ಕನ್ನಡಪ್ರಭ ವಾರ್ತೆ ಸಿರಿಗೆರೆ
ಸೋಮವಾರ ಸಂಜೆ ಐಎಫ್‌ಎಸ್ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು ಸಚಿನ್ (ರಿ.ನಂ.7305613) ಅವರು ರಾಷ್ಟ್ರಮಟ್ಟದಲ್ಲಿ 143ನೇ ಸ್ಥಾನ ಗಳಿಸಿದ್ದಾರೆ.
ಐಎಎಸ್ ಕನಸು ಕಂಡಿದ್ದ ಸಚಿನ್ ಯುಪಿಎಸ್‌ಸಿ ಸ್ಪರ್ಧಾತ್ಮಕ ಮುಖ್ಯ ಪರೀಕ್ಷೆಯ ನಂತರ ಐಎಎಸ್ ಸಂದರ್ಶನಕ್ಕೂ ಹಾಜರಾಗಿದ್ದರು.ಸಚಿನ್ ಮೂಲತಃ ವ್ಯವಸಾಯ ಕುಟುಂಬದವಾಗಿದ್ದು, ತಂದೆ ಎಚ್.ಸಿ.ಲೋಕೇಶ್ ಕೃಷಿ ಅವಲಂಬಿತರಾಗಿದ್ದರೆ ತಾಯಿ ಆರ್.ಎಚ್.ಪುಷ್ಪ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಸುರತ್ಕಲ್‌ನ್ ಎನ್‌ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವೀದರರಾಗಿರುವ ಸಚಿನ್ ವೃತ್ತಿಪರವಾದ ಯಾವುದೇ ತರಬೇತಿ ಸಂಸ್ಥೆಯಲ್ಲಿ ದಾಖಲಾಗದೆ ತಮ್ಮ ಸ್ವಂತ ಪರಿಶ್ರಮದಿಂದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಚಿನ್, ಐಎಎಸ್ ಮಾಡುವ ಗುರಿ ಇಟ್ಟುಕೊಂಡಿದ್ದೇನೆ. ಅದನ್ನು ಸಾಧಿಸುತ್ತೇನೆ ಎಂದು ಹೇಳಿದರು.