ಹಸುಗಳನ್ನು ಸಾಕಿದರೆ ದೋಷಗಳು ದೂರು

KannadaprabhaNewsNetwork |  
Published : Feb 05, 2026, 04:30 AM IST
ಪ್ರತಿಷ್ಠಾಪನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಐಗಳಿ ಹಿಂದೂ ಧರ್ಮದಲ್ಲಿ ಗೋವುಗಳನ್ನು ಗೋಮಾತೆ ಎಂದು ಗೌರವಿಸಿ ಪೂಜಿಸಲಾಗುತ್ತಿದೆ. ಅವುಗಳಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಗೋವುಗಳನ್ನು ಸಾಕಬೇಕು ಎಂದು ಮಾಂಜರಿ-ಕೊಕಟನೂರ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಹಿಂದೂ ಧರ್ಮದಲ್ಲಿ ಗೋವುಗಳನ್ನು ಗೋಮಾತೆ ಎಂದು ಗೌರವಿಸಿ ಪೂಜಿಸಲಾಗುತ್ತಿದೆ. ಅವುಗಳಲ್ಲಿ ಮುಕ್ಕೋಟಿ ದೇವತೆಗಳು ನೆಲೆಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರು ಮನೆಯಲ್ಲಿ ಗೋವುಗಳನ್ನು ಸಾಕಬೇಕು ಎಂದು ಮಾಂಜರಿ-ಕೊಕಟನೂರ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಸಮೀಪದ ಸಿಂಧೂರ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ನೂತನ ಕಟ್ಟಡ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕೋಹಳ್ಳಿ ಬಳಿಯ ಶಿವಪೂರದ ಶಿವಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ 108 ಗೋವುಗಳ ಮಹಾಪೂಜೆ ಹಾಗೂ ಶಿವಲಿಂಗಕ್ಕೆ ರುದ್ರಭಿಷೇಕ ನಡೆಸಿ ಆಶೀರ್ವಚನ ನೀಡಿದರು. ಗೋ ಮಾತೆಯನ್ನು ಲಕ್ಷ್ಮೀದೇವಿ ಎಂದು ಪರಿಗಣಿಸಲಾಗುತ್ತಿದೆ. ಹಸುಗಳು ಮನೆಯಲ್ಲಿ ವಾಸವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಗೋಮಾತೆಗಳ ಸಗಣಿ ಮತ್ತು ಮೂತ್ರ ವಿಸರ್ಜನೆ ಮಾಡಿದರೇ ಮಾಟ, ಮಂತ್ರ, ಪಿಶಾಚಿ, ವಾಸ್ತು ದೋಷಗಳು ದೂರವಾಗುತ್ತವೆ. ಆರ್ಥಿಕ ಸ್ಥಿರತೆ ಮತ್ತು ಅದೃಷ್ಠ ಒದಗಿ ಬರಲಿದೆ. ಗೋ ಮೂತ್ರ ಮತ್ತು ಸಗಣಿಯನ್ನು ಪವಿತ್ರವೆಂದು ಪರಿಗಣಿಸಿ ಧಾರ್ಮಿಕ ವಿಧಗಳಲ್ಲಿ ಬಳಸಲಾಗುತ್ತದೆ. ಸಾವಯವ ಕೃಷಿಗೆ ಗೋ ಮಾತೆಗಳು ಅಗತ್ಯವಾಗಿದೆ ಎಂದು ತಿಳಿಸಿದರು.

ಯುವ ಮುಖಂಡ ಚಿದಾನಂದ ಸವದಿ ಮಾತನಾಡಿ, ಶಿವಪೂರದ ಈ ಪವಿತ್ರ ಸ್ಥಳದಲ್ಲಿ ₹ 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲು ಅನುದಾನ ನೀಡಲಾಗುವುದು. ಮುಂದಿನ ಈ ಕಾರ್ಯಕ್ರಮಕ್ಕೆ ಅನ್ನದಾಸೋಹದ ಸೇವೆ ನೀಡಲಾಗುವುದು ಎಂದು ಘೋಷಣೆ ಮಾಡಿದರು.

ಈ ವೇಳೆ ತಿಕೋಟಾದ ಶಿವಬಸವ ಶಿವಾಚಾರ್ಯ, ತುಬಚಿಯ ಬಸಯ್ಯಾ ಸ್ವಾಮಿಗಳು, ಯಡೂರಿನ ಈಶ್ವರಾಧ್ಯ ಹಿರೇಮಠ, ಶಿವುಕುಮಾರ ಹಿರೇಮಠ, ಸಂಗಯ್ಯಾ ಪೂಜಾರಿ, ಅಣ್ಣಪ್ಪ ಬಿರಾದಾರ, ತುಕಾರಾಮ ದೇವಖಾತೆ, ಸದಾಶಿವ ಹರಪಾಳೆ, ನಿಜಲಿಂಗ ಬಡಕೆ, ಲಿಂಗರಾಜ ಮುಧೋಳ, ಸಂತೋಷ ಸಾವಡಕರ, ಶ್ರೀಕಾಂಥ ಆಲಗೂರ, ಸಹದೇವ ಸೂರ್ಯವಂಶಿ, ಅಪ್ಪಾಸಾಬ ಕೋಳಿ, ಶೇಖರ ಹಾಲಳ್ಳಿ, ಶಂಬುಲಿಂಗ ಬಡಕೆ, ಸಂಗಪ್ಪ ಡಂಬಳಿ, ಮೈಬೂಬ ಪಡಸಲಗಿ, ಬಿ.ಆರ್.ಪಾಟೀಲ, ಅಪ್ಪಾಸಾಬ ಕಾಡಗೊಂಡ, ಶಿವರಾಯ ಮಂಟೂರ, ಲಕ್ಷ್ಮಣ ಉಮರಾಣಿ, ಹಣಮಂತ ಗಬ್ಬೂರ ಸೇರಿ ಕೋಹಳ್ಳಿ, ಸಿಂಧೂರ, ಅಡಹಳ್ಳಟ್ಟಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಉಪನ್ಯಾಸಕ ಎಚ್.ಎ.ಮಗದುಮ್ಮ ಸ್ವಾಗತಿಸಿದರು. ಕರೆಪ್ಪ ಕೊಂತಿಕಾರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ