ಕನ್ನಡಪ್ರಭ ವಾರ್ತೆ ಮಾಲೂರುಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಬರುವ ೩೨೬ ಸಿಎ ನಿವೇಶನಗಳಲ್ಲಿ ಅಧಿಕಾರಿಗಳು ಗುರ್ತಿಸಿದ್ದು ಅಕ್ರಮ ಖಾತೆ ಮತ್ತು ಅಕ್ರಮ ನಿವೇಶನಗಳನ್ನು ಪುರಸಭಾ ವಶಪಡಿಸಿಕೊಂಡು ಖಾತೆ ರದ್ದು ಮಾಡಲು ಜಿಲ್ಲಾ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಪುರಸಭೆಯ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ತಿರ್ಮಾನಿಸಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷ ಕೋಮಲ ನಾರಾಯಣ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪುರಸಭೆ ಜಾಗ ಅಕ್ರಮ ಖಾತೆ
ಸಿಎ ನಿವೇಶನಗಳಲ್ಲಿ ಅಕ್ರಮ ಕಟ್ಟಡಗಳನ್ನು ಅಧಿಕಾರಿಗಳು ಗುರುತಿಸಿದ್ದು, ಪಕ್ಷಾತೀತವಾಗಿ ಯಾರೇ ಪ್ರಭಾವಿಗಳಾದರೂ ಕಟ್ಟಡಗಳನ್ನು ತೆರವುಗೊಳಿಸಿ ಸರ್ಕಾರದ ಅನುಮತಿ ಪಡೆದು ಬಹಿರಂಗ ಹರಾಜು ಮಾಡಿದ್ದಲ್ಲಿ ಪುರಸಭೆಗೆ ಸುಮಾರು ೨೬೦ ಕೋಟಿ ಆದಾಯ ಬರಲಿದೆ ಅಂತಹ ಸಿಎ ನಿವೇಶನಗಳು ಪುರಸಭೆ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣದ ದೊಡ್ಡ ಕೆರೆಯ ಅಭಿವೃದ್ಧಿಗೆ ೩೪ ಕೋಟಿ ರೂ.ಗಳ ಅಗತ್ಯವಿದ್ದು, ಈಗಾಗಲೇ ಯೋಜನಾ ಪ್ರಾಧಿಕಾರದ ೧೦ ಕೋಟಿ ರೂ.ಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಕೋಮಲ ನಾರಾಯಣ, ಉಪಾಧ್ಯಕ್ಷ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ರಾಜಪ್ಪ, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಮ್ ಉಲ್ಲಾ ಖಾನ್, ತಹಸೀಲ್ದಾರ್ ಕೆ.ರಮೇಶ್, ಪುರಸಭೆ ಮುಖ್ಯ ಅಧಿಕಾರಿ ಎ.ಬಿ.ಪ್ರದೀಪ್, ಅಭಿಯಂತರೆ ಪೂರ್ಣಿಮಾ, ಕಂದಾಯ ಅಧಿಕಾರಿ ರೇಣುಕಾ, ಪರಿಸರ ಅಭಿಯಂತರ ಶಾಲಿನಿ, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್ ಇದ್ದರು.