ರಾಮತೀರ್ಥ ಗ್ರಾಮದಲ್ಲಿ ಅಕ್ರಮ ಮನೆ ತೆರವು

KannadaprabhaNewsNetwork |  
Published : Nov 01, 2026, 03:30 AM IST
ಅಕ್ರಮ ಮನೆ ತೆರವು. | Kannada Prabha

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ರಾಮತೀರ್ಥ ಗ್ರಾಮದ ಸರ್ವೇ ನಂ. 41ರಲ್ಲಿ ನಿಜಾಮುದ್ದಿನ ರೆಹಮಾನ್ಸಾಿಬ್ ರಟ್ಟೀಹಳ್ಳಿ ಎನ್ನುವವರು ಅಕ್ರಮವಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ ಎಂದು ತಹಸೀಲ್ದಾರ ಜೆ. ಜಯರಾಮ್ ನೇತೃತ್ವದಲ್ಲಿ ತಾಲೂಕಾಡಳಿತ ತೆರವುಗೊಳಿಸಿತು.

ರಟ್ಟೀಹಳ್ಳಿ: ತಾಲೂಕಿನ ರಾಮತೀರ್ಥ ಗ್ರಾಮದ ಸರ್ವೇ ನಂ. 41ರಲ್ಲಿ ನಿಜಾಮುದ್ದಿನ ರೆಹಮಾನ್‍ಸಾಬ್ ರಟ್ಟೀಹಳ್ಳಿ ಎನ್ನುವವರು ಅಕ್ರಮವಾಗಿ ಸರಕಾರಿ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ ಎಂದು ತಹಸೀಲ್ದಾರ ಜೆ. ಜಯರಾಮ್ ನೇತೃತ್ವದಲ್ಲಿ ತಾಲೂಕಾಡಳಿತ ತೆರವುಗೊಳಿಸಿತು.

ಸರಕಾರಿ ಜಾಗೆಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದು ಅದನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯತ್ ಹಾಗೂ ತಾಲೂಕಾಡಳಿತದಿಂದ ಮಾಲಿಕನಿಗೆ ಮೂರನಾಲ್ಕು ಬಾರಿ ನೋಟಿಸ್ ನೀಡಲಾಗಿತ್ತು. ಅದಕ್ಕೆ ಉತ್ತರ ನೀಡದ ಮಾಲಿಕನಿಗೆ ಸಮಯ ನೀಡಿದರೂ ತೆರವುಗೊಳಿಸದ ಕಾರಣ ತಹಸೀಲ್ದಾರ್ ಜೆ. ಜಯರಾಮ್, ಭೂಮಾಪನಾ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಪೊಲೀಸ್ ಬೀಗಿ ಭದ್ರತೆಯಲ್ಲಿ ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದರು.

ಮನೆ ಮಾಲಿಕ ನಿಜಾಮುದ್ದಿನ್‍ಸಾಬ್ ರಟ್ಟೀಹಳ್ಳಿ ಮಾತನಾಡಿ, ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತಾಲೂಕಾಡಳಿತ ತೆರವುಗೊಳಿಸಿದ್ದು ಮನೆ ಕಟ್ಟಲು ಕಟ್ಟಲು ಪರವಾನಿಗೆಯನ್ನು ಗ್ರಾಮ ಪಂಚಾಯತ್‍ನವರು ನೀಡಿದ್ದು ಅದನ್ನು ತರಾತುರಿಯಲ್ಲಿ ರದ್ದುಗೊಳಿಸಿದ್ದಾರೆ. ಮ್ಯಾಪನಲ್ಲಿ ತಪ್ಪಾಗಿದೆ ಜಿಪಿಎಸ್‌ ಮ್ಯಾಪ್ ಮಾಡಲು ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ದೊಡ್ಡ ದೊಡ್ಡ ರಾಜಕೀಯ ಮುಖಂಡರ ಕೈವಾಡವಿದೆ ಎಂದು ಆರೋಪಿಸಿದರು.

ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇದ್ದು ಮನೆ ತೆರವುಗೊಳಿಸದಂತೆ ಕೋರ್ಟ ಸ್ಟೇ ಇದ್ದರೂ ಅಧಿಕಾರಿಗಳು ಕಾಲಾವಕಾಶ ನೀಡದೇ ತೆರವುಗೊಳಿಸಿದ್ದಾರೆ. ನಾನು ಅತ್ಯಂತ ಬಡವನಾಗಿದ್ದು, ಕೂಲಿ ನಾಲಿ ಮಾಡಿ ಕಷ್ಟ ಪಟ್ಟು ಕಟ್ಟಿದ ಮನೆಯನ್ನು 10 ನಿಮಿಷದಲ್ಲಿ ನನ್ನ ಕಣ್ಣಮುಂದೇನೆ ನೆಲಸಮ ಮಾಡಿದ್ದಾರೆ. ತಾಲೂಕಾಡಳಿತದಿಂದ ನನಗೆ ಅನ್ಯಾಯವಾಗಿದ್ದು, ಸೂಕ್ತ ನ್ಯಾಯಕ್ಕಾಗಿ ಅಂಗಲಾಚಿದರು.

ನಾನು ಸರ್ವೇ ನಂಬರ್ 42ರಲ್ಲಿ ಕಟ್ಟಡ ಕಟ್ಟಿದ್ದೇನೆ. ಆದರೆ ಅಧಿಕಾರಿಗಳು ಸರಿಯಾಗಿ ಮ್ಯಾಪಿಂಗ್ ಮಾಡದೇ ನಿನ್ನ ಕಟ್ಟಡ ಇರುವುದು ಸರ್ವೇ ನಂ.41ರಲ್ಲಿದೆ ಎನ್ನುತ್ತಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ಮ್ಯಾಪ್‍ನ್ನು ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು. ಕಾರಣ ನನಗೆ ಕಾನೂನಿನ ಮೇಲೆ ಭರವಸೆ ಇದ್ದು ಮುಂಬರುವ ದಿನಗಳಲ್ಲಿ ನನಗೆ ಜಯ ಸಿಗಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ