ಮುದಗಲ್: ನಾಗಲಾಪೂರ ಗ್ರಾಮದ ಹತ್ತಿರದ ಹಳ್ಳದಿಂದ ಸರ್ಕಾರದ ಸ್ವತ್ತಾದ ಮರಳನ್ನು ಅಕ್ರಮವಾಗಿ ಯಾವುದೇ ಪರವಾನಗಿ ಇಲ್ಲದೆ ಸಾಗಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ಎರಡು ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ. ಮಸ್ಕಿ ತಾಲೂಕಿನ ಮೆದಕಿನಾಳ ಗ್ರಾಮದ ನಿಂಗಪ್ಪ ಎನ್ನುವ ಟ್ರ್ಯಾಕ್ಟರ್ ಮಾಲೀಕ ನಾಗಲಾಪೂರ ಹಳ್ಳದಿಂದ ಉಸಕುಸಾಗಿಸುತ್ತಿದ್ದ ಹಾಗೂ ರಾಮತ್ನಾಳ ಗ್ರಾಮದ ಮಂಜುನಾಥ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಿಸುತ್ತಿರುವುದನ್ನು ಮಾಹಿತಿ ಪಡೆದ ಮುದಗಲ್ ಪೊಲಿಸರು 2 ಟ್ರ್ಯಾಕ್ಟರ್‌ಗಳನ್ನು ಜಪ್ತಿಮಾಡಿಕೊಂಡು ಮುದಗಲ್ ಪಿಎಸ್ಐ ವೆಂಕಟೇಶ ನೇತೃತ್ವದ ತಂಡ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.