ಪಿಯು ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಇನ್‌ಸ್ಪೈರ್‌ ಎಕ್ಸ್ ಕಾರ್ಯಕ್ರಮ

KannadaprabhaNewsNetwork |  
Published : Nov 26, 2025, 03:00 AM IST
ಕಾರ್ಕಳ ಮಂಜುನಾ,ಥ ಪೈ ಸ್ಮಾರಕ ,ಸರಕಾರಿ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಇನ್ಸೈರ್ ಎಕ್ಸ್  ಕಾರ್ಯಕ್ರಮ | Kannada Prabha

ಸಾರಾಂಶ

ಕಾರ್ಕಳ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಫೆಸ್ಟ್ ಇನ್ಸ್ ಪೈರ್ ಎಕ್ಸ್ ಕಾರ್ಯಕ್ರಮ ನ.21 ರಂದು ನಡೆಯಿತು.

ಕಾರ್ಕಳ: ಇಲ್ಲಿನ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರ ಕಾಲೇಜು ಫೆಸ್ಟ್ ಇನ್ಸ್ ಪೈರ್ ಎಕ್ಸ್ ಕಾರ್ಯಕ್ರಮ ನ.21 ರಂದು ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಮತ್ತು ಸಿ. ಡಿ.ಸಿ ಯ ಸದಸ್ಯರಾದ ಶ್ರೀವರ್ಮಾ ಅಜ್ರಿ ಮಾತನಾಡಿ, ಉನ್ನತ ಶಿಕ್ಷಣವನ್ನು ಪಡೆಯುದರ ಜೊತೆಗೆ ನಮ್ಮ ಬದುಕನ್ನು ನಾವೇ ರೂಪಿಸಿಕೊಳ್ಳಬೇಕು. ಅಂಕಗಳನ್ನು ಪಡೆಯುವುದು ಮಾತ್ರವಲ್ಲ, ಅದರ ಜೊತೆಗೆ‌ ಜೀವನಪಾಠಗಳನ್ನೂ ಕಲಿಯಬೇಕಿದೆ. ಬದುಕಿನಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದವರಿಗಿಂತಲೂ ಕನಿಷ್ಠ ಅಂಕಗಳನ್ನು ಪಡೆದವರೇ ಜೀವನದಲ್ಲಿ ಗೆದ್ದ ಉದಾಹರಣೆಗಳಿವೆ. ಹಾಗಾಗಿ ನಮ್ಮ ನಮ್ಮ ಪ್ರತಿಭೆಗಳನ್ನು ಶೈಕ್ಷಣಿಕ ಹಂತದಲ್ಲಿಯೇ ಪೋಷಿಸಿಕೊಳ್ಳಬೇಕಿದೆ‌. ಪಿಯುಸಿ ಶಿಕ್ಷಣದ ನಂತರ ಬರುವ ಪದವಿ ಶಿಕ್ಷಣ ಇಂತಹ ಪ್ರತಿಭೆಗಳಿಗೆ ವೇದಿಕೆ ನೀಡುತ್ತದೆ. ಅದನ್ನು ಚೆನ್ನಾಗಿ ಒಳಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಯ್ ಮತ್ತು ರಾಯ್ ಸಂಸ್ಥೆಯ ಪಾಲುದಾರರಾದ ಸಿ.ಎ.ರಾಯ್ ಸುದೀಪ್ ಡಿಸೋಜಾ ಅವರು ಮಾತನಾಡಿ, ನಮ್ಮ ಕಲಿಕೆಯ ಜೊತೆಗೆ, ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿಯೂ ಸೇವೆ ಸಲ್ಲಿಸಬೇಕಿದೆ. ಹರೆಯದಲ್ಲಿಯೇ ಶಿಕ್ಷಣದ ಜೊತೆಗೆ ಮೌಲ್ಯಗಳನ್ನೂ ರೂಢಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ ಅವರು ಮಾತನಾಡಿ, ಕಾಲೇಜು ಗುಣಮಟ್ಟದ ಶಿಕ್ಷಣದ ಜೊತೆಗೆ ಸೃಜನಶೀಲ ಚಟುವಟಿಕೆಗಳಿಗೂ ವೇದಿಕೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅವಕಾಶ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಇನ್ಸ್ಪೈರ್ ಎಕ್ಸ್ ನ ಸಂಯೋಜಕರಾದ ಮನೋಜ್ ಲೂಯಿಸ್ ಅಂಬ್ರೋಸ್ ಮತ್ತು ಡಾ. ಕೆ.ಸಿ ಸುಬ್ರಹ್ಮಣ್ಯ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಡಾ. ಚಂದ್ರಾವತಿ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಕಾರ್ಯದರ್ಶಿಗಳಾದ ಕಾರ್ತಿಕ್ ನಾಯಕ್, ಪ್ರಿಯಾ ರಿಶಾ, ಸೂರಜ್ ಮತ್ತು ವಿಖ್ಯಾತ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು. ಯಜ್ರೇಶ್ವರಿ ತಂಡದವರು ಪ್ರಾರ್ಥಿಸಿದರು. ಐ.ಕ್ಯೂ.ಎ.ಸಿ ಸಂಚಾಲಕರಾದ ವಿನಯ್ ಎಂ.ಸ್ ಸ್ವಾಗತಿಸಿದರು, ಸಾಂಸ್ಕೃತಿಕ ಸಂಘದ ಸಂಚಾಲಕರಾದ ಸೌಮ್ಯ ಎಚ್.ಕೆ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

10 ಪ್ಯಾರಾದಲ್ಲಿ ಕೇಂದ್ರ ವಿರುದ್ಧ ಟೀಕಾ ಪ್ರಹಾರ
ಬೇಡಿಕೆಗೆ ತಕ್ಕಷ್ಟು ಬರುತ್ತಿಲ್ಲ ಮೈಸೂರು ರೇಷ್ಮೆ ಸೀರೆ