ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ಧಗಂಗಾ ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆಯಿಂದ ವಿಶ್ವ ಕಿಡ್ನಿ ದಿನದ ಅಂಗವಾಗಿ ನಡೆದ ಬೃಹತ್ ಸೈಕ್ಲೊಥಾನ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ನೀಡಿ ಮಾತನಾಡಿದ ಅವರು, ಆರೋಗ್ಯ ಕಾಳಜಿ ಹಾಗೂ ಶಾಂತಿಯುತ ಬದುಕು, ಆಧ್ಯಾತ್ಮಿಕ ದೃಷ್ಟಿಕೋನ ಜೀವನವನ್ನು ಪರಿಪೂರ್ಣತೆಯಡೆಗೆ ಕೊಂಡೊಯ್ಯುತ್ತದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ, ಪ್ರತಿ ವರ್ಷ ವಿಶ್ವ ಕಿಡ್ನಿ ದಿನದ ಅಂಗವಾಗಿ ಸೈಕ್ಲೋಥಾನ್ ಏರ್ಪಡಿಸುತ್ತಾ ಬಂದಿದ್ದು, ಕಿಡ್ನಿ ಆರೋಗ್ಯದ ಕುರಿತು ಸಂವಾದ, ಸಾಧಕರಿಗೆ ಸನ್ಮಾನದಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿವೆ ಎಂದು ಸಂತಸಪಟ್ಟರು.ಸಿದ್ಧಗಂಗಾ ಸೂಪರ್ ಸ್ಪೆಷಾಲಿಟಿ ಮುಖ್ಯಸ್ಥ ಡಾ.ಭಾನುಪ್ರಕಾಶ್ ಮಾತನಾಡಿ, ಸೈಕ್ಲೋಥಾನ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಸಂತಸ ತಂದಿದೆ. ಸಿದ್ಧಗಂಗಾ ಆಸ್ಪತ್ರೆ ಕಿಡ್ನಿ ಕಾಳಜಿಗಾಗಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಿದ್ದು, ಡಯಾಲಿಸಿಸ್ ಘಟಕ,ಅತ್ಯಾಧುನಿಕ ಸಿಟಿ ಸ್ಕ್ಯಾನ್ ಹಾಗೂ ವಾರ್ಡ್ ಸೌಲಭ್ಯಗಳು ಪರಿಣಾಮಕಾರಿ ಚಿಕಿತ್ಸೆಗೆ ಸಹಾಯಕವಾಗಿವೆ ಎಂದರು.
ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾದ ಮ್ಯಾರಥಾನ್ ಕೋಟೆ ಆಂಜನೇಯ ದೇವಾಲಯ ಮಾರ್ಗವಾಗಿ ಎಸ್ ಐಟಿ ಮುಖ್ಯರಸ್ತೆಯಿಂದ ಭದ್ರಮ್ಮ ಚೌಟ್ರಿಯ ಮಾರ್ಗವಾಗಿ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಯಿತು.