ಎಂಬ ಪ್ರತ್ಯುತ್ತರವನ್ನು,ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನಮ್ಮ ದೇಶದ ಹೆಮ್ಮೆಯ ಸೈನಿಕರು, ಆಪರೇಷನ್ ಸಿಂದೂರದ ಮೂಲಕ ತಕ್ಕ ಉತ್ತರವನ್ನು ಕೊಟ್ಟು ನಮ್ಮರಾಷ್ಟ್ರ ಎಂಬುದನ್ನು ನಿರೂಪಿಸಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

ಆಪರೇಷನ್ ಸಿಂದೂರ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶ ರಕ್ಷಣೆಗಾಗಿ ನಾಗರಿಕರು ಎಂಬ ಧ್ಯೇಯದೊಂದಿಗೆ ಶಾಸಕ ಸಿಮೆಂಟ್ ಮಂಜು ಹಾಗೂ ಮಠಾಧೀಶರ ನೇತೃತ್ವದಲ್ಲಿ ಕೆಇಬಿ ಸರ್ಕಲ್‌ನಿಂದ ವೀರಶೈವ ಕಲ್ಯಾಣ ಮಂಟಪದವರೆಗೂ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಒಂದು ಕಿಲೋಮೀಟರ್ ಉದ್ದದ ಬಾವುಟವನ್ನು ಮಾಜಿ ಸೈನಿಕರು, ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಮುಖಂಡರು ಮಠಾಧೀಶರು, ಹಿಡಿದು ಮೆರವಣಿಗೆ ನಡೆಸಿದರು.

ತಿರಂಗಾ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು ಭಾರತವು ಸನಾತನ ಹಿಂದೂ ರಾಷ್ಟ್ರವಾಗಿದ್ದು, 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ, ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿದ್ದು, ಭಾರತವು ಇದುವರೆಗೂ ಯಾವ ದೇಶದ ಮೇಲು ದಂಡೆತ್ತಿ ಯುದ್ಧಕ್ಕೆ ಹೋದ ಉದಾಹರಣೆಗಳಿಲ್ಲ. ಆದರೆ ಶತ್ರು ರಾಷ್ಟ್ರ ಪಾಕಿಸ್ತಾನ ಇಂದು ನಮ್ಮ ಭಾರತೀಯ ಮಹಿಳೆಯರ ಸಿಂದೂರವನ್ನು ಅಳಿಸಲು ಬಂದರೆ ಬಿಡುವುದಿಲ್ಲ ಎಂಬ ಪ್ರತ್ಯುತ್ತರವನ್ನು,ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ನಮ್ಮ ದೇಶದ ಹೆಮ್ಮೆಯ ಸೈನಿಕರು, ಆಪರೇಷನ್ ಸಿಂದೂರದ ಮೂಲಕ ತಕ್ಕ ಉತ್ತರವನ್ನು ಕೊಟ್ಟು ನಮ್ಮರಾಷ್ಟ್ರ ಎಂಬುದನ್ನು ನಿರೂಪಿಸಿದೆ ಎಂದರು.

ಕಾರ್ಜುವಳ್ಳಿ ಸ್ವಾಮೀಜಿ ಮಾತನಾಡಿ, ಅಮೆರಿಕದಷ್ಟೇ ಭಾರತ ದೇಶವು ಇಂದು ಒಂದು ಸದೃಢ ರಾಷ್ಟ್ರವಾಗಿದ್ದು, ಯುದ್ಧಕ್ಕೆ ಬೇಕಾದ ಎಲ್ಲಾ ರೀತಿಯ ತಾಂತ್ರಿಕ ತಂತ್ರಜ್ಞಾನವನ್ನು ಹೊಂದಿದೆ. ಭಾರತದ ರಕ್ಷಣೆಗಾಗಿ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸೈನಿಕ ತಯಾರಾಗಬೇಕು. ದೇಶ ಗಟ್ಟಿ ಇರಬೇಕಾದರೆ ದೇಶದ ಗಡಿ ಗಟ್ಟಿ ಇರಬೇಕು. ಗಡಿ ಗಟ್ಟಿ ಇದ್ದರೆ ನಮ್ಮ ದೇಶದ ಹೆಮ್ಮೆಯ ಸೈನಿಕರು ಗಟ್ಟಿ ಇರಬೇಕೆಂದು ನಾವೆಲ್ಲರೂ ಭಗವಂತನನ್ನು ಪೂಜಿಸುತ್ತೇವೆ. ಆದರೆ ಇಂದು ದೇಶವನ್ನು ಕಾಯುವ ನಮ್ಮ ಸೈನಿಕರಿಗೆ ನೈತಿಕ ಹಾಗೂ ಭೌತಿಕ ಶಕ್ತಿಯನ್ನು ಕೊಡುವಂತೆ ಸಂಕಲ್ಪ ಮಾಡಬೇಕಾಗಿದೆ ಎಂದರು.

ನಾವು ದೇಶದ ಬಗ್ಗೆ ಗಟ್ಟಿಯಾಗಿ ನಿಂತು ಮಾತನಾಡುತ್ತಿದ್ದೇವೆ ಎಂದರೆ ಅದಕ್ಕೆ ಸೈನಿಕರು ಕಾರಣ ಶತ್ರು ರಾಷ್ಟ್ರ ಪಾಕಿಸ್ತಾನ ಆಣುಬಾಂಬಿದೆ ಎಂದು ಹೇಳಿ ತನ್ನ ದೇಶವನ್ನೇ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದ ಮೇಲೆ ನಮ್ಮ ರಾಷ್ಟ್ರ ಎಷ್ಟು ಬಲಿಷ್ಠವಾಗಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಪಾಕಿಸ್ತಾನದ ಅಧಿಕಾರಿಗಳು, ಜನಪ್ರತಿನಿಧಿಗಳು ಭಾರತದ ಮುಂದೆ ಮಂಡಿಯೂರಿ ನಿಲ್ಲುವಂತೆ ಮಾಡಿದ್ದಾರೆ ಹಾಗೂ ಯುದ್ಧ ವಿರಾಮ ಘೋಷಣೆ ಮಾಡಬೇಕು ಎಂದು ಅಂಗಲಾಚಿದಕ್ಕಾಗಿ ಯುದ್ಧವನ್ನು ನಿಲ್ಲಿಸಬೇಕಾಯಿತು ಎಂದರು.

ಮೆರವಣಿಗೆಯಲ್ಲಿ ಭಾರತದ ಸೈನಿಕರಿಗೆ ಜೈಕಾರ ಹಾಕುವ ಮೂಲಕ ಸುಮಾರು ಒಂದು ಕಿಲೋಮೀಟರ್ ಉದ್ದದ ಬಾವುಟವನ್ನು ಸೈನಿಕರು,ಕಾಲೇಜು ವಿದ್ಯಾರ್ಥಿಗಳು, ವಿವಿಧ ಸಂಘಸಂಸ್ಥೆಗಳ ಮುಖಂಡರು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ಬಂಧುಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಪರೇಷನ್ ಸಿಂದೂರ ತಿರಂಗಾ ಯಾತ್ರೆಯನ್ನು ನಡೆಸಲಾಯಿತು.

ಬಿಜೆಪಿ ತಾಲೂಕು ಅಧ್ಯಕ್ಷೆ ಉಮಾ ರವಿ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷ ತಾಹಿರಾಬೇಗಂ, ಹಿರಿಯ ಮುಖಂಡರಾದ ಧರ್ಮ, ಅಜಿತ್ ಚಿಕ್ಕಣಗಾಲು, ರಮೇಶ್, ಕಣಗಾಲ್ ಲೋಕೇಶ್, ಭರಣ್, ರುದ್ರೇಶ್, ಹನುಮಂತೇಗೌಡ, ಜೆಸಿಬಿ ರವಿ, ವೆಂಕಟೇಶ,ದಡದಲ್ಲಿ ನವೀನ್, ಮೋಹನ್, ಕಟ್ಟೆಗದ್ದೆ ನಾಗರಾಜ್, ಲೋಹಿತ್‌ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ