)
ಗಿರೀಶ್ ಮಾದೇನಹಳ್ಳಿ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಹಗರಣ ಸಂಬಂಧ ಉತ್ತರ ಪತ್ರಿಕೆ ತಿದ್ದುಪಡಿ (ಒಎಂಆರ್ ಶೀಟ್) ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯಗಳ ಬಳಿಕ ಈಗ ಆಯೋಗದ ಕೆಲ ಸದಸ್ಯರ ‘ಸರ್ಕಾರಿ ಹುದ್ದೆ ಮಾರಾಟದ ‘ಹೊಸ ಮಾದರಿ’ಯನ್ನು (ಮೋಡಸ್) ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಯಲುಗೊಳಿಸಿದ್ದಾರೆ.
ಕೆಪಿಎಸ್‌ಸಿ ಸದಸ್ಯರ ‘ಸರ್ಕಾರಿ ಹುದ್ದೆ’ ಮಾರಾಟ ಡೀಲ್ ಬಗ್ಗೆ ಇ.ಡಿ. ಮುಂದೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಬಾಯ್ಬಿಟ್ಟಿದ್ದು, ಪಶುವೈದ್ಯಾಧಿಕಾರಿಗಳ ಹುದ್ದೆ ಮಾತ್ರವಲ್ಲದೆ ಕಳೆದ ಎರಡು ವರ್ಷಗಳಲ್ಲಿ ಆಯೋಗ ನಡೆಸಿದ 13 ನೇಮಕಾತಿಗಳಲ್ಲಿ ಆ ಸದಸ್ಯರಿಂದ ಹುದ್ದೆಗಳು ಮಾರಾಟವಾಗಿವೆ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಈಗಾಗಲೇ ಇ.ಡಿ. ನಿಗಾದಲ್ಲಿದ್ದ ಸದಸ್ಯರಿಗೆ ಮತ್ತಷ್ಟು ಆತಂಕ ಎದುರಾಗಿದೆ ಎಂದು ತಿಳಿದು ಬಂದಿದೆ.ಆಯ್ಕೆ ಪಟ್ಟಿ ಪ್ರಕಟಕ್ಕೂ ಮೊದಲು ಡೀಲ್:
ಪಶುವೈದ್ಯರ ನೇಮಕಾತಿಯಲ್ಲಿ ಪ್ರಶ್ನೆಗಳ ಸೋರಿಕೆಯಾಗಿರುವ ಬಗ್ಗೆ ಇ.ಡಿ ಹಾಗೂ ಸಿಐಡಿ ನಡೆಸಿದ ಪ್ರತ್ಯೇಕ ತನಿಖೆಯಲ್ಲಿ ಪತ್ತೆಯಾಗಿತ್ತು. ಹಾಗೆಯೇ ಕೆಪಿಎಸ್‌ಸಿ ಆಂತರಿಕ ವಿಚಾರಣೆಯಲ್ಲಿ ರಾಜ್ಯ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಎಇಇ ಹುದ್ದೆಗಳ ನೇಮಕಾತಿಯಲ್ಲಿ ಉತ್ತರ ಪತ್ರಿಕೆ ತಿದ್ದುಪಡಿ ನಡೆದಿರುವುದು ಬಯಲಾಗಿತ್ತು. ಈಗ ಹೊಸದಾಗಿ ‘ಅರ್ಹತಾ ಪಟ್ಟಿ’ ಮೂಲಕ ಕೆಪಿಎಸ್‌ಸಿ ಸದಸ್ಯರು ಶಾಮೀಲಾಗಿರುವ ಗೋಲ್ಮಾಲ್ ಬೆಳಕಿಗೆ ಬಂದಿದೆ.
ಕೆಪಿಎಸ್‌ಸಿಯಲ್ಲಿ ನೇಮಕಾತಿ ಅಕ್ರಮಗಳ ತಡೆಗೆ ಪರೀಕ್ಷಾ ನಿಯಂತ್ರಕ ಹುದ್ದೆಯನ್ನು ಸರ್ಕಾರ ಸೃಷ್ಟಿಸಿತು. ನನ್ನನ್ನು ಆ ಹುದ್ದೆಗೆ ಸರ್ಕಾರ ನೇಮಿಸಿತು. ಎರಡು ವರ್ಷಗಳ ಅವಧಿಯಲ್ಲಿ ಕೆಎಎಸ್ ಅಧಿಕಾರಿಗಳು, ಸಾರಿಗೆ ಇಲಾಖೆ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್, ಆರೋಗ್ಯ ಇಲಾಖೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಾಯಕ ಎಂಜಿನಿಯರ್ ಹಾಗೂ ಮೀನುಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆ ಪಶುವೈದ್ಯಾಧಿಕಾರಿಗಳ ಹುದ್ದೆ ಸೇರಿ ಒಟ್ಟು 13 ನೇಮಕಾತಿ ಪ್ರಕ್ರಿಯೆಗಳನ್ನು ನಡೆಸಿದ್ದೇನೆ ಎಂದು ಇ.ಡಿ. ವಿಚಾರಣೆ ವೇಳೆ ಜ್ಞಾನೇಂದ್ರ ಗಂಗ್ವಾರ್ ಹೇಳಿದ್ದಾರೆ ಎನ್ನಲಾಗಿದೆ.
ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ಅರ್ಹತಾ ಪಟ್ಟಿಯನ್ನು ಆಯೋಗ ಸಿದ್ದಪಡಿಸುತ್ತಿತ್ತು. ಬಳಿಕ ಅದರಲ್ಲಿ ಅತ್ಯುತ್ತಮ ಅಂಕ ಪಡೆದವರ ಹೆಸರನ್ನು ‘ಆಯ್ಕೆ ಪಟ್ಟಿ’ಯಲ್ಲಿ ಬಹಿರಂಗಪಡಿಸಲಾಗುತ್ತಿತ್ತು. ಈ ಎರಡು ಪಟ್ಟಿ ಪ್ರಕಟಣೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಅರ್ಹತಾ ಪಟ್ಟಿಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ವಿವರವನ್ನು ಆಯೋಗ ಬಹಿರಂಗಪಡಿಸದೆ ಗೌಪ್ಯವಾಗಿಡುತ್ತಿತ್ತು. ಇದು ಅಕ್ರಮಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕೆಪಿಎಸ್ಸಿ ಅಧಿಕಾರಿ-ಸಿಬ್ಬಂದಿ ಸಾಕ್ಷಿದಾರರು: