ಇಫ್ತಿಯಾರ್ ಕೂಟಗಳು ಭಾವೈಕ್ಯತೆ ಮೂಡಿಸುತ್ತದೆ

KannadaprabhaNewsNetwork |  
Published : Mar 01, 2026, 01:15 AM IST
ೀ6ೂೂಬ | Kannada Prabha

ಸಾರಾಂಶ

ರಂಜಾನ್ ತಿಂಗಳಲ್ಲಿ ಆಚರಿಸುವ ಇಫ್ತಿಯಾರ್ ಕೂಟಗಳು ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸಲು ಹಲವಾರು ಶತಮಾನಗಳಿಂದ ಕಾರಣವಾಗಿವೆ ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು ರಂಜಾನ್ ತಿಂಗಳಲ್ಲಿ ಆಚರಿಸುವ ಇಫ್ತಿಯಾರ್ ಕೂಟಗಳು ಜನರಲ್ಲಿ ಭಾವೈಕ್ಯತೆಯನ್ನು ಮೂಡಿಸಲು ಹಲವಾರು ಶತಮಾನಗಳಿಂದ ಕಾರಣವಾಗಿವೆ ಎಂದು ಮಾಜಿ ಸಚಿವ ಹಾಗೂ ಮಧುಗಿರಿ ಶಾಸಕಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ನಗರದ ಎಚ್.ಎಂ.ಎಸ್ ಶಿಕ್ಷಣ ಸಂಸ್ಥೆಗಳಿಂದ ಆಯೋಜಿಸಿದ್ದ ಇಪ್ತಿಯಾರ್‌ ಕೂಟ ಹಾಗೂ ಕೋಮು ಸೌಹಾರ್ಧ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು. ಪವಿತ್ರರಂಜಾನ್ ತಿಂಗಳಲ್ಲಿ ಕುರಾನ್ ಪಠಣದ ಜೊತೆಗೆ, ಧರ್ಮ ಗುರುಗಳಿಂದ ಸಮುದಾಯಕ್ಕೆ ಅಗತ್ಯವಿರುವ ಮಾರ್ಗದರ್ಶನ ದೊರೆಯುತ್ತದೆ ಎಂದರು.

ಕುವೆಂಪು ಅವರು ಹೇಳಿದಂತೆ ಕರ್ನಾಟಕ ಒಂದು ಸರ್ವ ಧರ್ಮಗಳ ಶಾಂತಿಯ ತೋಟ. ಆದರೆ ಕೆಲವರು ತಮ್ಮ ರಾಜಕೀಯ ಅಧಿಕಾರಕ್ಕಾಗಿ ಜನರ ನಡುವೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ, ಗೊಂದಲ ಉಂಟು ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಭಾರತ ಜಾತ್ಯತೀತ ರಾಷ್ಟ್ರ. ಯಾರು ಸಹ ಭೇದ ಭಾವಕ್ಕೆ ಒಳಗಾಗಬಾರದು. ಶಾಂತಿ ಕದಡುವ ಕಿಡಿಗೇಡಿಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ನಾವೆಲ್ಲರೂ ಎಚ್ಚರಿಕೆಯಿಂದ ಮಾಡಬೇಕಾಗಿದೆ ಎಂದರು.

ಮಾಜಿ ಶಾಸಕರು, ಎಚ್.ಎಂ.ಎಸ್. ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ರಫೀಕ್‌ ಅಹಮದ್ ಮಾತನಾಡಿ, ಇಂದು ರಂಜಾನ್ ತಿಂಗಳ 10 ನೇ ದಿನದ ಉಪವಾಸವನ್ನು ನಾವೆಲ್ಲರೂ ಆಚರಿಸುತ್ತಿದ್ದೇವೆ. ಪ್ರವಾದಿಗಳಿಂದ ಈ ತಿಂಗಳು ಪವಿತ್ರ ಕುರಾನ್‌ ರಚಿತವಾಯಿತು ಎಂಬ ಪ್ರತೀತಿಇದೆ.ಬಹಳ ವರ್ಷಗಳಿಂದ ಹೆಚ್.ಎಂ.ಎಸ್ ವಿದ್ಯಾಸಂಸ್ಥೆ ಈ ಕೆಲಸವನ್ನು ಮಾಡುತ್ತಾ ಬಂದಿದೆ ಎಂದರು.ಪತ್ರಕರ್ತ ಎಸ್.ನಾಗಣ್ಣ ಮಾತನಾಡಿ, ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಶಾಂತಿಕದಡುವ ಕೆಲಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇದರ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಶತ ಶತಮಾನಗಳಿಂದ ಒಟ್ಟಿಗೆ ಬಾಳಿದ ಹಿಂದು, ಮುಸ್ಲಿಂ ಇತರೆ ಸಮುದಾಯಗಳು, ಇತರ ಮನಸ್ಥಿತಿಯನ್ನು ಕದಕದಂತೆ ಕೆಲಸ ಮಾಡಬೇಕಾಗಿದೆ. ಯಾರು ಏನೇ ಹೇಳಿದರೂ ಉದ್ರಿಕ್ತರಾಗದೇ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕೆಂದು ಸಲಹೆ ನೀಡಿದರು. ಖಾಜಿಯಾ ಷರಿಯತ್ ಷೇಕ್ ಮಹಮೂದ್‌ ಅವರು ಆಶೀರ್ವಚನ ನೀಡಿ,ದೇವರ ಪ್ರಕಾರ ಹೆಣ್ಣುಗಂಡು ಮಾತ್ರ ಸೃಷ್ಟಿಯಾಗಿದೆ. ಉಳಿದೆಲ್ಲವೂ ಒಂದೇಆಗಿದೆ.ಬೇರೆಯವರ ಮಾತಿಗೆಕಿವಿಗೋಡದೆ, ಜನರಲ್ಲಿ ಪ್ರೀತಿ ಮತ್ತು ವಿಶ್ವಾಸದಿಂದ ಬದುಕೋಣ ಎಂದರು.ವೇದಿಕೆಯಲ್ಲಿ ಎಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಷಫಿ ಅಹಮದ್, ಕಾರ್ಯದರ್ಶಿ ಅಫ್ತಾಬ್‌ ಅಹಮದ್, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಆರ್.ರಾಮಕೃಷ್ಣ, ಆಡಿಟರ್ ಸುಲ್ತಾನ್ ಮೊಹಮದ್, ಮಾಜಿ ಕೌನ್ಸಿಲರ್‌ಗಳಾದ ನಯಾಜ್‌ಅಹಮದ್, ಜಿಯಾ,ನದೀಂ, ಮೆಹಬೂಬ್ ಪಾಷ,ವಾಲೆಚಂದ್ರಯ್ಯ,ಆಟೋರಾಜು, ತಾಜುದ್ದೀನ್ ಷರಿಫ್, ತರುಣೇಶ್, ಸಿದ್ದಲಿಂಗೇಗೌಡ, ಇಮ್ರಾನ್, ಸಿದ್ದರಾಜ್ ಸೇರಿದಂತೆ ಹಲವು ಹಿರಿಯರು, ವಿವಿಧ ಸಮುದಾಯಗಳ ಮುಖಂಡರು ಕೋಮು ಸೌಹಾರ್ಧಕೂಟದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡನ ಬಿಟ್ಟು ತೊರೆದು ಬಂದ ಪ್ರೇಯಿಸಿಗೆ ಇರಿದ ಪ್ರಿಯಕರ
ಕಷ್ಟ, ಸುಖ ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ