ರೇಷನ್‌ ಅಕ್ಕಿ ಅಕ್ರಮ ಸಾಗಾಟ ಜಾಲ ಪತ್ತೆ

KannadaprabhaNewsNetwork |  
Published : Oct 02, 2026, 01:15 AM IST
ಚಿತ್ರ ಶೀರ್ಷಿಕೆ - ಅಕ್ಕಿ ಜಾಲಆಳಂದ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ, ಆಹಾರ ಇಲಾಖೆ ಅಧಿಕಾರಿಗಳ ದೂರಿನನ್ವಯ ಪೊಲೀಸರು ಅಕ್ಕಿ ಸಹಿತ ಲಾರಿಯನ್ನು ಜಪ್ತಿ ಮಾಡಿದ್ದಾರೆ. | Kannada Prabha

ಸಾರಾಂಶ

ಬಡವರ ಹಸಿವು ನೀಗಿಸಲು ಸರ್ಕಾರ ನೀಡುವ ರೇಷನ್ ಅಕ್ಕಿ ಬಡವರ ತಟ್ಟೆ ತಲುಪುವ ಬದಲು ಕಾಳಸಂತೆಕೋರರಿಗೆ ಲಾಭ ಮಾಡಿಕೊಡುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸೆ. 27ರಂದು ಬೆಳಗ್ಗೆ ಆಳಂದ ಆರ್.ಟಿ.ಓ. ಚೆಕ್‍ಪೋಸ್ಟ್ ಬಳಿ ಐಷರ್ ವಾಹನದಲ್ಲಿ ಪಡಿತರ ಅಕ್ಕಿ ತುಂಬಿದ 130 ಚೀಲಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಆಳಂದಬಡವರ ಹಸಿವು ನೀಗಿಸಲು ಸರ್ಕಾರ ನೀಡುವ ರೇಷನ್ ಅಕ್ಕಿ ಬಡವರ ತಟ್ಟೆ ತಲುಪುವ ಬದಲು ಕಾಳಸಂತೆಕೋರರಿಗೆ ಲಾಭ ಮಾಡಿಕೊಡುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ಸೆ. 27ರಂದು ಬೆಳಗ್ಗೆ ಆಳಂದ ಆರ್.ಟಿ.ಓ. ಚೆಕ್‍ಪೋಸ್ಟ್ ಬಳಿ ಐಷರ್ ವಾಹನದಲ್ಲಿ ಪಡಿತರ ಅಕ್ಕಿ ತುಂಬಿದ 130 ಚೀಲಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.ಬೆಳಗ್ಗೆ 6ಕ್ಕೆ 112 ವಾಹನದ ಸಿಬ್ಬಂದಿ ಐಷರ್‌ ವಾಹನ ತಡೆದು ಪರಿಶೀಲಿಸಿದ್ದಾರೆ. ಚಾಲಕನ ಬಳಿ ಯಾವುದೇ ದಾಖಲೆ ಇರಲಿಲ್ಲ. ಅಕ್ಕಿ ಕಲಬುರಗಿಯ ವ್ಯಕ್ತಿಯೊಬ್ಬರಿಗೆ ಸೇರಿದ್ದು, ಮಹಾರಾಷ್ಟ್ರದ ಉಮರ್ಗಾಕ್ಕೆ ಸಾಗಿಸಲಾಗುತ್ತಿತ್ತು ಎಂದು ಚಾಲಕ ಹೇಳಿದ್ದಾನೆ. ಆಹಾರ ನಿರೀಕ್ಷಕರು ಪಂಚರ ಸಮಕ್ಷಮ ಪರಿಶೀಲಿಸಿ ಅದು ಸರ್ಕಾರದ ಯೋಜನೆಗಳ ಪಡಿತರ ಅಕ್ಕಿ ಎಂದು ಖಚಿತಪಡಿಸಿದರು.ತೂಕ ಮಾಡಿದಾಗ ಅಕ್ಕಿಯ ನಿವ್ವಳ ತೂಕ 6,520 ಕೆ.ಜಿ. ಆಗಿದ್ದು, ಕೆ.ಜಿ.ಗೆ ₹35ರಂತೆ ₹2.28 ಲಕ್ಷ ಮೌಲ್ಯವಿದೆ. ವಾಹನ ಸೇರಿ ಒಟ್ಟು ₹7.28 ಲಕ್ಷದ ಸ್ವತ್ತು ವಶವಾಗಿದೆ. ಚಾಲಕ, ವಾಹನ ಮಾಲೀಕ ಹಾಗೂ ಅಕ್ಕಿಯ ಮಾಲೀಕರೆನ್ನಲಾದ ಕಲಬುರಗಿಯ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.2025ರ ಏಪ್ರಿಲ್‍ನಿಂದ ನವೆಂಬರ್‌ ತನಲ ರಾಜ್ಯದಲ್ಲಿ 29,603 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶವಾಗಿದ್ದು, 488 ಪ್ರಕರಣ ದಾಖಲಾಗಿವೆ ಹಾಗೂ 314 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಹಾರ ಸಚಿವ ಸದನಕ್ಕೆ ತಿಳಿಸಿದ್ದಾರೆ. 2019ರಲ್ಲಿ 154 ಪ್ರಕರಣಗಳಲ್ಲಿ 11,534 ಕ್ವಿಂಟಲ್ ಅಕ್ಕಿ ವಶವಾಗಿತ್ತು. ಅಂದರೆ ಕೇವಲ ಎಂಟು ತಿಂಗಳಲ್ಲಿ ವಶವಾದ ಪ್ರಮಾಣ ಆ ವರ್ಷದ ಎರಡೂವರೆ ಪಟ್ಟಿಗೂ ಹೆಚ್ಚಾಗಿದೆ.ಕ್ರಮ ಯಾರ ವಿರುದ್ಧ?: ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಚಾಲಕ ಮತ್ತು ವಾಹನ ಸಿಕ್ಕಿಬೀಳುತ್ತವೆ. ಹಣ ಹೂಡುವ ಜಾಲದ ಮೂಲ ಪತ್ತೆಯಾಗುವುದೇ ಇಲ್ಲ. ಬಡವರ ಅನಿವಾರ್ಯತೆಯನ್ನು ಬಳಸಿಕೊಂಡು ಲಕ್ಷಾಂತರ ರುಪಾಯಿ ಗಳಿಸುವ ಜಾಲದ ಮೂಲ ಪತ್ತೆಯಾಗಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

----ಬಾಕ್ಸ್‌----

ಮಹಾರಾಷ್ಟ್ರ ಪೊಲೀಸರಿಂದ ವಿಚಾರ ಬೆಳಕಿಗೆಅಕ್ಕಿ ತುಂಬಿದ್ದ ಐಷರ್‌ ಲಾರಿಯನ್ನು ಮೊದಲಿಗೆ ಸ್ಥಳೀಯವಾಗಿ ಪರಿಶೀಲಿಸಿ ಬಿಡಲಾಗಿತ್ತು. ಬಳಿಕ ಅದೇ ಲಾರಿಯನ್ನು ಮಹಾರಾಷ್ಟ್ರದ ಪೊಲೀಸರು ಮತ್ತೆ ತಡೆದು ವಿಚಾರಣೆ ನಡೆಸಿ, ವಿಚಾರವನ್ನು ಕಲಬುರಗಿಯ ಮೇಲಧಿಕಾರಿಗಳ ಗಮನಕ್ಕೆ ತಂದಾಗ ಲಾರಿಯನ್ನು ಮಹಾರಾಷ್ಟ್ರದಿಂದ ಮರಳಿ ತಂದು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ. 130 ಚೀಲ ಅಕ್ಕಿ ಒಂದೇ ಕಡೆ ಹೇಗೆ ಸಂಗ್ರಹವಾಯಿತು? ಪಡಿತರ ಅಂಗಡಿಗಳಿಂದಲೇ ಸೋರಿಕೆಯಾಯಿತೇ? ಫಲಾನುಭವಿಗಳಿಂದ ಖರೀದಿಸಲಾಯಿತೇ ಅಥವಾ ಸಾಗಣೆಯ ಹಂತದಲ್ಲೇ ಕಳ್ಳತನ ನಡೆಯಿತೇ? ಎಂಬುದು ಇನ್ನಷ್ಟೇ ತನಿಖೆ ಮೂಲಕ ತಿಳಿದುಬರಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯ ಶಾನುಭೋಗರ ಬೀದಿಯಲ್ಲಿ ಸಂಭ್ರಮದ ಗಣೇಶೋತ್ಸವ
ಹಿಂದೂ ಸಮಾಜ ವಿಭಜಿಸುವ ಷಡ್ಯಂತ್ರ ನಡೆಯುತ್ತಿದೆ: ಶ್ರೀಕಾಂತ್ ಶೆಟ್ಟಿ