ಕನ್ನಡ ಪುಸ್ತಕ ಪ್ರಕಟಣೆಗೆ ಸರ್ಕಾರ ಹಣ ನೀಡುತ್ತಿಲ್ಲ: ಪ್ರೊ.ಹಿ.ಚಿ.ಬೋರಲಿಂಗಯ್ಯ

KannadaprabhaNewsNetwork |  
Published : Aug 24, 2025, 02:00 AM IST
23ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ  ನೂರು ಶಾಲೆಗಳಿಗೆ ನೂರು ನೂರು ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಅತಿಥಿಗಳು ಪುಸ್ತಕಗಳ ಅನಾವರಣ ಮಾಡಿದರು. | Kannada Prabha

ಸಾರಾಂಶ

ಕೆಲ ವರ್ಷಗಳಿಂದ ಪ್ರಕಟವಾಗುವ ಕನ್ನಡ ಪುಸ್ತಕಗಳನ್ನು ಕೊನೆ ಪಕ್ಷ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.

ಕನ್ನಡಪ್ರಭ ವಾರ್ತೆ ರಾಮನಗರ

9ನೇ ಶತಮಾನದಿಂದ ಆರಂಭವಾದ ಕನ್ನಡದ ಬಗೆಗಿನ ಅನಾದರ ಧೋರಣೆ ಸ್ವಾತಂತ್ರ್ಯಬಂದ ನಂತರ ಆಳುವ ಸರ್ಕಾರಗಳಿಂದಲೂ ಮುಂದುವರೆದಿದೆ. ಇದಕ್ಕೆ ಪ್ರಮುಖ ಲೇಖಕರ ಉತ್ಕೃಷ್ಟವಾದ ಕನ್ನಡ ಪುಸ್ತಕಗಳನ್ನು ಪ್ರಕಟಿಸಲು ಸರ್ಕಾರ ಹಣ ನೀಡದಿರುವುದೇ ಉದಾಹರಣೆ ಎಂದು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಟೀಕಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ, ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನೂರು ಶಾಲೆಗಳಿಗೆ ನೂರು ಉಚಿತ ಪುಸ್ತಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೆಲ ವರ್ಷಗಳಿಂದ ಪ್ರಕಟವಾಗುವ ಕನ್ನಡ ಪುಸ್ತಕಗಳನ್ನು ಕೊನೆ ಪಕ್ಷ ಗ್ರಂಥಾಲಯಗಳಿಗೆ ತಲುಪಿಸುವ ಕೆಲಸ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಆದರೆ, ಸರ್ಕಾರಗಳು ಪುಸ್ತಕ ಪ್ರಕಟಿಸಿ, ಗ್ರಂಥಾಲಯಕ್ಕೆ ತಲುಪಿಸಲು ಬೇಕಾದಷ್ಟು ಹಣವನ್ನೇ ಕೊಡುತ್ತಿಲ್ಲ. ಹೀಗಾದರೆ ಸರ್ಕಾರ ಕನ್ನಡವನ್ನು ಹೇಗೆ ಪ್ರೋತ್ಸಾಹಿಸುತ್ತದೆ ಎಂದು ಪ್ರಶ್ನಿಸಿದರು.

ನೆರೆಯ ರಾಜ್ಯ ಕೇರಳದಲ್ಲಿ ಕನಿಷ್ಠ 3 ಸಾವಿರ ಪುಸ್ತಕಗಳು ಪ್ರಕಟವಾಗುತ್ತವೆ. ಅಲ್ಲಿ ಎರಡು ಮೂರು ತಿಂಗಳಲ್ಲಿ 1 ಸಾವಿರ ಪುಸ್ತಕಗಳು ಮನೆಗಳಿಗೆ ತಲುಪುತ್ತವೆ. ಅದೇ ಕರ್ನಾಟಕದಲ್ಲಿ 1 ಸಾವಿರ ಪುಸ್ತಕಗಳು ಪ್ರಕಟವಾಗುವುದೂ ಕಷ್ಟ. 1 ಸಾವಿರ ಪುಸ್ತಕ ಪ್ರಕಟವಾದರೆ ಮತ್ತೆ ಪುಸ್ತಕಗಳು ಪ್ರಕಟವಾಗಲು 10 ವರ್ಷಗಳು ಬೇಕಾಗುತ್ತದೆ. ನಮ್ಮಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ರಚನೆ ಮಾಡಲಾಗಿದ್ದು, ಆ ಪ್ರಾಧಿಕಾರದ ಅಧ್ಯಕ್ಷರಿಗೆ ಸಚಿವರ ಸ್ಥಾನಮಾನ ನೀಡಲಾಗಿದೆ. ಪ್ರಕಟಗೊಂಡ ಪುಸ್ತಕಗಳನ್ನು ಓದುವ ಜನರಿಗೆ ತಲುಪಿಸುವ ರೂಪುರೇಷೆ ಅನುಷ್ಠಾನಗೊಳಿಸ ಬೇಕಾದ ಪ್ರಾಧಿಕಾರ ಪ್ರಕಾಶನ ಸಂಸ್ಥೆಯಾಗಿ ಮಾರ್ಪಾಡುಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲೆಗಳಿಗೆ ಪುಸ್ತಕ ವಿತರಿಸಿದ ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ, ಸಮಾಜಕ್ಕೆ ಉಪಯುಕ್ತವಾದ ಹಾಗೂ ಮಕ್ಕಳು ಬದುಕು ರೂಪಿಸಿಕೊಳ್ಳಲು ನೆರವಾಗುವ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯ, ರಾಜ್ಯದಲ್ಲಿ ಹಲವು ಟ್ರಸ್ಟ್ ಗಳಿವೆ. ಆದರೆ ಜನಪರವಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕೆಲವು ಟ್ರಸ್ಟ್ ಗಳು ಸೋತಿವೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಮಾತನಾಡಿ, ಜಿಲ್ಲೆಯ ನೂರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ನೂರು ನೂರು ಉಚಿತ ಕನ್ನಡ ಪುಸ್ತಕ ವಿತರಣೆ ಮಾಡಿರುವುದು ಮಕ್ಕಳಲ್ಲಿ ಜ್ಞಾನದ ಸಂಪತ್ತನ್ನು ವೃದ್ದಿಸಲು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷ ಕರಿಗೌಡ ಮಾತನಾಡಿ, ನೂರು ಶಾಲೆಗಳಿಗೆ - ನೂರು ನೂರು ಪುಸ್ತಕ ಕಾರ್ಯಕ್ರಮ ಪುಸ್ತಕ ಸಂಸ್ಕೃತಿಗೆ ಪೂರಕವಾಗಿದೆ. ಈಗ 10 ಜಿಲ್ಲೆಗಳಿಗೆ ತಲುಪಿದೆ. ಇನ್ನೂ 20 ಜಿಲ್ಲೆಗಳಿಗೆ ಮುಟ್ಟಬೇಕಿದೆ. ಪುಸ್ತಕ ವಿತರಣಎ ಜ್ಞಾನದ ದಾನ. ಪುಸ್ತಕ ಭೌತಿಕ ಸಂಪತ್ತೇ ಹೊರತು ಆರ್ಥಿಕ ಸಂಪತ್ತಲ್ಲ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಮಂಜುಳಾ, ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಚಾರಕರ ಸಂಘ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಮುಖ್ಯ ಗ್ರಂಥಾಲಯಾಧಿಕಾರಿ ಚನ್ನಕೇಶವ, ಸಂಘದ ಕಾರ್ಯದರ್ಶಿ ದೊಡ್ಡೇಗೌಡ, ಶಿಕ್ಷಕರಾದ ಶಿವಸ್ವಾಮಿ, ಶೈಲಜಾ, ಪದ್ಮರೇಖಾ, ರಾಜು ಮತ್ತಿತರರು ಉಪಸ್ಥಿತರಿದ್ದರು.23ಕೆಆರ್ ಎಂಎನ್ 1.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನೂರು ಶಾಲೆಗಳಿಗೆ ನೂರು ನೂರು ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಅತಿಥಿಗಳು ಪುಸ್ತಕಗಳ ಅನಾವರಣ ಮಾಡಿದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!