- ವರದಿ ಜಾರಿಗೊಳ್ಳುವುದರಿಂದ ಶೋಷಿತ ವರ್ಗಕ್ಕೆ ನ್ಯಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ಸಂವಿಧಾನಬದ್ಧವಾಗಿ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆ ವಿರೋಧಿಸುವವರಿಗೆ ರಾಜ್ಯದ ಅಹಿಂದ ವರ್ಗಗಳು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ, ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ. ವಿನಯಕುಮಾರ ಎಚ್ಚರಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ವರ ಸರ್ಕಾರ ಬಿಡುಗಡೆ ಮಾಡಿ, ಅಂಗೀಕರಿಸುವುದರಿಂದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದ ಶೋಷಿತ ಸಮುದಾಯಗಳಿಗೆ ನ್ಯಾಯ, ಅವಕಾಶ ಸಿಗುವ ನಿರೀಕ್ಷೆ ಇದೆ ಎಂದರು.
ಹೇಳಿಕೆಗೆ ಖಂಡನೆ- ಸ್ವಾಗತಾರ್ಹ:ವೀರಶೈವ ಲಿಂಗಾಯತರನ್ನು ಎದುರು ಹಾಕಿಕೊಂಡು ಹೇಗೆ ಸರ್ಕಾರ ನಡೆಸುತ್ತೀರಿ ಎಂಬುದಾಗಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ವಿವಾದಾತ್ಮಕ ಹೇಳಿಕೆಯನ್ನು ಸಚಿವರ ಪುತ್ರ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಹ ಖಂಡಿಸಿದ್ದು ಸ್ವಾಗತಾರ್ಹ. ಬಲಿಷ್ಠ ಜಾತಿಗಳೇ ಮೇಲುಗೈ ಸಾಧಿಸಿದರೆ ಶೋಷಿತರಿಗೆ ತೀವ್ರ ಅನ್ಯಾಯವಾಗಲಿದೆ. ಈಗಾಗಲೇ ಶೇ.22ರಷ್ಟು ಜನಸಂಖ್ಯೆ ಹೊಂದಿರುವ ಲಿಂಗಾಯತ- ಒಕ್ಕಲಿಗ ಸಮುದಾಯದ 135 ಶಾಸರರಿದ್ದು, ಶೇ.59 ಜನಸಂಖ್ಯೆಯ ಹಿಂದುಳಿದ ವರ್ಗದ ಕೇವಲ 21 ಶಾಸಕರಿದ್ದಾರೆ. ಈ ತಾರತಮ್ಯವೇ ಅಸಮಾನತೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಸ್ವಾಭಿಮಾನಿ ಬಳಗದಿಂದ ಮುಂದಿನ ದಿನಗಳಲ್ಲಿ ಮನೆ ಮನೆಗೆ ಅಂಬೇಡ್ಕರ್ ಮತ್ತು ಮನೆ ಮನೆಗೆ ಜ್ಯೋತಿ ಬಾಫುಲೆ ಹೆಸರಿನಲ್ಲಿ ಜಾಗೃತಿ ಮೂಡಿಸಲಾಗುವುದು. ನಮ್ಮ ಹೋರಾಟವು ಸಮಾನತೆ ಸಿಗುವವರೆಗೂ ನಿತ್ಯ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.ಬಳಗದ ರಾಜು ಪಾಟೀಲ್, ಎಚ್.ಸಿ.ಮಲ್ಲಪ್ಪ, ವಿರೂಪಾಕ್ಷಪ್ಪ, ಮಹಾಂತೇಶ, ಅಣ್ಣಪ್ಪ, ಮೈಲಪ್ಪ ಇತರರು ಇದ್ದರು.
- - -(ಕೋಟ್)
ನನ್ನನ್ನು ಹಾಗೂ ನನ್ನ ಮಾಲೀಕತ್ವದ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯನ್ನು ಗುರಿಯಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ದಾವಣಗೆರೆಯವರೇ ಹೀಗೆ ಟಾರ್ಗೆಟ್ ಮಾಡುತ್ತಿದ್ದಾರೆಂಬುದೂ ಗೊತ್ತಾಗಿದೆ. ನನಗೆ ಯಾವುದೇ ಅಪಾಯ, ಪ್ರಾಣಾಪಾಯವಾದರೂ ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸಿಯೇ ಸಿದ್ಧ. ಯಾವುದೇ ಕಾರಣಕ್ಕೂ ಪ್ರಾಣಕ್ಕೆ ಹೆದರುವವನೂ ನಾನಲ್ಲ.- ಜಿ.ಬಿ.ವಿನಯಕುಮಾರ, ಸಂಸ್ಥಾಪಕ, ಇನ್‌ಸೈಟ್ಸ್ ಐಎಎಸ್ ಸಂಸ್ಥೆ
- - --22ಕೆಡಿವಿಜಿ9:
ಸುದ್ದಿಗೋಷ್ಟಿಯಲ್ಲಿ ಜಿ.ಬಿ.ವಿನಯಕುಮಾರ ಮಾತನಾಡಿದರು.