ತತ್ವಪದಗಳ ಕಡೆಗಣನೆ ಕನ್ನಡ ಸಾಹಿತ್ಯದ ವಿಪರ್ಯಾಸ

KannadaprabhaNewsNetwork |  
Published : Aug 24, 2025, 02:00 AM IST
ಚಿತ್ರದುರ್ಗ ಎರಡನೇ ಪುಟದ  ಮಿಡ್ಲ್ಬ | Kannada Prabha

ಸಾರಾಂಶ

ಚಿತ್ರದುರ್ಗದ ಪತ್ರಕರ್ತರ ಭವನದಲ್ಲಿ ಯುವ ಪತ್ರಕರ್ತರಿಗೆ ಆಯೋಜಿಸಿದ್ದ ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಡಾ.ಕರಿಯಪ್ಪ ಮಾಳಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕನ್ನಡ ಸಾಹಿತ್ಯ ಚರಿತ್ರೆಕಾರರು ತತ್ವಪದವನ್ನು ತಿರಸ್ಕಾರ ಮಾಡಿ, ತತ್ವಪದಗಳು ಹುಟ್ಟಿದ ಕಾಲವನ್ನು ಕತ್ತಲಯುಗ ಎಂದು ದಾಖಲಿಸಿದ್ದಾರೆ. ಇದು ಕನ್ನಡ ಸಾಹಿತ್ಯದ ವಿಪರ‍್ಯಾಸ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾರ ಡಾ.ಕರಿಯಪ್ಪ ಮಾಳಿಗೆ ವಿಷಾಧಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದ ಗೋಷ್ಠಿ-3ರಲ್ಲಿ ತತ್ವಪದ ಹಾಗೂ ಸಾಂಗತ್ಯ ವಿಷಯ ಕುರಿತು ಮಾತನಾಡಿದ ಅವರು, ತತ್ವಪದಗಳು ಸಮಾನತೆಯ ಆಶಯಕ್ಕೆ ಅಪಾರವಾದ ಕೊಡುಗೆ ನೀಡಿವೆ ಎಂದರು.

ಭಕ್ತಿಯನ್ನು ಲೋಕದೃಷ್ಠಿಯನ್ನಾಗಿ ಮಾಡಿಕೊಂಡವರು ಅನುಭಾವಿಗಳು. ಮಧ್ಯಕಾಲಿನ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹುಟ್ಟಿಕೊಂಡ ವಚನ ಸಾಹಿತ್ಯದಲ್ಲಿ ಬಂದ ಸ್ವರ ವಚನಗಳು 15 ನೇ ಶತಮಾನದಲ್ಲಿ ಬಂದ ಶಿವಯೋಗಿಗಳ ಕೈವಲ್ಯ ಸಾಹಿತ್ಯ ಮತ್ತು 17-18 ನೇ ಶತಮಾನದಲ್ಲಿ ಕಂಡುಬಂದ ತತ್ವಪದ ಸಾಹಿತ್ಯದ ಅನುಭಾವಿಗಳು ಭಕ್ತಿಯನ್ನು ಲೋಕದೃಷ್ಠಿಯನ್ನಾಗಿ ಮಾಡಿಕೊಂಡು ಸಾಮಾಜಿಕ ಸೌಹಾರ್ದತೆಗೆ ಕಾರಣೀಭೂತರಾಗಿದ್ದಾರೆ. ಜೊತೆಗೆ ನಾಥ, ಸಿದ್ದ, ಆರೂಢ, ಅವಧೂತ, ಸಂತ ಮತ್ತು ಶರಣ ಪರಂಪರೆಯವರು ಮಾನವೀಯ ಮೌಲ್ಯಗಳನ್ನು ತಮ್ಮ ನಡೆ-ನುಡಿಯಲ್ಲಿ ಅನುಸರಿಸುತ್ತಾ ಸಾಹಿತ್ಯ ರಚನೆ ಮಾಡಿದ್ದಾರೆ. ಜಾತಿ, ಮತ, ಧರ‍್ಮ ಸೋಂಕಿಲ್ಲದೇ ಸಮಾನತೆಯ ಆಶಯವನ್ನು ಸಮಾಜಕ್ಕೆ ಬಿತ್ತಿದ್ದಾರೆ. ಸಂವಿಧಾನದ ಆಶಯಗಳನ್ನು ಒಳಗೊಂಡ ತತ್ವಪದಗಳು, ಸಮುದಾಯದ ವಿವೇಕದ ಫಲಗಳಾಗಿ ಕೂಡಿಬಂದಿವೆ ಎಂದು ಹೇಳಿದರು.

ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಜನಮುಖಿ ಮತ್ತು ಸಮಾಜಮುಖಿ ಆಶಯಗಳುಳ್ಳ ತತ್ವಪದಗಳನ್ನು ನಮ್ಮ ದೈನಂದಿನ ಬದುಕಿನ ಜೀವನ ಮೌಲ್ಯವನ್ನಾಗಿ ಅಳವಡಿಸಿಕೊಂಡರೆ ಈವತ್ತಿನ ಅನೇಕ ಸಮಸ್ಯೆಗಳಿಗೆ, ಸಂಕಟಗಳಿಗೆ ಪರಿಹಾರ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಪತ್ರಕರ್ತರು ಇಂತಹ ಮಾನವೀಯ ಮೌಲ್ಯವುಳ್ಳ ಸಾಹಿತ್ಯದ ತಿಳುವಳಿಕೆಯನ್ನು ಅರಿತರೆ ಮಾಧ್ಯಮಗಳಲ್ಲಿ ತಮ್ಮ ಸೃಜನಶೀಲತೆ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಕರಿಯಪ್ಪ ಮಾಳಿಗೆ ಹೇಳಿದರು. ಪತ್ರಕರ್ತರಾದ ಗೌನಹಳ್ಳಿ ಗೋವಿಂದಪ್ಪ ,ದಿನೇಶ ಗೌಡಗೆರೆ, ಚಳ್ಳಕೆರೆ ಯರ‍್ರಿಸಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!