ಒಳಮೀಸಲು ಜಾರಿಗೆ ಆಗ್ರಹಿಸಿ ನಾಳೆ ಹೆದ್ದಾರಿ ತಡೆ: ಪ್ರಕಾಶ್

KannadaprabhaNewsNetwork |  
Published : Mar 01, 2026, 01:15 AM IST
ಪೋಟೋ ವಿವರಣೆ .ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ನಡೆದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ದಲಿತ ಮುಖಂಡರು ಬಾಗಿಯಾಗಿದ್ದರು | Kannada Prabha

ಸಾರಾಂಶ

ಒಳಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ಮಾ.2ರ ಸೋಮವಾರ ಹೆದ್ದಾರಿ ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪ್ರಕಾಶ್ ಹೇಳಿದರು.

ಕನ್ನಡ ಪ್ರಭ ವಾರ್ತೆ ಮೊಳಕಾಲ್ಮೂರು

ಒಳಮೀಸಲಾತಿ ಸಮರ್ಪಕ ಜಾರಿಗೆ ಆಗ್ರಹಿಸಿ ಮಾ.2ರ ಸೋಮವಾರ ಹೆದ್ದಾರಿ ಬಂದ್ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆಂದು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಪ್ರಕಾಶ್ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಶನಿವಾರ ನಡೆದ ದಲಿತ ಮುಖಂಡರಿಂದ ಆಯೋಜಿಸಿದ್ದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಒಳಮೀಸಲಾತಿ ಮಾದಿಗರ ಬಹುದಿನದ ಬೇಡಿಕೆಯಾಗಿದೆ. ಸುಪ್ರೀಂ ಕೋರ್ಟ್‌ ಒಳಮೀಸಲು ನೀಡುವುದು ಆಯಾ ರಾಜ್ಯದ ನಿರ್ಧಾರ ಎಂದು ಐತಿಹಾಸಿಕ ತೀರ್ಪು ನೀಡಿದ ನಂತರ ರಾಜ್ಯ ಸರ್ಕಾರ ಮೀಸಲಾತಿ ಹಂಚಿಕೆ ಮಾಡುವಲ್ಲಿ ಇಂದಿಗೂ ಮಾದಿಗರಿಗೆ ಸೂಕ್ತ ನ್ಯಾಯ ನೀಡಲು ಸ್ಪಷ್ಟ ನಿರ್ಧಾರ ಮಾಡುತ್ತಿಲ್ಲ. ಮಾದಿಗ ಸಮುದಾಯ ಒಳಮೀಸಲಿಗಾಗಿ ಮೂರು ದಶಕಗಳ ಕಾಲ ಹೋರಾಟ ಮಾಡಿದರೂ ಸೂಕ್ತ ನ್ಯಾಯ ಸಿಕ್ಕಿಲ್ಲ. ಸರ್ಕಾರ ಕೂಡಲೇ ಒಳಮೀಸಲು ಜಾರಿಗೆ ಸ್ಪಷ್ಟ ಆದೇಶ ನೀಡಬೇಕೆನ್ನುವ ಕಾರಣದಿಂದ ಮಾ.2ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ದಲಿತ ಮುಖಂಡ ಜಿ.ಶ್ರೀನಿವಾಸ ಮೂರ್ತಿ ಮಾತನಾಡಿ, ಶತಮಾನಗಳಿಂದ ಶೋಷಣೆಗೊಳಗಾದ ಮಾದಿಗ ಸಮುದಾಯಕ್ಕೆ ಸಾಂವಿಧಾನಿಕ ವ್ಯವಸ್ಥೆಯಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಅವಕಾಶಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಶಿಷ್ಟ ಸಮುದಾಯದಲ್ಲಿ ಒಳ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಒಳ ಮೀಸಲಾತಿ ಜಾರಿಯಾಗದ ಹೊರತು ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಬಾರದು. ಒಂದು ವೇಳೆ ಮಾಡಿದ್ದೆ ಆದಲ್ಲಿ ಒಳ ಮೀಸಲಾತಿ ಪ್ರಕಾರ ನೇಮಕ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿ.ಟಿ.ನಾಗಭೂಷಣ ಮಾತನಾಡಿ, ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಒಳ ಮೀಸಲಾತಿ ನೀಡುವುದಾಗಿ ಬರವಸೆ ನೀಡಿದ್ದ ರಾಜ್ಯ ಸರ್ಕಾರ ಶೋಷಿತ ಸಮುದಾಯಗಳಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುತ್ತಿಲ್ಲ.ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ತಾಲೂಕಿನ ಮಾದಿಗ ಸಮುದಾಯ ಈ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು

ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಕೊಂಡಾಪುರ ಪರಮೇಶ್, ತಾಲೂಕು ಸಂಚಾಲಕ ಓ.ಕರಿಬಸಪ್ಪ, ನಿವೃತ್ತ ಅಧಿಕಾರಿ ನಾಗರಾಜ, ಮುತ್ತಿಗಾರಹಳ್ಳಿ ಮಂಜುನಾಥ, ದೇವಸಮುದ್ರ ಚಂದ್ರಣ್ಣ, ಬಟ್ರಹಳ್ಳಿ ಚಂದ್ರಣ್ಣ, ಮರ್ಲ ಹಳ್ಳಿ ಪರಮೇಶ್, ನೇರ್ಲ ಹಳ್ಳಿ ಹನುಮಂತಪ್ಪ, ಕೋನಸಾಗರ ನಾಗೇಂದ್ರ. ನಿವೃತ್ತ ಶಿಕ್ಷಕ ಎಂ.ರುದ್ರಯ್ಯ, ಮರಿಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಡನ ಬಿಟ್ಟು ತೊರೆದು ಬಂದ ಪ್ರೇಯಿಸಿಗೆ ಇರಿದ ಪ್ರಿಯಕರ
ಕಷ್ಟ, ಸುಖ ಸಮಾನವಾಗಿ ಸ್ವೀಕರಿಸಿದಾಗ ಯಶಸ್ಸು ಸಾಧ್ಯ