ಇಳಕಲ್ಲ: ನಗರದಲ್ಲಿ ಎಲ್ಲಿಯಾದರೂ ನೀಂತು ಒಂದು ಕಲ್ಲನ್ನು ಒಗೆದರೆ ಅದು ಓರ್ವ ಕಲಾವಿದರ ಮನೆಯ ಮೇಲೆ ಬಿಳುತ್ತದೆ ಅಂದರೆ ಅಷ್ಟು ಜನ ಕಲಾವಿದರು ಇಳಕಲ್ಲ ನಗರದಲ್ಲಿ ಇರುವರು ಅದಕ್ಕಾಗಿ ಈ ಉರನ್ನು ಕಲಾವಿದರ ತವರೂರು ಎಂದು ಕರೆಯುತ್ತಾರೆ ಎಂದು ಶಾಸಕ ಹಾಗು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅದ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದರು.
ನಗರದ ನಗರ ಸಭೆಯ ಹತ್ತಿರದ ಸುರ್ವಣ ರಂಗ ಮಂದಿರದಲ್ಲಿ ಇವರು ಗುಳೆದಗುಡ್ಡದ ಸಂಗಮೇಶ್ವರ ನಾಟ್ಯ ಸಂಘ ಇವರು ಪ್ರದರ್ಶನ ಮಾಡುವ ಸೂಪರ ಸಿಂಗಾರಿ ಬಂಪರ ಬಂಗಾರಿ ನಾಟಕ ಪ್ರದರ್ಶನವನ್ನು ಶಾಸಕರು ಜ್ಯೋತಿ ಬೇಳಗಿಸಿ ಉದ್ಘಾಟನೆ ಮಾಡಿ ಮಾತನಾಡಿ, ನಾಟಕ ತಂಡಗಳಿಗೆ ಪ್ರದರ್ಶನ ಮಾಡಲು ಈ ರಂಗ ಮಂದಿರ ಉಪಯೋಗವಾಗಲೆಂದು ನಮ್ಮ ಸರಕಾರ ಈ ರಂಗ ಮಂದಿರವನ್ನು ನಿರ್ಮಿಸಿದ ಈ ರಂಗ ಮಂದಿರಕ್ಕೆ ಇನ್ನೂ ಕೆಲವು ಅವಶ್ಯವಾದ ಸೌಕರ್ಯಗಳು ಬೇಕಾಗಿವೆ ಅದಕ್ಕಾಗಿ ನಾವು ಎರಡು ಕೋಟಿ ರೂಪಾಯಿಯ ಮನವಿ ಸರಕಾರಕ್ಕೆ ಕೊಡಲಾಗಿದೆ ಆದಷ್ಟು ತಿವ್ರವೆ ಸರಕಾರ ನಮ್ಮ ಮನವಿಗೆ ಸ್ಪಂದಿಸಿ ಹಣ ಮಂಜೂರ ಮಾಡುವದು ಆಗ ಜನರೇಟರ, ಲೃಟ್ಸ, ಕಚ್ಚಿಣದ ಕುರ್ಚಿ, ಸೌಂಡ ಸಿಸ್ಟಮ ಹಾಗು ಇಕೋ ಆಗಲಾರದಂತ್ತೆ ಎಲ್ಲ ಕಾರ್ಯಗಳನ್ನು ಮಾಡಿ ನಾಟಕ ತಂಡಗಳೀಗೆ ಅತಿ ಕಡಿಮೆ ಬಾಡಿಗೆಯಲ್ಲಿ ಈ ರಂಗ ಮಂದರವನ್ನು ನಾಟಕ ಪ್ರದರ್ಶನಕ್ಕೆ ಕೊಡಲಾಗುವದು ಎಂದು ತಿಳಿಸಿ ನಿಮ್ಮಗಳ ಆರ್ಶಿವಾದದಿಂದ ಈ ನಾಟಕ ಪ್ರದರ್ಶನ ಅತಿ ಹೆಚ್ಚು ಆಗಲಿ ಎಂದರು. ಸಮಾರಂಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸುಧಾರಾಣಿ ಸಂಗಮ, ಸದಶ್ಯರಾದ ಅಮೃತ ಬಿಜ್ಜಲ, ವಿಠಲ ಜಕ್ಕಾ, ಪತ್ರಕರ್ತರಾದ ಬಸವರಾಜ ಮಠದ, ಬಿ.ಬಾಬು, ಹಿರಿಯರಾದ ಪ್ರೋ.ಕೆ. ಎ. ಬನ್ನಟ್ಟಿ, ಕಸಾಪ ಅದ್ಯಕ್ಷ ಮಹಾದೇವ ಕಂಬಾಗಿ, ಮಹಾಂತೇಶ ಗಜೇಂದ್ರಗಡ, ನಾಟಕ ಸಂಘದ ಮಾಲಿಕರಾದ ಜ್ಯೋತಿ ಗುಳೇದಗುಡ್ಡ, ಕಾಮಿಡಿ ಕಿಲಾಡಿಗಳ ಖ್ಯಾತ ನಟರಾದ ದಯಾನಂದ ಬೀಳಗಿ, ಶ್ರೇತಾ ಬೀಳಗಿ, ಚಲನಚಿತ್ರ ನಟಿ ನೀತಾ ಮೃದರಗಿ, ಕವಿಗಳಾದ ರಾಜಮಹಮ್ಮದ ಹಾಗು ಇತರರು ಉಪಸ್ತಿತರಿದ್ದರು.