ಬ್ಯಾಡಗಿ: ಹುಟ್ಟಿದ ಕೂಡಲೇ ಸ್ವಚ್ಛವಾಗಿದ್ದ ಮನಸ್ಸು, ಬೆಳೆದಂತೆ ಕಲುಷಿತಗೊಳ್ಳುತ್ತಿದೆ. ಇಂತಹ ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಬೇಕು, ಶರಣರು ಹೇಳಿದ ಸರಳ ಸೂತ್ರವನ್ನು ಅನುಸರಿಸಿದಲ್ಲಿ ಮನಸ್ಸು ಸ್ವಚ್ಛವಾಗಲಿದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ತಿಳಿಸಿದರು.
ತುಂಬಿಕೊಂಡು ಹೋದರ ಸಂಸಾರ, ತುಂಬಿದನ್ನ ಖಾಲಿ ಮಾಡಕೊಂಡು ಹೋಗೋದ ಸನ್ಯಾಸ, ಇಷ್ಟೆ ಸಂಸಾರಕ್ಕೂ ಸನ್ಯಾಸಕ್ಕೂ ಇರುವ ವ್ಯತ್ಯಾಸ. ಸಂಸಾರದ ಜಂಜಾಟಗಳಲ್ಲಿ ಸಿಲುಕಿ ನಲುಗುತ್ತಿರುವ ಮನಸ್ಸನ್ನು ಖಾಲಿ ಮಾಡುವುದು ಆಧ್ಯಾತ್ಮವೇ ಹೊರತು ಬೇರೆ ಯಾವುದರಿಂದಲೂ ಸಾಧ್ಯವಿಲ್ಲ ಎಂದರು. ಇಂದಿನ ಕಾಲದಲ್ಲಿ ಹೊಟೆಲ್ ಮ್ಯಾನೇಜಮೆಂಟ್, ಆ ಮ್ಯಾನೇಜಮೆಂಟ್, ಈ ಮ್ಯಾನೇಜಮೆಂಟ್ ಅಂತ ಕಟ್ಟಿದರ ಹಿಂದಿನ ಕಾಲದಲ್ಲಿ ಶರಣರು ಮನಸ್ಸನ್ನು ಶುದ್ಧಿಕರಿಸುವ ಮೈಂಡ್ ಮಾನೇಜ್ ಮೆಂಟ್ ಕಟ್ಯಾರ, ಅದಕ್ಕೆ ಶರಣರ ಸಂಗ ನಮ್ಮ ಹೊಲಸು ತುಂಬಿದ ಮನಸ್ಸು ಸ್ವಚ್ಛ ಮಾಡೋದಕ್ಕ ಇರುವ ಸುಲಭ ಮಾರ್ಗ ಈ ಮಾರ್ಗದಲ್ಲಿ ನಡೆಯೋದನ್ನ ನಾವೆಲ್ಲರೂ ಕಲಿಯಬೇಕಾಗಿದೆ ಎಂದರು.
ಒಳ್ಳೆಯ ಜನರು ಯಾವುದೇ ಹಣ ಅಧಿಕಾರದಿಂದ ಸಿಗಲ್ಲ, ಅದೃಷ್ಟದಿಂದ ಸಿಗತಾರ. ಅದಕ್ಕೆ ನಮಗೆಲ್ಲ ಒಳ್ಳೆಯ ಜನರ ಸಂಗ ಅತ್ಯಂತ ಅವಶ್ಯವಿದೆ, ಒಳ್ಳೆಯವರು ಸಿಕ್ಕರ ಅವರು ಯಾವ ಜಾತಿ, ಧರ್ಮ, ಬಡವ ಬಲ್ಲಿದ ಅಂತ ನೋಡಬಾರದು. ಬದಲಾಗಿ ಅವರಿಂದ ಎಷ್ಟು ಒಳ್ಳೆ ಮಾತು ಸಿಗತಾವ ಅದನ್ನ ಜೀವನದಾಗ್ ಅಳವಡಿಸಿಕೊಳ್ಳಲು ಸಿಗತದ ಅನ್ನೋದ ಮಾತ್ರ ನೋಡಬೇಕು ಎಂದರು.ಜ್ಞಾನವನ್ನು ಹಲವು ಶತಮಾನದಿಂದ ಶರಣರು ಸಂತರು ಜನರಿಗೆ ಧಾರೆ ಎರೆಯುವ ಕಾರ್ಯ ಮಾಡ್ಯಾರ, ಅದನ್ನ ಜೀವನದಾಗ ಅಳವಡಿಸಿಕೊಳ್ಳೋದ ಕಲಿಬೇಕ, ಅಂದಾಗ ಮನುಷ್ಯನ ಜೀವ ಸಾರ್ಥಕ ಆಗಲಿದೆ ಎಂದರು.