ಕೊಡಗಿನ ಪರಂಪರೆ ಕಲೆ ಉಳಿಸುವುದು ಮುಖ್ಯ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

KannadaprabhaNewsNetwork |  
Published : Aug 24, 2025, 02:00 AM IST
2 | Kannada Prabha

ಸಾರಾಂಶ

ಸರ್ಕಾರ ಕೊಡವ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕೊಡವ ಸಮಾಜದ ವತಿಯಿಂದ ಕೊಡವ ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದು, ಅನೇಕ ಕಾರ್ಯಕ್ರಮವನ್ನು ಈಗಾಗಲೇ ಕೊಡಗಿನಲ್ಲಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕೊಡಗಿನಲ್ಲಿ ಸಾಕಷ್ಟು ಬದಲಾವಣೆ ನಡುವೆ ಪರಂಪರೆ ಕಲೆಯನ್ನು ಉಳಿಸುವುದು ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.ವಿಜಯನಗರದಲ್ಲಿರುವ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮೈಸೂರು ಕೊಡವ ಸಮಾಜವು ಶನಿವಾರ ಆಯೋಜಿಸಿದ್ದ ಕೊಡವಾಮೆರ ಆರ ಬೇರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಬಿಟ್ಟು ಬೇರೆ ಸ್ಥಳದಲ್ಲಿ ಕೆಲಸಕ್ಕೆ ತೆರಳಿದರೂ ತಮ್ಮ ಸಂಸ್ಕೃತಿಯನ್ನು ಮರೆಯಬಾರದು. ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮತೋಲನ ಬೆಳೆಸಿಕೊಳ್ಳಬೇಕು. ಹಾಗೆಯೇ, ಸಂಸ್ಕೃತಿ ಉಳಿಸಿಕೊಳ್ಳಬೇಕು ಎಂದರು.ಸರ್ಕಾರ ಕೊಡವ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕೊಡವ ಸಮಾಜದ ವತಿಯಿಂದ ಕೊಡವ ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದು, ಅನೇಕ ಕಾರ್ಯಕ್ರಮವನ್ನು ಈಗಾಗಲೇ ಕೊಡಗಿನಲ್ಲಿ ಮಾಡಲಾಗಿದೆ. ಮೈಸೂರಿನಲ್ಲಿ ಕೊಡಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ವಿಶೇಷವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೊಡಗಿನ ಸಾಹಿತ್ಯ, ಸಂಸ್ಕೃತಿ ಬಗ್ಗೆ ತಿಳಿಸಲು ಕೊಡಗಿನ ನಂತರ ಮೈಸೂರು ಸೂಕ್ತ ಸ್ಥಳವಾಗಿರುವುದರಿಂದ ಇಲ್ಲಿ ಮಾಡಲಾಗುತ್ತಿದೆ ಎಂದು ಹೇಳಿದರು.ಪ್ರತಿ ವರ್ಷ ಕೊಡಗಿನಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ಅದ್ಧೂರಿಯಾಗಿ ದಸರಾ ಮಾಡಲಾಗುತ್ತಿದೆ. ಕಳೆದ ವರ್ಷ ಮುಖ್ಯಮಂತ್ರಿಗಳು ಮಡಿಕೇರಿ ದಸರಾಗೆ 1.25 ಕೋಟಿ ರೂ. ಹಾಗೂ ಗೋಣಿಕೊಪ್ಪ ದಸರಾಗೆ 75 ಲಕ್ಷ ರೂ. ನೀಡಿದರು. ಅದರಂತೆ ಈ ಬಾರಿಯೂ ಹಾಗೇ ವಿಜೃಂಭಣೆಯಿಂದ ದಸರಾ ಮಾಡಲಾಗುತ್ತದೆ ಎಂದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪಿ.ಎ. ಗಣಪತಿ, ಸಂಚಾಲಕಿ ಕೆ. ಡೀನಾ ಬೋಜಣ್ಣ, ಸಹ ಸಂಚಾಲಕರಾದ ಪಿ. ಪಪ್ಪು ತಿಮ್ಮಯ್ಯ, ಕೆ. ಎಂ. ಬಾಲಕೃಷ್ಣ, ಸಿ. ಗಣೇಶ್, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಎಂ. ದಿನು ಬೋಜಪ್ಪ, ಪಿ. ಕೆ. ಕುಟ್ಟಪ್ಪ, ಪಿ. ಯು. ಗಗನ್, ಕೆ. ಕಾವೇರಪ್ಪ, ಆರ್. ಶಿವಾಜಿ, ಸಿ. ಎಸ್. ಉತ್ತಪ್ಪ, ಎನ್‌. ಬೇಬಿ ಚಿಣ್ಣಪ್ಪ, ಸಿ. ಎ. ಸಂಜು ಕಾವೇರಪ್ಪ ಮೊದಲಾದವರು ಇದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!