ನಾಗರಾಜ್ ನ್ಯಾಮತಿ
ಸುರಪುರ ಹೋಬಳಿಯ ಕೃಷ್ಣಾ ನದಿ ತಟದ ವಿವಿಧ ಭಾಗಗಳಲ್ಲಿ ಹರಿಯುವ ನದಿಯ ಭೂಗರ್ಭಕ್ಕೆ ಕನ್ನ ಹಾಕಿ ಅಕ್ರಮ ಮರಳು ದಂಧೆಗಾಗಿ ಬಗೆಯುತ್ತಿದ್ದಾರೆ. ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಮೌನ ವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸಿದೆ.
ಮರಳು ದಂಧೆ ತಾಲೂಕಿನಾದ್ಯಂತ ನಡೆಯುತ್ತಿದ್ದು, ಚೌಡೇಶ್ವರಿಹಾಳ, ಕರ್ನಾಳ, ಸೂಗೂರುಗಳಲ್ಲಿ ಹೆಚ್ಚಳವಾಗಿದೆ. ವಿವಿಧ ಗ್ರಾಮಗಳು ಮತ್ತು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಹಗಲೂ ರಾತ್ರಿಯೆನ್ನದೇ ಮರಳು ತುಂಬಿದ ಲಾರಿಗಳು ಸಂಚರಿಸುತ್ತಿವೆ.ಸುರಪುರ ಹೋಬಳಿ ವ್ಯಾಪ್ತಿಯಲ್ಲಿ ಮರಳು ತಪಾಸಣಾ ಕೇಂದ್ರಗಳನ್ನು ಕಂದಾಯ ಇಲಾಖೆ ಸ್ಥಾಪಿಸಿದೆ. ಹೆಮನೂರು, ಶೆಳ್ಳಗಿ, ಬೇವಿನಾಳ, ಕರ್ನಾಳನಲ್ಲಿ ಚೆಕ್ ಪೋಸ್ಟ್‌ಗಳಿವೆ. ಇವು ಅಕ್ರಮ ತಡೆಗಟ್ಟುವ ಬದಲು, ದಂಧೆಕೋರರಿಂದ ಹಫ್ತಾ ವಸೂಲಿ ಕೇಂದ್ರದಂತೆ ಕಾರ್ಯನಿರ್ವಹಿಸುತ್ತವೆ ಅನ್ನೋ ಗಂಭೀರ ಆರೋಪಗಳಿವೆ.
ಈ ಅಕ್ರಮ ಮರಳು ದಂಧೆಗೆ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಪೊಲೀಸ್ ಇಲಾಖೆ ಕೆಲವು ಅಧಿಕಾರಿಗಳೇ ನೆರಳಾಗಿ ನಿಂತು, ದಂಧೆಕೋರರಿಗೆ ಸಹಕರಿಸುತ್ತಾರೆ ಅನ್ನೋದು ಜನರ ಆರೋಪ.
ಸಂಜೆಯಾಗುತ್ತಿದ್ದಂತೆಯೇ, ಮರಳು ತುಂಬಿದ ಲಾರಿಗಳು ಮತ್ತು ಟ್ರ್ಯಾಕ್ಟರ್‌ಗಳ ಸಂಚಾರದ ಆರ್ಭಟ ಜೋರಾಗಿರುತ್ತದೆ. ನದಿ ಒಡಲನ್ನು ಆಳವಾಗಿ ಬಗೆಯುವುದರಿಂದ ನದಿ ಅಂಚುಗಳು ವರ್ಷದಿಂದ ವರ್ಷಕ್ಕೆ ಅಗಲಾಗುತ್ತ ಹೋಗುತ್ತಿದೆ. ಜಲಚರ ಜೀವಿಗಳು ನಿರ್ನಾಮವಾಗಿ, ಅಂತರ್ಜಲ ಕುಸಿತಗೊಂಡು ಕೃಷಿ ಭೂಮಿ ಬರುಡಾಗುವ ಕಾಲ ದೂರವಿಲ್ಲ ಎಂಬುದು ಅನ್ನದಾತರ ಅಭಿಪ್ರಾಯವಾಗಿದೆ.
ಕೊನೆಯಿಲ್ಲವೆ?
ಜೀವಭಯ!
ಸಕ್ರಮಕ್ಕಿಂತ ಅಕ್ರಮ ಮರಳು ದಂಧೆ ಹೆಚ್ಚಾಗಿ ನಡೆಯುತ್ತಿದೆ. ಚಿನ್ನದ ಗಣಿಯಲ್ಲಿ ತೋರುವ ಬದ್ಧತೆ ಮರಳು ಗಣಿಗಾರಿಕೆಯಲ್ಲೂ ತೋರಿಸಬೇಕು. ಅಕ್ರಮವಾಗಿ ಸಾಗುವ ಮರಳನ್ನು ತಡೆಯಬೇಕು.