)
ಬಂಗಾರಪೇಟೆ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಅಕ್ಕಿ ಗಿರಣಿಯೊಂದರ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ.
9285 ಕ್ವಿಂಟಲ್ ಪಡಿತರ ಅಕ್ಕಿ ದಾಸ್ತಾನು ಮಾಡಿರುವುದಕ್ಕೆ ಹಾಗೂ ಅಕ್ಕಿ ಎಲ್ಲಿಂದ ಖರೀದಿಸಲಾಗಿದೆ ಎಂಬುದಕ್ಕೆ ಗಿರಣಿ ಮಾಲೀಕರು ಯಾವುದೇ ದಾಖಲೆಗಳು ನೀಡದ ಕಾರಣ ಇಷ್ಟು ಪ್ರಮಾಣದ ಅಕ್ಕಿ ಪಡಿತರ ಅಕ್ಕಿ ಎಂದು ಶಂಕಿಸಲಾಗಿದೆ. ಅಕ್ಕಿಯನ್ನು ವಿವಿಧ ಬ್ರಾಂಡ್‌ಗಳ ಹೆಸರಿನಲ್ಲಿ ಪಾಲೀಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಗಿರಣಿಯಲ್ಲಿ ಎಫ್‌ಸಿಐ ಚೀಲದಲ್ಲಿರುವ ಅಕ್ಕಿಯು ಯಥೇಚ್ಛವಾಗಿದ್ದು ಕಂಡು ಬಂದಿವೆ. ಆದರೆ ಗಿರಣಿ ಮಾಲೀಕರು ಇದು ಪಡಿತರ ಅಕ್ಕಿಯಲ್ಲ. ಓಪನ್ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಖರೀದಿಸಲಾಗಿದೆ ಎಂದು ಹೇಳುವರು, ಆದರೆ ಯಾವುದಕ್ಕೂ ಬಿಲ್‌ಗಳು ನೀಡದ ಕಾರಣ ಇದು ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಲಾಗಿದೆ ಎಂದು ಗಿರಣಿ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ ಗಿರಣಿಯನ್ನು ಶೀಜ್ಹ್ ಮಾಡಿ ಗಿರಣಿ ಮಾಲೀಕ ಸುಪ್ರಿತ್ ವಿರುದ್ದ ಸೂಕ್ತ ಕ್ರಮ ವಹಿಸುವಂತೆ ಪೊಲೀಸರಿಗೆ ದೂರು ನೀಡಲಾಗಿದೆ.