ಕನ್ನಡಪ್ರಭ ವಾರ್ತೆ ಮಂಡ್ಯ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹಿರಂಗ ಚರ್ಚೆಗೆ ಲಿಖಿತ ರೂಪದಲ್ಲಿ ಪ್ರಶ್ನೆಗೆ ಆಹ್ವಾನಿಸಿದ ಅಧ್ಯಕ್ಷರು ಯಾವುದೇ ಪ್ರಶ್ನೆ ಬಂದಿಲ್ಲ ಎಂದು ಬೇಜವಾಬ್ದಾರಿ ತನದಿಂದ ಚರ್ಚೆಯನ್ನು ಮುಟುಕುಗೊಳಿಸಿದ್ದಾರೆ. ಕೂಡಲೇ ಮೈಷುಗರ್ ಆಡಳಿತ ಮಂಡಳಿ ವ್ಯವಹಾರದ ಬಗೆಗಿನ ಶ್ಚೇತಪತ್ರ ಹೊರಡಿಸಬೇಕು. ಇಲ್ಲವಾದಲ್ಲಿ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಖಾನೆಯ 2ನೇ ಪ್ರಮುಖ ಭಾಗವಾದ ಬಿ ಮಿಲ್‌ನ ವಿಲೇವಾರಿಗೆ ಸರ್ಕಾರಿ ಸ್ವಾಧೀನ ಸಂಸ್ಥೆಯಿಂದ ದರದ ಅಂದಾಜು ಮಾಡಿಸದೇ ಖಾಸಗಿ ಸಂಸ್ಥೆಯಿಂದ ಅಂದಾಜಿಲಾಗಿದೆ. ಕಾರ್ಖಾನೆ ಸ್ಥಿರಾಸ್ತಿಯನ್ನು ಸರ್ಕಾರದ ಗಮನಕ್ಕೆ ತರದೇ, ಮ್ಯಾನ್ಯುವಲ್ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ದೂರಿದರು.ಕಳೆದ ಬಾರಿ 1.20 ಲಕ್ಷ ಟನ್ ಕಬ್ಬು ಅರೆದಿದ್ದರೂ ಈ ಹಂಗಾಮಿನಲ್ಲಿ 5 ಲಕ್ಷ ಟನ್‌ಗೂ ಹೆಚ್ಚು ಕಬ್ಬನ್ನು ನುರಿಸುವ ಸಂಬಂಧ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿ ಸಂಸ್ಥೆಗೆ ನಷ್ಟ ಉಂಟು ಮಾಡುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ ಅವರೊಂದಿಗೆ ಸಿ.ಡಿ.ಗಂಗಾಧರ್ ಹೊಂದಾಣಿಕ ಮಾಡಿಕೊಂಡಿದ್ದಾರೆ. ಆದ್ದರಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದ್ದು, ಕಳೆದ 3 ವರ್ಷಗಳಿಂದ 127 ಕೋಟಿ ರು. ಹಗರಣ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳು ಕಾರ್ಖಾನೆಗೆ ಭೇಟಿ ನೀಡಿದ ವೇಳೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕಾರ್ಖಾನೆ ಸಹಾಯಕ ಭದ್ರತಾಧಿಕಾರಿ ಬಿ.ಎನ್.ವಿಜೇತ್‌ಕುಮಾರ್ ಅವರನ್ನು ಅಮಾನತು ಮಾಡಿರುವುದು ಸರಿಯಲ್ಲ. ಮೈಷುಗರ್ ಅಧ್ಯಕ್ಷರು ನನ್ನನ್ನು ಖಾಸಗಿ ಕಾರ್ಖಾನೆಯೊಂದಿಗೆ ಶಾಮೀಲಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದರು.