ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

KannadaprabhaNewsNetwork |  
Published : Sep 11, 2025, 12:04 AM IST
ಕೊಲ್ಲೂರು ಮೂಕಾಂಬಿಕೆಗೆ ವಜ್ರದ ಕಿರೀಟವನ್ನು ಇಳಯರಾಜ ಅರ್ಪಿಸಿದರು. | Kannada Prabha

ಸಾರಾಂಶ

ಪಂಚವಾದ್ಯಗಳೊಂದಿಗೆ, ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ ಹಾಗೂ ಚಿನ್ನಾಭರಣಗಳನ್ನು ತಂದು, ಕ್ಷೇತ್ರದ ಋತ್ವಿಜರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ, ದೇವರಿಗೆ ಕಿರೀಟ ಹಾಗೂ ಆಭರಣಗಳನ್ನು ಒಪ್ಪಿಸಲಾಯಿತು. ಈ ವೇಳೆ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರದಕ್ಷಿಣ ಭಾರತದ ಸುಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ ಬುಧವಾರ ಕೋಟ್ಯಂತರ ಮೌಲ್ಯದ ವಜ್ರಖಚಿತ ಕಿರೀಟ ಹಾಗೂ ಚಿನ್ನಾಭರಣವನ್ನು ಅರ್ಪಿಸಿದ್ದಾರೆ.ಪಂಚವಾದ್ಯಗಳೊಂದಿಗೆ, ಕೊಲ್ಲೂರಿನ ಓಲಗ ಮಂಟಪದಿಂದ ರಥಬೀದಿಯಲ್ಲಿ ಪೂರ್ಣಕುಂಭ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಕಿರೀಟ ಹಾಗೂ ಚಿನ್ನಾಭರಣಗಳನ್ನು ತಂದು, ಕ್ಷೇತ್ರದ ಋತ್ವಿಜರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ, ದೇವರಿಗೆ ಕಿರೀಟ ಹಾಗೂ ಆಭರಣಗಳನ್ನು ಒಪ್ಪಿಸಲಾಯಿತು. ಈ ವೇಳೆ ದೇವಸ್ಥಾನದ ವತಿಯಿಂದ ಇಳಯರಾಜ ಅವರನ್ನು ಗೌರವಿಸಲಾಯಿತು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಇಳಯರಾಜ್ ಪುತ್ರ ಕಾರ್ತಿಕ್ ಇಳಯರಾಜ, ಮೊಮ್ಮಗ ಯತೀಶ್ ಇಳಯರಾಜ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ಸಹಾಯ ಕಾರ್ಯನಿರ್ವಹಣಾಧಿಕಾರಿ ತುಂಬಗಿ, ಅರ್ಚಕರಾದ ಶ್ರೀಧರ ಅಡಿಗ, ಕೆ.ಎನ್.ಗೋವಿಂದ ಅಡಿಗ, ವಿಘ್ನೇಶ್ವರ ಅಡಿಗ, ಎನ್.ಸುಬ್ರಮಣ್ಯ ಅಡಿಗ, ಸುರೇಶ್ ಭಟ್, ಶಿವರಾಮ ಅಡಿಗ, ನರಸಿಂಹ ಭಟ್, ಸುದರ್ಶನ್ ಜೋಯಿಸ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಾಹಾಲಿಂಗ ನಾಯ್ಕ್, ಧನಾಕ್ಷೀ ವಿಶ್ವನಾಥ್ ಪೂಜಾರಿ, ಸುಧಾ ಕೆ.ಬೈಂದೂರು, ಪ್ರಮುಖರಾದ ವಂಡಬಳ್ಳಿ ಜಯರಾಮ್ ಶೆಟ್ಟಿ, ರತ್ನಾ ರಮೇಶ್ ಕುಂದರ್, ಪ್ರದೀಪ್ ಶೆಟ್ಟಿ ಮಂದಾರ್ತಿ, ಜಯಕುಮಾರ್ ಕೊಲ್ಲೂರು, ಎಂಜಿನಿಯರ್ ಪ್ರದೀಪ್ ಉಪಸ್ಥಿತರಿದ್ದರು.

------------ಹಿಂದೆ ವಜ್ರಖಚಿತ ಹಸ್ತ ಸಮರ್ಪಣೆ

ಈ ಹಿಂದೆ ದೇವಿಗೆ ವಜ್ರಖಚಿತ ಹಸ್ತವನ್ನು ನೀಡಿದ್ದ ಇಳಯರಾಜ್, ಇಂದು ಶ್ರೀ ದೇವಿಗೆ ವಜ್ರ ಕಿರೀಟ, ಚಿನ್ನಾಭರಣ, ಶ್ರೀ ವೀರಭದ್ರ ದೇವರಿಗೆ ರಜತ ಕಿರೀಟ ಸಹಿತ ಖಡ್ಗವನ್ನು ಸಮರ್ಪಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ