ಕನ್ನಡಪ್ರಭ ವಾರ್ತೆ ರಾಮನಗರ
ನಗರದಲ್ಲಿ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜಕ್ಕೆ ಅವಕಾಶ ಸಿಗಬೇಕೆಂದರೆ ಮೀಸಲಾತಿ ಅತ್ಯವಶ್ಯಕವಾಗಿದೆ ಎಂದರು.
102 ಜಾತಿಗಳಿರುವ ಹಿಂದುಳಿದ ವರ್ಗದಲ್ಲಿ ವಿಶ್ವಕರ್ಮ ಸಮಾಜವಿದೆ. ಅದರಲ್ಲಿ ಬಹಳ ಬಲಿಷ್ಠವಾದ ಸಮಾಜ ಇರುವುದರಿಂದ ರಾಜ್ಯದಲ್ಲಿ ವಿಶ್ವಕರ್ಮರು 40 ಲಕ್ಷ ಜನಸಂಖ್ಯೆಯಿದ್ದರೂ ಕೂಡ ಅದರ ಉಪಯೋಗ ಪಡೆದುಕೊಳ್ಳುವಷ್ಟು ಶಕ್ತಿವಂತರಾಗಿಲ್ಲ ಎಂದು ತಿಳಿಸಿದರು.1976ರಲ್ಲಿ ಡಿ.ದೇವರಾಜು ಅರಸು ಹಿಂದುಳಿದ ವರ್ಗದಲ್ಲಿರುವ ಸಮಾಜಗಳಿಗೆ ಅವರಲ್ಲಿರುವ ಕುಲಕಸುಬುಗಳನ್ನು ಉಳಿಸಿಕೊಂಡು ಎಲ್ಲರಂತೆ ಬದುಕಬೇಕೆಂದು ಆಯನೂರು ಆಯೋಗವನ್ನು ರಚಿಸಿದ್ದರು. ಆದರೆ, ರಾಜಕೀಯ ಪ್ರಜ್ಞೆಯಿಲ್ಲದ ಆ ಸಂದರ್ಭದಲ್ಲಿ ಮೀಸಲಾತಿಯನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ನಾವು ಸ್ವಾಭಿಮಾನಿಗಳು, ಭಿಕ್ಷುಕರಲ್ಲ :
ಜನಾಂಗದಲ್ಲಿ ಹುಟ್ಟುವಾಗಲೇ ಎಂಜಿನಿಯರ್‌ಗಳಾಗಿ ಹುಟ್ಟುತ್ತೇವೆ. ಆದರೆ, ವಿದ್ಯೆ ಇಲ್ಲದಿದ್ದರೂ ಕುಲಕಸುಬು ರಕ್ತಗತವಾಗಿ ಬಂದಿದೆ. ಸಮುದಾಯದ ಮಕ್ಕಳು ವಿದ್ಯಾವಂತರಾಗಲು ಸರ್ಕಾರದ ಸವಲತ್ತುಗಳು ಸಿಗಬೇಕು. ಇದಕ್ಕಾಗಿ ರಾಜಕೀಯ ಜ್ಞಾನ, ಸಂವಿಧಾನದಲ್ಲಿನ ಅಂಶಗಳನ್ನು ತಿಳಿದುಕೊಳ್ಳಬೇಕು ಎಂದರು.
ವೈದಿಕವಾಗಿ ನಮ್ಮವರು ಸರ್ವಶ್ರೇಷ್ಠರು ಆಗಿದ್ದೇವೆ. ನಾವು ಸ್ವಾಭಿಮಾನಿಗಳು, ಭಿಕ್ಷುಕರಲ್ಲ. ನಾವು ಹೇಳಿದ್ದನ್ನೂ ಮಾಡುತ್ತೇವೆಯೇ ಹೊರತು ನಂಬಿಕೆ ದ್ರೋಹಿಗಳಲ್ಲ. ಭೂಮಿಯ ಸಂಪನ್ಮೂಲಕ್ಕೆ ಬೆಲೆ ಕಟ್ಟಿದವರು ವಿಶ್ವಕರ್ಮ ಸಮಾಜದ ಬಗೆಗೆ ನಿರ್ಲಕ್ಷ್ಯ ಭಾವನೆ ಸಲ್ಲದು ಎಂದು ಕೆ.ಪಿ.ನಂಜುಂಡಿ ಎಚ್ಚರಿಸಿದರು.
ಪ್ರಪಂಚಕ್ಕೆ ಸುಂದರತೆ ಕೊಟ್ಟು, ಶಿಲ್ಪಶಾಸ್ತ್ರದಂತಹ ವಿಶಿಷ್ಟ ಕೊಡುಗೆ ನೀಡಿದ ವಿಶ್ವಕರ್ಮ ಸಮಾಜ ಮನುಷ್ಯರು ಲೌಕಿಕ ಮತ್ತು ಆಧ್ಯಾತ್ಮಿಕ ಜೀವನವನ್ನು ಸಾರ್ಥಕಪಡಿಸಿ ಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಹಾಗಾಗಿ ಸಮುದಾಯದವರು ಅವಿರತ ಹೋರಾಟ, ಛಲ, ಪರಿಶ್ರಮದ ಮೂಲಕ ಸಮಾಜಕ್ಕೆ ದಾರಿ ದೀಪವಾಗುವ ಕೆಲಸ ಮಾಡಬೇಕಿದೆ.ಅದಕ್ಕೆ ಶಿಕ್ಷಣ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಅಖಿಕ ಕರ್ನಾಟಕ ವಿಶ್ವಕರ್ಮ ಮಹಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಜನಾರ್ದನ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು, ಸಮಾಜ ಸೇವಕ ಸೋಮಶೇಖರ್, ರಾಜು, ಜಯಚಂದ್ರು, ಬ್ಯಾಟಪ್ಪ,ಎಲ್.ಚಂದ್ರಶೇಖರ್, ಅಬ್ಬನಕುಪ್ಪೆ ರಮೇಶ್, ಆರ್ ಬಿಎಲ್ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡಪ್ರಭ ವಾರ್ತೆ ರಾಮನಗರ
ಒಕ್ಕಲಿಗ ಸಮುದಾಯ ನಾಯಕ ಮುಖ್ಯಮಂತ್ರಿ ಆಗಿರುವುದನ್ನು ಸಹಿಸದೆ ನಮ್ಮದೇ ಸಮುದಾಯದ ಮತ್ತೊಬ್ಬ ನಾಯಕರು ಕಾಲೆಳೆಯುತ್ತಿದ್ದಾರೆ. ಅದೇ ರೀತಿ ವಿಶ್ವಕರ್ಮ ಸಮಾಜದಲ್ಲಿಯೂ ಕೆ.ಪಿ.ನಂಜುಂಡಿರವರ ಕಾಲನ್ನು ಮತ್ತೊಬ್ಬರು ಎಳೆಯುತ್ತಿದ್ದಾರೆ. ಈ ಎಲ್ಲ ತೊಡಕುಗಳನ್ನು ಮೀರಿ ಬೆಳೆದವರು ನಾಯಕರಾಗಲು ಸಾಧ್ಯ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.ನಗರದಲ್ಲಿ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆಯವರ ಏಳಿಗೆ ಸಹಿಸದವರು ಎಲ್ಲ ಸಮಾಜದಲ್ಲಿಯೂ ಇದ್ದಾರೆ. ಕಾಲೆಳೆಯುವವರು ಇದ್ದಾಗಲೇ ನಾಯಕರಾಗಿ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯ ಎಂದರು.
ಕಳೆದ 25 ವರ್ಷಗಳಿಂದ ರಾಜ್ಯಾದ್ಯಂತ ವಿಶ್ವಕರ್ಮ ಸಮಾಜವನ್ನು ಸಂಘಟನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತಂದ ಕೀರ್ತಿ ಕೆ.ಪಿ.ನಂಜುಂಡಿಗೆ ಸಲ್ಲುತ್ತದೆ. ಅವರ ಸಂಘಟನೆಗೆ ತೊಂದರೆ ಕೊಟ್ಟವರನ್ನು ನಾನು ಕಂಡಿದ್ದೇನೆ. ಸಮಾಜದಲ್ಲಿ ಒಗ್ಗಟ್ಟು ತರಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅವರನ್ನು ಕಾಡುತ್ತಿದೆ. ಹಾಗಾಗಿ ನಂಜುಂಡಿರವರು ಹತಾಶರಾಗುವುದು ಬೇಡ. ಬದಲಾದ ವಾತಾವರಣದಲ್ಲಿ ನಮ್ಮ ನಮ್ಮ ಸಮುದಾಯಗಳು ಶ್ರೇಷ್ಠವೆಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ ಎಂದು ತಿಳಿಸಿದರು.ವಿದ್ಯೆ ಸಾಧಕರ ಸ್ವತ್ತು, ಸೋಮಾರಿಯ ಸ್ವತ್ತಲ್ಲ. ಅದನ್ನು ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ವಿದ್ಯೆಯಿಂದ ಜಗತ್ತನ್ನೇ ಗೆಲ್ಲಬಹುದು. ಆದ್ದರಿಂದ ವಿದ್ಯಾರ್ಜನೆಗೆ ಹೆಚ್ಚಿನ ಒತ್ತುಕೊಡಬೇಕು. ಜೊತೆಗೆ ನೀವುಗಳು ಒಗ್ಗಟ್ಟಾದರೆ ರಾಜಕಾರಣಿಗಳು ಹೆದರುತ್ತಾರೆ. ಆಗ ನಿಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದು ಬಾಲಕೃಷ್ಣ ಹೇಳಿದರು.