ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಭಾನುವಾರ ಯಲ್ಲಟ್ಟಿ ಗ್ರಾಮದ ಕೊಣ್ಣೂರು ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನ ಕೊಣ್ಣೂರು ವಿಜ್ಞಾನ ಪಿಯು ಕಾಲೇಜಿನ ಆವರಣದಲ್ಲಿ ನಡೆದ ಶಿಕ್ಷಣ, ಮೌಲ್ಯ, ಅವಕಾಶ ಹಾಗೂ ಉಜ್ವಲ ಭವಿಷ್ಯದ ಸಂದೇಶ ಸಾರುವ ವಿಶೇಷ ಕಾರ್ಯಕ್ರಮದಲ್ಲಿ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನಸು ಕಂಡು, ಗುರಿ ಸಾಧಿಸಿ’ ಎಂಬ ಆಶಯದೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವೃತ್ತಿ ಯಾವುದೇ ಆಗಿರಲಿ, ಅದರಲ್ಲಿ ತಾದಾನ್ಮತೆ, ಸಮಯದ ಸದುಪಯೋಗ, ಅರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು. ಕನಸು ಕಂಡಾಗ ಅದನ್ನು ನನಸಾಗಿಸುವ ಪ್ರಯತ್ನವನ್ನು ತಮ್ಮಿಂದಲೇ ಆರಂಭಿಸಬೇಕು. ಕಬೀರರ ಜೀವನದ ಅನೇಕ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು.ಶಾಸಕ ಸಿದ್ದು ಸವದಿ ಮಾತನಾಡಿ, ಸಾಧನೆಗೆ ಕೇವಲ ಅಂಕಗಳೇ ಮುಖ್ಯವಲ್ಲ. ಗುಣಮಟ್ಟದ ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅದನ್ನು ಹೊರತರುವ ಕೆಲಸವಾಗಬೇಕು ಎಂದರು.
ಇದೇ ವೇಳೆ ಬಸವರಾಜ ಕೊಣ್ಣೂರ ಅವರ 61ನೇ ಜನ್ಮದಿನದ ನಿಮಿತ್ತ ಜಮಖಂಡಿ, ರಬಕವಿ ಬನಹಟ್ಟಿ ತಾಲೂಕಿನ ಆಯ್ದ ಶಾಲೆಗಳ ಪ್ರಾಧ್ಯಾಪಕರನ್ನು ಸನ್ಮಾನಿಸಿ ಗೌರವಿಸಲಾಯಿತು.