ಸಾಗುವಾನಿ ಮರ ಅಕ್ರಮ ಕಡಿತ: 2 ಪ್ರತ್ಯೇಕ ಪ್ರಕರಣ ದಾಖಲು

KannadaprabhaNewsNetwork |  
Published : Jul 17, 2026, 01:30 AM IST
೧೬ಬಿಹೆಚ್‌ಆರ್ ೩: ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ನಾಟಾ. | Kannada Prabha

ಸಾರಾಂಶ

ಬಾಳೆಹೊನ್ನೂರು ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ.

ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದಲ್ಲಿ ನಾಟಾ ಪತ್ತೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಸಾಗುವಾನಿ ನೆಡುತೋಪಿನಲ್ಲಿ ಅಕ್ರಮವಾಗಿ ಸಾಗುವಾನಿ ಮರ ಕಡಿದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳನ್ನು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ದಾಖಲಿಸಲಾಗಿದೆ.

ಮಾಗುಂಡಿ ವಲಯದ ಹಲಸೂರು ಮೀಸಲು ಅರಣ್ಯದ ಸರ್ವೆ ನಂ.೪೫ರ ನೇಮನಹಳ್ಳಿ ಸಾಗುವಾನಿ ನೆಡುತೋಪಿನ ಕೆಮ್ಮಣ್ಣುಮಟ್ಟು ಎಂಬಲ್ಲಿ ಮೂರು ಸಾಗುವಾನಿ ಮರ, ಒಂದು ಶಿವನೆ ಜಾತಿಯ ಮರವನ್ನು ಕಡಿದು ನಾಟಾ ಮಾಡಿ ಮುಚ್ಚಿಟ್ಟಿರುವ ಕುರಿತು ಬಂದ ಖಚಿತ ಮಾಹಿತಿ ಆಧರಿಸಿ ಉಪ ವಲಯ ಅರಣ್ಯಾಧಿಕಾರಿ ಅಕ್ರಮ ಪತ್ತೆ ಮಾಡಿದ್ದಾರೆ.

ಸ್ಥಳದಲ್ಲಿ 6.081 ಘನ ಮೀಟರ್ ನಾಟಾ ಪತ್ತೆಯಾಗಿದೆ. ಘಟನೆ ಕುರಿತು ಹಲಸೂರು ಗ್ರಾಮದ ರವೀಶ, ಜಕ್ಕಣಕ್ಕಿ ಗ್ರಾಮದ ಶ್ರೀಧರ, ದೇವಗೋಡು ಗ್ರಾಮದ ಸತ್ಯನಾರಾಯಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ನಾಪತ್ತೆ ಯಾಗಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸೀಕೆ ವಲಯದ ಮುದುಗುಣಿ ಕಿರು ಅರಣ್ಯ ಪ್ರದೇಶದ ಸರ್ವೆ ನಂ.90ರಲ್ಲಿ 5 ಸಾಗುವಾನಿ ಮರಗಳನ್ನು ಕಡಿದು ಎಲೆಗಳ ನಡುವೆ ಮುಚ್ಚಿಟ್ಟಿದ್ದನ್ನು ಉಪ ವಲಯ ಅರಣ್ಯಾಧಿಕಾರಿ ಪತ್ತೆ ಹಚ್ಚಿದ್ದಾರೆ. ಸ್ಥಳದಲ್ಲಿ 1.013 ಘನ ಮೀಟರ್ ನಾಟಾ ಹಾಗೂ ಸೈಜ್ ವಶಪಡಿಸಿಕೊಳ್ಳಲಾಗಿದೆ.

ಘಟನೆ ಕುರಿತು ಕಿಚ್ಚಬ್ಬಿಯ ಕೆ.ಎಂ.ಮೋಹನ್, ಸುರೇಶ್, ಹೇರೂರಿನ ಕುಮಾರ್, ದಿವಿನ್ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಪ್ರಕರಣಗಳಲ್ಲಿ ನಾಟಾದ ಒಟ್ಟು ಮೊತ್ತ ₹7 ಲಕ್ಷ ಆಗಿರಬಹುದು ಎಂದು ಅರಣ್ಯ ಇಲಾಖೆ ಸಿಬ್ಬಂದಿ ಅಂದಾಜಿಸಿದ್ದಾರೆ.

ಎಸಿಎಫ್ ಮೋಹನ್‌ಕುಮಾರ್ ನೇತೃತ್ವ, ಆರ್‌ಎಫ್‌ಓ ಮಂಜುನಾಥ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ್, ನವೀನ್, ಸದಾಶಿವ, ಚೇತನ್, ನಾಗರಾಜ್, ರಜನೀಶ್, ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.೧೬ಬಿಹೆಚ್‌ಆರ್ ೩: ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಅಕ್ರಮ ನಾಟಾ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳಗನ್ನಡ ಅಭಿವ್ಯಕ್ತಿ ಕೌಶಲಗಳ ಶೋಧನೆ ಅಗತ್ಯ
ಮಾದಿಗ ಸಮಾಜದ ಶ್ರೇಯೋಭಿವೃದ್ಧಿಗೆ ಬದ್ಧ; ಮುನಿಯಪ್ಪ