ಕನ್ನಡಪ್ರಭ ವಾರ್ತೆ ನಾಪೋಕ್ಲು
ಪಟ್ಟಣ ವ್ಯಾಪ್ತಿಯಲ್ಲಿ 30 ಸೆಂಟ್ಸ್, ಕಕ್ಕಬೆ ಯಲ್ಲಿ 20 ಸೆಂಟು, ಬಲ್ಲಮಾವಟ್ಟಿ, ನೆಲಜಿ, ಎಮ್ಮೆಮಾಡು ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿ ಬೆಳೆಗಾರರು ಆತಂಕಕ್ಕೀಡಾದರು. ಜಿಲ್ಲೆಯಲ್ಲಿ ಕಾಫಿ ಕೊಯ್ಲು ಭರದಿಂದ ಸಾಗುತ್ತಿರುವ ಈ ದಿನಗಳಲ್ಲಿ ಮಳೆ ರೈತರಲ್ಲೇ ಆತಂಕ ತಂದೊಡ್ಡಿದೆ. ಬತ್ತದ ಬೆಳೆ ಕೊಯ್ಲು ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಫಿ ಕೊಯ್ಲು ಇದೀಗ ಭರದಿಂದ ಸಾಗುತ್ತಿದೆ. ಕೊಯ್ಲು ಮಾಡಿದ ಕಾಫಿಯನ್ನು ಕಣದಲ್ಲಿ ಹರವಿ ಒಣಗಿಸಲಾಗುತ್ತಿದೆ. ಮೋಡ ಕವಿದ ವಾತಾವರಣದಿಂದ ಕಾಫಿ ಒಣಗಿಸಲು ತೊಡಕಾಗಿದೆ ಎಂದು ಬೆಳಗಾರರು ಅವಲತ್ತುಗೊಂಡರು.
ನಾಪೋಕ್ಳು ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಅಲ್ಲಲ್ಲಿ ಸಾಧಾರಣ ಮಳೆಯಾಯಿತು. ಬೆಳೆಗಾರರು ಒಣಗಲು ಹಾಕಿದ, ಕಾಫಿಗಳನ್ನು ಪ್ಲಾಸ್ಟಿಕ್ ತಾಟುಗಳಿಂದ ಮುಚ್ಚಿ ರಕ್ಷಿಸಲಾದರೂ ಬಹುತೇಕ ಕಾಫಿ ಮಳೆಗೆ ಒದ್ದೆಯಾಗಿ ಸಮಸ್ಯೆ ಎದುರಾಗಿದೆ.15 ದಿನಗಳ ಹಿಂದೆ ಮಳೆಯಾಗಿ ನಾಪೋಕ್ಲು ವ್ಯಾಪ್ತಿಯ ಕಾಫಿ ತೋಟದಲ್ಲಿ ಅಲ್ಪ ಪ್ರಮಾಣದಲ್ಲಿ ಹೂಗಳು ಅರಳಿದ್ದು ಇದೀಗ ಮತ್ತೆ ಮಳೆಯಾಗಿದ್ದು ಮತ್ತೆ ಅಲ್ಪ ಪ್ರಮಾಣದಲ್ಲಿ ಹೂಗಳು ಅರಳಲಿವೆ. ಈಗ ಮಳೆಯಾದಲ್ಲಿ ಕೊಯ್ದು ಮಾಡಿದ ಕಾಫಿಗೂ ಹಾನಿಯಾಗುವುದಲ್ಲದೆ ಮುಂದಿನ ವರ್ಷದ ಫಸಲಿಕ್ಕೂ ಧಕ್ಕೆ ಆಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.