ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಾಲೆ, ಹಾಸ್ಟೆಲ್ ಎಲ್ಲಿ ಅವಶ್ಯಕತೆ ಇರುತ್ತದೆ ಅಲ್ಲಿ ಆರಂಭಿಸಿರಿ. ಅದನ್ನು ಬಿಟ್ಟು ಇದರಲ್ಲಿ ರಾಜಕಾರಣ ಮಾಡಬೇಡಿ. ಸರ್ಕಾರ ಬರುತ್ತವೆ, ಹೋಗುತ್ತವೆ. ಹೀಗಾಗಿ ಎಲ್ಲ ಕ್ಷೇತ್ರಗಳಿಗೂ ಸಮಾನ ಹಂಚಿಕೆ ಆಗಲಿ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.ನೀವು ಸರ್ಕಾರ ನಡೆಸಿದ್ದೀರಿ. ನಿಮಗೆ ಅನುಭವ ಇದೆ. ಆ ಅನುಭವವನ್ನು ನಮಗೆ ಹೇಳುತ್ತಿದ್ದೀರಿ. ನಿಮ್ಮ ದಾರಿಯಲ್ಲಿ ನಾವು ಸಾಗಿದ್ದೇವೆ. ಆದರೂ ತಮ್ಮ ಸಲಹೆಯನ್ನು ಸ್ವೀಕರಿಸುತ್ತೇವೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವ ಆರ್.ಬಿ.ತಿಮ್ಮಾಪುರ ಶಾಸಕ ಸಿದ್ದು ಸವದಿ ಅವರ ಕಾಲೇಳೆದರು.
ನಮ್ಮ ಅನುಭವವನ್ನು ನಿಮಗೆ ಹೇಳಿದ್ದು. ಅದಕ್ಕೆ ನಮ್ಮನ್ನು ವಿಪಕ್ಷ ಸ್ಥಾನದಲ್ಲಿ ಕೂಡಿಸಿದ್ದಾರೆ. ಹೀಗೆಯೇ ಮಾಡಿದರೆ ನೀವು ಸಹ ಅದೇ ವಿಪಕ್ಷ ಸ್ಥಾನಕ್ಕೆ ಬರುತ್ತೀರಿ ಎಂದು ಎಚ್ಚರಿಸಿದರು.ಶಾಸಕರಿಗೆ ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ಇರುವ ಕಾಳಜಿಗೆ ನಾವು ಥ್ಯಾಂಕ್ಸ್ ಹೇಳುತ್ತೇವೆ ಎಂದು ಸಚಿವ ತಿಮ್ಮಾಪುರ ಕೊಟ್ಟ ಟಾಂಗ್ಗೆ ತಿರುಗೇಟು ನೀಡಿದ ಶಾಸಕ ಸಿದ್ದು ಸವದಿ, ನಮ್ಮ ಕೆಲಸ ಮಾಡಿ ಥ್ಯಾಂಕ್ಸ್ ಹೇಳ್ರಿ, ನಿಮ್ಮ ಬರೀ ಥ್ಯಾಂಕ್ಸ್ ನಮಗೆ ಬೇಡ ಎಂದರು.ಹೌದು, ಹೀಗೆ ಸಚಿವ ತಿಮ್ಮಾಪುರ ಹಾಗೂ ಶಾಸಕ ಸವದಿ ನಡುವಿನ ಹಾಸ್ಯರೂಪದ ಮಾತಿನ ಜುಗಲ್ಬಂ ನಡೆದಿದ್ದು, ಮಂಗಳವಾರ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಭವನದಲ್ಲಿ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಾಸಕ ಸಿದ್ದು ಸವದಿ ಪ್ರತಿನಿಧಿಸುವ ತೇರದಾಳ ಕ್ಷೇತ್ರಕ್ಕೆ ಹಾಸ್ಟೆಲ್ ಅವಶ್ಯ ಇದ್ದರೂ ಅಲ್ಲಿಗೆ ಮಂಜೂರು ಮಾಡದೇ ಬೇರೆ ಕ್ಷೇತ್ರಕ್ಕೆ ನೀಡಿದ್ದಾರಂತೆ. ಹಾಗೆಯೇ ಪಬ್ಲಿಕ್ ಸ್ಕೂಲ್‌ಗಳನ್ನು ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಿಗೆ 3 ಶಾಲೆ, ಬಿಜೆಪಿ ಶಾಸಕರು ಇರುವ ತೇರದಾಳ ಮತ್ತು ಜಮಖಂಡಿ ಕ್ಷೇತ್ರಗಳಿಗೆ 2 ಶಾಲೆಗಳನ್ನು ಹಂಚಿಕೆ ಮಾಡಿದ್ದು, ಇದು ತಾರತಮ್ಯೆ ಎಂದು ಈ ಚರ್ಚೆಗೆ ನಾಂದಿ ಹಾಡಿತು.ಜೈನರು ಅಲ್ಪಸಂಖ್ಯಾತರಲ್ಲವೆ?ಇನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುಪಾಲನಾ ವರದಿ ಪರಿಶೀಲನೆ ವೇಳೆ ತೇರದಾಳ ಶಾಸಕ ಸಿದ್ದು ಸವದಿ ಅವರು ಅಲ್ಪಸಂಖ್ಯಾತರಲ್ಲಿ ಜೈನರು ಬರುವುದಿಲ್ಲವೆ ಎಂದು ಪ್ರಶ್ನೆ ಮಾಡಿದರು. ಮುಸ್ಲಿಂ, ಜೈನ್, ಕ್ರಿಶ್ವನ್ ಸೇರಿದಂತೆ 6 ಧರ್ಮಗಳು ಬರುತ್ತವೆ ಎನ್ನುವ ಉತ್ತರ ಬಂತು. ಹಾಗಿದ್ದರೆ ತೇರದಾಳ ಕ್ಷೇತ್ರದಲ್ಲಿ ಜೈನರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಇಲಾಖೆಯ ವಸತಿ ಶಾಲೆಗಳಲ್ಲಿ ಜೈನ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿಲಾಗಿದೆ. ಮುಸ್ಲಿಂ ವಿದ್ಯಾಥರ್ಿಗಳಿಗೆ ಮೀಸಲಿವೆ ಎಂದು ವಾಪಸ್ಸು ಕಳಿಸಿದ್ದೇಕೆ ಎಂದು ಶಾಸಕರು ಸಚಿವ ತಿಮ್ಮಾಪುರ ಗಮನಕ್ಕೆ ತಂದರು.ಜನಸಂಖ್ಯೆ ಅನುಗುಣವಾಗಿ ಸೀಟುಗಳು ಹಂಚಿಕೆ ಆಗಿರುತ್ತವೆ ಎಂದು ಅಕಾರಿ ಸಚಿವರ ಗಮನಕ್ಕೆ ತಂದರು. ಜೈನ್ ಧರ್ಮದ ಎಷ್ಟು ವಿದ್ಯಾರ್ಥಿಗಳು ಅರ್ಜಿ ಹಾಕಿದ್ದಾರೆ. ಅದರಲ್ಲಿ ಎಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದು, ಎಷ್ಟು ವಿದ್ಯಾರ್ಥಿಗಳ ಅರ್ಜಿ ತೀರಸ್ಕರಿಸಿದ್ದೀರಿ ಎನ್ನುವ ಅಂಕಿ ಅಂಶವನ್ನು ಶಾಸಕರಿಗೆ ಒದಗಿಸಿ ಎಂದು ನಿರ್ದೇಶನ ನೀಡಿದರು. ಇದಕ್ಕೆ ಶಾಸಕ ಜೆ.ಟಿ.ಪಾಟೀಲ ಅವರು ಸಹ ಧ್ವನಿಗೂಡಿಸಿ, ಆ ಕ್ಷೇತ್ರದಲ್ಲಿ ಜೈನ್ ಸಮಾಜದವರು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಅವಕಾಶ ಸಿಗಬೇಕು ಎಂದರು.