ಕನ್ನಡಪ್ರಭ ವಾರ್ತೆ ಇಳಕಲ್ಲ
ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘಧ ಆರ್.ವಿರಮಣಿ ಕ್ರಿಡಾಂಗಣದಲ್ಲಿ ಹುನಗುಂದ ಸ್ಫೋರ್ಟ್ಸ ಮತ್ತು ಕಲ್ಚರಲ್ ಅಸೋಸಿಯೇಶನ್ ಇಳಕಲ್ಲ ಹಾಗೂ ರಾಜ್ಯ ಟೆನಿಸ್‌ಬಾಲ್ ಕ್ರಿಕೆಟ್ ಅಸೋಸಿಯೇಶನ್ ಬೆಂಗಳೂರು ಇವರ ಸಹಯೋಗದಲ್ಲಿ ಇಳಕಲ್ಲ ಪ್ರೀಮಿಯರ್ ಲೀಗ್ -೨೦೨೫ ಐಪಿಎಲ್ ಸೀಜನ್-೮ರ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಇಂದಿನ ಯುವಕರೇ ಮುಂದಿನ ನಾಯಕರು, ಅಂತಾರಾಷ್ಟ್ರೀಯ ಮಟ್ಟದ ಆಟಗಾರರು. ಉತ್ತರ ಕರ್ನಾಟಕದ ಪ್ರತಿಭೆ ಹುಡುಕಲು ಈ ಕ್ರಿಕೆಟ್ ಪಂದ್ಯಾವಳಿ ಪ್ರತಿ ವರ್ಷ ಏರ್ಪಡಿಸುತ್ತ ಬಂದಿದ್ದೇವೆ. ಈ ಪಂದ್ಯಾವಳಿಯಲ್ಲಿ ೧೪ ತಂಡಗಳು ಭಾಗವಹಿಸಿ ೩೫ ದಿನದಲ್ಲಿ ೯೫ ಕ್ರಿಕೆಟ್ ಪಂದ್ಯಗಳನ್ನು ಆಡಲಿವೆ. ಪ್ರತಿಯೊಬ್ಬ ಆಟಗಾರ ಗೆಲ್ಲಲೇಬೇಕು ಎಂಬ ಛಲದೊಂದಿಗೆ ಒಗ್ಗಟ್ಟಿನಿಂದ ಹೋರಾಟ ನಡೆಸಿ ಟ್ರೋಫಿ ಪಡೆಯಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಚಲನಚಿತ್ರ ನಟ ಡಾಲಿ ಧನಂಜಯ, ನಟಿಯರಾದ ರಾಗಿಣಿ ತ್ರಿವೇದಿ, ಸಪ್ತಮಿಗೌಡ ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ರಾಜು ಬೋರಾ, ಶರಣಪ್ಪ ಆಮದಿಹಾಳ, ವೆಂಕಟೇಶ ಸಾಕಾ, ಅರುಣ ಬಿಜ್ಜಲ, ಅಬ್ದುಲ್ ರಜಾಕ್ ತಟಗಾರ, ಚನ್ನಪ್ಪ ನಾಡಗೌಡ, ಸಂಗಣ್ಣ ಒಲೆಕಾರ, ವಿಜಯಮಹಾಂತೇಶ ಗದ್ದನಕೇರಿ, ಮಹಾಂತೇಶ ಹನುಮನಾಳ ಇತರರು ಉಪಸ್ಥಿತರಿದ್ದರು.ಇದೇ ವೇಳೆ ೧೪ ಕ್ರಿಕೆಟ್ ತಂಡಗಳ ಮಾಲೀಕಾರದ ದೀಪಕ ರಾಠೋಡ, ನೀಲಪ್ಪ ತಪೇಲಿ, ಸಮೀರ್ ದೇಶಪಾಂಡೆ, ಮಹಾಂತೇಶ ಹೊಸೂರ, ಸಿ.ಎಂ.ಸಿ ಸದಸ್ಯರು, ಹಸನ್ ಗೋತಗಿ, ರಫೀಕ್ ಕೋಡಿಹಾಳ, ಅಂಬಣ್ಣ ಚಲವಾದಿ, ವಿಠಲ ಜಕ್ಕಾ, ಜಬ್ಬಾರ್ ಕಲಬುರ್ಗಿ, ಅಶೋಕ ಚಲವಾದಿ, ರಫೀಕ್ ಜಾಲಿಗಿಡದ, ಬಸವರಾಜ ಜಾಲಿಹಾಳ, ನಾಗರಾಜ ಪವಾರ ಇತರರು ಟ್ರೋಫಿ ಅನಾವರಣ ಮಾಡಿದರು. ಇಳಕಲ್ಲ ನಗರದ ಸ್ವರ ಸಿಂಧೂ ಮೇಲೋಡಿಯಸ್ ಹಾಗೂ ಮುದ್ದೆಬಿಹಾಳದ ಕಲಾ ಸಿಂಚನಾ ಮೇಲೋಡಿಯಸ್ ನವರು ಸಂಗೀತ ಸುಧೆ ಕಾರ್ಯಕ್ರಮ ನಡೆಸಿಕೊಟ್ಟರು.