ಅಕ್ರಮವಾಗಿ ಗಣಿಗಾರಿಕೆ ಭಗವಂತ ಖೂಬಾ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork |  
Published : May 04, 2024, 12:32 AM IST
ಚಿತ್ರ 3ಬಿಡಿಆರ್57 | Kannada Prabha

ಸಾರಾಂಶ

ಬೀದರ್ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಸಚಿವ ರಹೀಂ ಖಾನ್, ರಾಜಶೇಖರ ಪಾಟೀಲ್, ಅರವಿಂದ ಅರಳಿ ಇದ್ದರು.

ಕನ್ನಡಪ್ರಭ ವಾರ್ತೆ ಬೀದರ್ಸುಳ್ಳು ಹೇಳುವುದು ಬಿಜೆಪಿ ಜಾಯಮಾನ. ಬಿಜೆಪಿ ಅಂದರೆ ಭಾರತೀಯ ಝೂಟಾ ಪಾರ್ಟಿ ಅದು ಸುಳ್ಳಿನ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಭಗವಂತ ಖೂಬಾ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಪುತ್ರ, ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ವಕೀಲನೇ ಅಲ್ಲ, ಬಾರ್ ಅಸೋಸಿಯೇಷನ್ ನಲ್ಲಿ ನೋಂದಣಿ ಮಾಡಿಸಿಲ್ಲ. ತಪ್ಪು ಅಫಿಡವಿಟ್ ಕೊಟ್ಟಿದ್ದಾರೆ ಎಂದೆಲ್ಲಾ ನಮ್ಮ ಪ್ರತಿಸ್ಪರ್ಧಿ ಭಗವಂತ ಖೂಬಾ ಹೇಳಿಕೆ ನೀಡುತ್ತಿದ್ದು ಅದನ್ನು ಮಾಧ್ಯಮಗಳೂ ಪ್ರಕಟಿಸಿವೆ. ಇದು ಜನರಲ್ಲಿ ಗೊಂದಲ ಮೂಡಿಸಿದೆ. ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ಮತ್ತು ನನ್ನ ಪುತ್ರನ ಪದವಿಯ ಬಗ್ಗೆಯೇ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇವರು ಮಾಡುತ್ತಿರುವ ಯಾವುದೇ ಆರೋಪಕ್ಕೆ ಅವರ ಬಳಿ ಪುರಾವೆ ಇಲ್ಲ. ಆಧಾರ ರಹಿತ ಆರೋಪಗಳಿಗೆ ಯಾವುದೇ ಬೆಲೆ ಇರುವುದಿಲ್ಲ. 10 ವರ್ಷದಿಂದ ಸಂಸತ್ ಸದಸ್ಯರಾಗಿ, ಸಚಿವರಾಗಿರುವ ಖೂಬಾಗೆ ಬಾರ್ ಅಸೋಸಿಯೇಷನ್ ಮತ್ತು ಬಾರ್ ಕೌನ್ಸಿಲ್ ನಡುವಿನ ವ್ಯತ್ಯಾಸವೂ ಗೊತ್ತಿಲ್ಲ. ಖೂಬಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ವಂಚಕಭಗವಂತ ಖೂಬಾ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿರುವ ವಂಚಕ. ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಲೂಟಿ ಮಾಡಿರುವ ಕಳ್ಳ. ಒಬ್ಬ ಕೇಂದ್ರ ಸಚಿವರಾಗಿ ಸರ್ಕಾರಕ್ಕೆ ಸುಮಾರು 25 ಕೋಟಿ ರೂಪಾಯಿ ದ್ರೋಹ ಮಾಡಿದ್ದಾರೆ. ವಂಚನೆ ಮಾಡಿದ್ದಾರೆ. ಇದನ್ನು ತಮ್ಮ ಅಫಿಡವಿಟ್ ನಲ್ಲಿ ಕೂಡ ತಪ್ಪು ಮಾಹಿತಿ ನೀಡಿದ್ದಾರೆ. ಇವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಒಟ್ಟು 8 ಎಕರೆಗಿಂತ ಹೆಚ್ಚಿನ ಜಮೀನಿನಲ್ಲಿ ಅನಧಿಕೃತವಾಗಿ, ಅಕ್ರಮವಾಗಿ ಗಣಿಗಾರಿಕೆ ನಡೆಸಿ ಕಲ್ಲುಗಳನ್ನು ಲೂಟಿ ಮಾಡಿರುತ್ತಾರೆ, ಅಕ್ರಮ ಸಾಗಣೆ ಮಾಡಿರುತ್ತಾರೆ ಎಂದು 25 ಕೋಟಿ 28 ಲಕ್ಷದ 93 ಸಾವಿರ ರೂಪಾಯಿ ದಂಡ ಪಾವತಿಸುವಂತೆ ನೋಟಿಸ್ ನೀಡಿದ್ದಾರೆ. ಆದರೆ ಈ ವಿಷಯವನ್ನು ಖೂಬಾ ತಮ್ಮ ಅಫಿಡವಿಟ್ ನಲ್ಲಿ ಮುಚ್ಚಿಟ್ಟಿದ್ದಾರೆ.ಭಗವಂತ ಖೂಬಾ 25 ಕೋಟಿ ರೂಪಾಯಿ ದಂಡ ಕಟ್ಟಬೇಕು ಎಂದರೆ ಇವರು ನೂರಾರು ಕೋಟಿ ಕಲ್ಲು ಲೂಟಿ ಮಾಡಿದ್ದಾರೆ. 2 ಎಕರೆಗೆ ಅನುಮತಿ ಪಡೆದು 8 ಎಕರೆಯಲ್ಲಿ ಗಣಿಗಾರಿಕೆ ಮಾಡಿದ್ದಾರೆ. ಕೇಂದ್ರ ಸಚಿವರಾಗಿ ಸರ್ಕಾರಕ್ಕೆ ಮೋಸ ಮಾಡುವ ಇವರು ಜನರಿಗೆ ಮೋಸ ಮಾಡದೇ ಇರುತ್ತಾರೆಯೇ..

ಇನ್ನು ಸರ್ಕಾರಿ ನೌಕರರು, ವಿವಿಧ ಇಲಾಖೆಯ ಅಧಿಕಾರಿಗಳು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಚುನಾವಣೆ ದಿನಾಂಕ ಆರಂಭವಾದಾಗಿನಿಂದ ಈವರೆಗೆ ನೂರಾರು ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ ಆ ಯಾವುದೇ ದೂರಿಗೆ ಆಧಾರ ಇಲ್ಲ. ಪುರಾವೆ, ಸಾಕ್ಷಿ, ದಾಖಲೆ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ.

ಸಂಸದ ಭಗವಂತ ಖೂಬಾ 10 ವರ್ಷದಲ್ಲಿ ಕೊಟ್ಟ ಕೊಡುಗೆ ಶೂನ್ಯವಾಗಿದ್ದು,ಲಿಂಗಾಯತ ಸಮುದಾಯಕ್ಕೆ ಏನೇನೂ ಕೊಡುಗೆ ನೀಡದ ಖೂಬಾ, ರಾಜಕೀಯ ದ್ವೇಷಕ್ಕಾಗಿ ಲಿಂಗಾಯತ ಯುವಕನ ಮೇಲೆ ದೌರ್ಜನ್ಯ ಕಾಯಿದೆಯಡಿ ಬಂಧಿಸಲು ಸಹಕರಿಸಿ ಸಮುದಾಯಕ್ಕೆ, ಸಮಾಜಕ್ಕೆ ಮಾಡಿದ್ದೆಲ್ಲಾ ಅನ್ಯಾಯ.ತಮ್ಮದೇ ಪಕ್ಷದ ಶಾಸಕ ಪ್ರಭು ಚವ್ಹಾಣ್ ಮೇಲಿನ ಸಿಟ್ಟನ್ನು ಮುಗ್ಧ ಲಂಬಾಣಿ ಜನರ ಮೇಲೆ ತೋರಿಸಿ ಅವರ ಬಗ್ಗೆ ಕೀಳಾಗಿ ಮಾತನಾಡಿದ್ದ್ದ್ದುದಾರೆ.

ಈ ಬಾರಿ ಚುನಾವಣೆಯಲ್ಲಿ ಈ ಸುಳ್ಳುಗಾರ, ದುರಹಂಕಾರಿ ಭಗವಂತ ಖೂಬಾನನ್ನು ಮನೆಗೆ ಕಳುಹಿಸುವ ನಿರ್ಧಾರ ಮಾಡಿದ್ದು, ಸಾಗರ್ ಈಶ್ವರ ಖಂಡ್ರೆ ಅವರನ್ನು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಪಾಠ ಕಲಿಸುತ್ತಾರೆ ಎಂದು ಖಂಡ್ರೆ ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!