ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಎಲಿಮುನ್ನೋಳಿ ರಾಜಾ ಲಖಮಗೌಡ ಸರದೇಸಾಯಿ (ಆರ್‌ಎಲ್‌ಎಸ್) ಪ್ರೌಢ ಶಾಲೆಯ 2004-05ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸಹಪಾಠಿಗಳ ಸ್ಮೇಹ ಸಮ್ಮಿಲನ ಉದ್ಘಾಟಿಸಿ ಮಾತನಾಡಿದ ಅವರು, ಗುರುವಿನ ಮಾರ್ಗದಲ್ಲಿ ನಡೆದಾಗ ಮಾತ್ರ ಮುಕ್ತಿ ಸಿಗಲು ಸಾಧ್ಯ. ಹೀಗಾಗಿ ಪ್ರಸ್ತುತ ವಿದ್ಯಾರ್ಥಿಗಳು ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ಪ್ರಾಮಾಣಿಕತೆ, ನಿಷ್ಠೆ, ಶೃದ್ಧೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.ಅರ್ಥಪೂರ್ಣವಾಗಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಇಪ್ಪತೆರೆಡು ವರ್ಷಗಳ ಹಿಂದಿನ ಸವಿನೆನಪುಗಳ ಮೆಲುಕು ಹಾಕಿದ ಹಳೇ ವಿದ್ಯಾರ್ಥಿಗಳು, ಅಂದಿನ ವಿದ್ಯಾರ್ಥಿ ಜೀವನ ತುಂಟಾಟ, ಆಟ, ಪಾಠದ ಜೊತೆಗೆ ಅಂದು ಕಳೆದ ಅವಿಸ್ಮರಣೀಯ ಕ್ಷಣಗಳನ್ನು ಪುನರ್ ಮನನ ಮಾಡಿಕೊಂಡರು.ಶಾಲಾ ಕೊಠಡಿಯಿಂದ ಸಭಾಂಗಣದವರೆಗೆ ಶಿಕ್ಷಕ ಬಳಗವನ್ನು ಪುಷ್ಪಮಳೆಯಲ್ಲಿಯೇ ವೇದಿಕೆಯತ್ತ ಆಹ್ವಾನಿಸಿದ ಹಳೇ ವಿದ್ಯಾರ್ಥಿಗಳು ಗುರುಭಕ್ತಿ ಪ್ರದರ್ಶಿಸಿದರು. ಚಿಗುರು ಮೀಸೆಯ ಬಾಲ್ಯದಲ್ಲಿ ಇದ್ದ ತುಂಟಾಟ ಎಲ್ಲರ ಮೊಗದಲ್ಲಿ ಎದ್ದು ಕಾಣುತ್ತಿತ್ತು.
ಶಿಕ್ಷಕರಾದ ಎಸ್.ಬಿ.ಹೊಂಗಲ, ಎಂ.ಆರ್.ಪಟ್ಟಣಶೆಟ್ಟಿ, ಜಿ.ಎಸ್.ಅಡಾಲಟ್ಟಿ, ಎಸ್.ಎಂ.ಭದ್ರಿ, ಎ.ಆರ್.ಮಠಪತಿ, ಕೆ.ಕರಗುಪ್ಪಿ ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.ಶಿಕ್ಷಕರಾದ ಎನ್.ಎಂ.ಸೋನಾವಣೆ, ಎ.ಕೆ.ಹುದ್ದಾರ ಅನಿಸಿಕೆ ಹಂಚಿಕೊಂಡರು. ಶಿಕ್ಷಕರಾದ ಆರ್.ಬಿ.ವಠಾರೆ, ಎಂ.ಬಿ.ಬಿಲ್ ಹಾಡು ಹಾಡಿ ರಂಜಿಸಿದರು. ಹಳೇ ವಿದ್ಯಾರ್ಥಿಗಳಾದ ವಿ.ಎಲ್.ಗಸ್ತಿ, ಸಂತೋಷ ಹೊಳೆಪ್ಪಗೋಳ, ಸಚಿನ ಮರಡಿ, ಪ್ರಭು ಮಗೆಣ್ಣವರ, ಪ್ರದೀಪ ಸೇಲಾರ್, ಮೋಸಿನ್ ಮುಲ್ಲಾ, ವರ್ಧಮಾನ ಗೋಣಿ, ಸಿದಗೌಡ ಪಾಟೀಲ, ಗಂಗುತಾಯಿ ಮಲಗೌಡನವರ, ನೂತನ ಸಂಕನ್ನವರ, ಪ್ರತೀಕ್ಷಾ ಮಗದುಮ್ಮ, ಶಕುಂತಲಾ ಇಮಗೌಡನವರ, ನಿರಂಜನ ಜಾಧವ ಮತ್ತಿತರರು ಉಪಸ್ಥಿತರಿದ್ದರು.