ಮಾಂಸ ಮಾರಾಟದ ಉದ್ದೇಶದಿಂದ ಸಾಗಾಟ
ಹೆಬ್ಬೋಡಿ ಗ್ರಾಮದ ಬೂತನ ಕಟ್ಟೆ ರಸ್ತೆಯಲ್ಲಿ ಅಶೋಕ್ ಲೈಲ್ಯಾಂಡ್ ಲಗೇಜ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು 2 ಹೋರಿ, 2 ಆಕಳು, ವಾಹನ ಹಾಗೂ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಸರ್ಕಾರದ ಯಾವುದೇ ವರವಾನಿಗೆ ಇಲ್ಲದೆ ಹೆಬ್ಬೋಡಿ ಗ್ರಾಮದ ರೈತನಿಗೆ ಸುಮರು ₹ 29.500 ಹಣ ನೀಡಿ ಖರೀದಿ ಮಾಡಿದ ಆರೋಪಿಗಳು ಜಾನುವಾರುಗಳನ್ನು ಕಡಿದು ಮಾಂಸ ಮಾರಾಟದ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಸರ್ಕಾರದ ಯಾವುದೇ ಪರವಾನಿಗೆ ಪಡೆಯದೆ ಹಿಂಸಾತ್ಮಕವಾಗಿ ತುಂಬಿಕೊಂಡು ಅಶೋಕ್ ಲೈಲ್ಯಾಂಡ್ ಲಗೇಜ್ ವಾಹನ ದಲ್ಲಿ ಸಾಗಾಣಿಕೆ ಮಾಡುತ್ತಿದ್ದ 2 ಹೋರಿ, 2 ಆಕಳು ಸಮೇತ ಶಿಕಾರಿಪುರ ತಾಲೂಕಿನ ದಿಂಡದಹಳ್ಳಿ ಗ್ರಾಮದ ಬಸವಣ್ಣಪ್ಪ, ಚಾಲಕ ಜಗದೀಶ್ ಇಬ್ಬರನ್ನು ವಶಪಡಿಸಿಕೊಂಡು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಫೋಟೋ 19 ಎ, ಎನ್, ಪಿ 1