ಬೈಕ್‌ಗಳಲ್ಲಿ ತ್ರಿಬಲ್ ರೈಡಿಂಗ್ ಕಂಡಲ್ಲಿ ತಕ್ಷಣವೇ ಪ್ರಕರಣ ದಾಖಲು: ಪಿಎಸ್‌ಐ ಎಚ್ಚರಿಕೆ

KannadaprabhaNewsNetwork |  
Published : Jun 13, 2024, 12:52 AM IST
ಮುಸಲ್ಮಾನ ಮುಖಂಡ ಜಾಕಿರ್ ಮಾತನಾಡಿದರು. | Kannada Prabha

ಸಾರಾಂಶ

ಬಕ್ರೀದ್ ಹಬ್ಬದ ನೆಪದಲ್ಲಿ ಕಾನೂನು ವಿರೋಧವಾಗಿ ಯುವಕರು ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವುದು ನಡೆಯುತ್ತಿದ್ದು, ಇಂಥ ಉಲ್ಲಂಘನೆ ಕಂಡಲ್ಲಿ ತಕ್ಷಣವೇ ಪ್ರಕರಣ ದಾಖಲು ಮಾಡಲಾಗುತ್ತದ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ಮಲೇಬೆನ್ನೂರಲ್ಲಿ ಎಚ್ಚರಿಸಿದ್ದಾರೆ.

- ಮಲೇಬೆನ್ನೂರು ಠಾಣೆಯಲ್ಲಿ ಬಕ್ರೀದ್‌ ಶಾಂತಿ-ಸೌಹಾರ್ದ ಸಭೆ - - - ಮಲೇಬೆನ್ನೂರು: ಬಕ್ರೀದ್ ಹಬ್ಬದ ನೆಪದಲ್ಲಿ ಕಾನೂನು ವಿರೋಧವಾಗಿ ಯುವಕರು ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವುದು ನಡೆಯುತ್ತಿದ್ದು, ಇಂಥ ಉಲ್ಲಂಘನೆ ಕಂಡಲ್ಲಿ ತಕ್ಷಣವೇ ಪ್ರಕರಣ ದಾಖಲು ಮಾಡಲಾಗುತ್ತದ ಎಂದು ಪಿಎಸ್‌ಐ ಪ್ರಭು ಕೆಳಗಿನಮನಿ ಎಚ್ಚರಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಸಂಜೆ ಶಾಂತಿ ಮತ್ತು ಸೌಹಾರ್ದತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರ ವರ್ತನೆ ಬಗ್ಗೆ ಹಿರಿಯರು ಗಮನ ಹರಿಸಬೇಕು. ಮೆರವಣಿಗೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅನ್ಯಧರ್ಮಗಳ ಸಮುದಾಯಕ್ಕೆ ನೋವಾಗುವಂಥ, ವಿರುದ್ಧವಾದ ಹೇಳಿಕೆಗಳನ್ನು ಪೋಸ್ಟ್ ಮಾಡುವಂತಿಲ್ಲ. ತಪ್ಪಿತಸ್ಥರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಹಿಂದೆ ರಂಜಾನ್ ಹಬ್ಬದಲ್ಲಿ ಬೀದಿ ಬದಿಯ ಆಹಾರ ಸೇವನೆಯಿಂದ ಮಗು ತೀರಿಕೊಂಡಿರುವ ಘಟನೆ ನಡೆದಿದೆ. ಆದ್ದರಿಂದ ರಸ್ತೆಗಳಲ್ಲಿ ಮಾರಾಟ ಮಾಡುವ ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು. ಈ ಬಗ್ಗೆ ಮಕ್ಕಳಿಗೆ ಪೋಷಕರು ತಿಳಿಹೇಳಬೇಕು. ಮೆರವಣಿಗೆಯಲ್ಲಿ ಯಾವುದೇ ವಾಹನಗಳಿಗೆ ತೊಂದರೆ ನೀಡದೇ ಶಾಂತಿಯುತವಾಗಿ ಬಕ್ರೀದ್‌ ಆಚರಿಸುವಂತೆ ಸಲಹೆ ನೀಡಿದರು.

ಮುಸಲ್ಮಾನ ಮುಖಂಡ ಜಾಕೀರ್ ಮಾತನಾಡಿ, ಜೂನ್ ೧೭, ೧೮ ಮತ್ತು ೧೯ರಂದು ಮೂರು ದಿನಗಳ ಕಾಲ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಗಬ್ಬು ನಾರುತ್ತಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಬ್ಲೀಚಿಂಗ್ ಪೌಡರ್ ಹಾಕುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಪುರಸಭೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ತನಿಖಾ ಪಿಎಸ್‌ಐ ಮಹದೇವ ಪತ್ತೆ ಮಾತನಾಡಿದರು. ಮುಸ್ಲಿಂ ಮುಖಂಡರು, ಪುರಸಭೆ ಸದಸ್ಯರಾದ ನಯಾಜ್, ಷಾ ಅಬ್ರಾರ್ ,ಶಬ್ಬೀರ್, ದಾದಾಪೀರ್, ಅನ್ವರ್, ಭಾನುವಳ್ಳಿ ಹಜರತ್‌ ಅಲಿ, ಗೌಸ್ ಪೀರ್, ಎಎಸ್‌ಐ ಶ್ರೀನಿವಾಸ್, ಬರಹಗಾರ ಶಿವಕುಮಾರ್ ಇದ್ದರು.

- - - -೧೨ಎಂಬಿಆರ್೨: ಬಕ್ರೀದ್‌ ಹಿನ್ನೆಲೆ ಸೌಹಾರ್ದ ಸಭೆಯಲ್ಲಿ ಜಾಕೀರ್ ಮಾತನಾಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ