ಅಕ್ರಮ ಅಕ್ಕಿ ಸಾಗಾಣೆ; ಗೂಡ್ಸ್ ಆಟೋ ಸಮೇತ ಇಬ್ಬರ ಬಂಧನ

KannadaprabhaNewsNetwork |  
Published : Apr 30, 2025, 12:30 AM IST
ಅಕ್ರಮ ಅಕ್ಕಿ ಸಾಗಾಣೆ ಗೂಡ್ಸ್ ಆಅಕ್ರಮ ಅಕ್ಕಿ ಸಾಗಾಣೆ ಗೂಡ್ಸ್ ಆಟೋ ಸಮೇತ ಇಬ್ಬರ ಬಂಧನಟೋ ಸಮೇತ ಇಬ್ಬರ ಬಂಧನ | Kannada Prabha

ಸಾರಾಂಶ

ಇವರಿಬ್ಬರೂ ಗೂಡ್ಸ್ ಆಟೋದಲ್ಲಿ ೨೯ ಪ್ಲಾಸ್ಟಿಕ್ ಚೀಲಗಳಲ್ಲಿ ೧,೫೭೦ ಕೆಜಿ ಅಕ್ಕಿ ತುಂಬಿಕೊಂಡು ಇದರ ಮೇಲೆ ಗುಜರಿ ವಸ್ತುಗಳನ್ನು ಹಾಕಿಕೊಂಡು ಅನುಮಾನ ಬಾರದ ಹಾಗೆ ಮದ್ದೂರು ಗ್ರಾಮದಿಂದ ಯಳಂದೂರು ಕಡೆಗೆ ಬರುತ್ತಿದ್ದರು.

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದ ಬಳಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ವೇಳೆ ಆಹಾರ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಗೂಡ್ಸ್ ಆಟೋ ಹಾಗೂ ಇದರಲ್ಲಿ ಸಾಗಾಟ ಮಾಡುತ್ತಿದ್ದ ಅಕ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ತಾಲೂಕಿನ ಮದ್ದೂರು ಗ್ರಾಮದ ಅಸ್ಲಂಪಾಷ ಹಾಗೂ ಟಿ. ನರಸೀಪುರದ ರೆಹಮಾನ್ ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಗೂಡ್ಸ್ ಆಟೋದಲ್ಲಿ ೨೯ ಪ್ಲಾಸ್ಟಿಕ್ ಚೀಲಗಳಲ್ಲಿ ೧,೫೭೦ ಕೆಜಿ ಅಕ್ಕಿ ತುಂಬಿಕೊಂಡು ಇದರ ಮೇಲೆ ಗುಜರಿ ವಸ್ತುಗಳನ್ನು ಹಾಕಿಕೊಂಡು ಅನುಮಾನ ಬಾರದ ಹಾಗೆ ಮದ್ದೂರು ಗ್ರಾಮದಿಂದ ಯಳಂದೂರು ಕಡೆಗೆ ಬರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆಹಾರ ನಿರೀಕ್ಷಕ ಬಿಸಲಯ್ಯ ಸಿಪಿಐ ಶ್ರೀಕಾಂತ್, ಪಿಎಸ್‌ಐ ಆಕಾಶ್, ಪೇದೆಗಳಾದ ಶಿವಕುಮಾರ್, ಜಡೇಸ್ವಾಮಿ, ಉಸ್ಮಾನ್ ನೇತೃತ್ವದ ತಂಡ ದಾಳಿ ನಡೆಸಿ ಇವರನ್ನು ಮಾಲು ಸಮೇತ ಬಂಧಿಸಿದ್ದಾರೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಕ್ಕಿ ಹಾಗೂ ಆಟೋವನ್ನು ವಶಪಡಿಸಿಕೊಂಡು ಕಾನೂನು ಕ್ರಮ ವಹಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು