ಅಡಕೆ, ತಂಬಾಕು ಸೇವನೆಯಿಂದ ಅನಾರೋಗ್ಯ ನಿಶ್ಚಿತ

KannadaprabhaNewsNetwork |  
Published : Nov 23, 2024, 12:35 AM IST
ಡಾ.ಗಜಾಲ ಸುಲ್ತಾನ ಮಾತನಾಡಿದರು. | Kannada Prabha

ಸಾರಾಂಶ

ಮನುಷ್ಯರು ಚಾಕೋಲೇಟ್, ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದರೆ ಹಲ್ಲು ಹುಳುಕಾಗುತ್ತವೆ ಎಂದು ಬಾಪೂಜಿ ದಂತ ಮಹಾವಿದ್ಯಾಲಯದ ಡಾ.ಗಜಾಲ ಸುಲ್ತಾನ ಅಭಿಪ್ರಾಯಪಟ್ಟಿದ್ದಾರೆ.

- ಹಾಲಿವಾಣದಲ್ಲಿ ದಂತ ತಪಾಸಣೆ ಶಿಬಿರದಲ್ಲಿ ಡಾ.ಗಜಾಲ ಸುಲ್ತಾನ - - - ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಮನುಷ್ಯರು ಚಾಕೋಲೇಟ್, ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದರೆ ಹಲ್ಲು ಹುಳುಕಾಗುತ್ತವೆ ಎಂದು ಬಾಪೂಜಿ ದಂತ ಮಹಾವಿದ್ಯಾಲಯದ ಡಾ.ಗಜಾಲ ಸುಲ್ತಾನ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ದಂತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ಮನುಷ್ಯನ ದೇಹದಲ್ಲಿ ಸಾಮಾನ್ಯ ಹಲ್ಲು, ದವಡೆ ಹಲ್ಲುಗಳಿವೆ. ಮಕ್ಕಳು ಆಟವಾಡುವಾಗ ಹಲ್ಲು ಬಿದ್ದಾಗ, ಅದೇ ಸ್ಥಳದಲ್ಲಿ ಬಿದ್ದ ಹಲ್ಲನ್ನು ಇಟ್ಟು ಸ್ಥಳೀಯ ಆಸ್ಪತ್ರೆಗೆ ತೆರಳಬೇಕು. ಅಥವಾ ಹಲ್ಲನ್ನು ಹಾಲು ಅಥವಾ ಸಲೇನ್‌ನಲ್ಲಿ ಹಾಕಿ ಆಸ್ಪತ್ರೆಯತ್ತ ತಂದು ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಅಡಕೆ, ತಂಬಾಕು ಸೇವನೆಯಿಂದ ಕ್ರಿಮಿಗಳು ಬಾಯಿಯ ಒಳ ಸೇರುತ್ತವೆ. ಇದರಿಂದ ಕ್ಯಾನ್ಸರ್ ಬರಬಹುದು. ಟೂತ್ ಬ್ರಷ್‌ನ್ನು ಬಾತ್ ರೂಮ್‌ನಲ್ಲಿ ಇಡದೇ ಗಾಳಿ- ಬೆಳಕು ಇರುವ ಸ್ಥಳದಲ್ಲಿಯೇ ಇಡಬೇಕು. ನಾಲಿಗೆ ಸಹ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಲಯನ್ಸ್‌ ಕ್ಲಬ್‌ ಜಿಲ್ಲಾ ಮಾಜಿ ಗವರ್‍ನರ್ ಓಜಿ ರುದ್ರಗೌಡ ಮಾತನಾಡಿ, ೩೦ಕ್ಕೂ ಹೆಚ್ಚು ವರ್ಷಗಳಿಂದ ಉಚಿತ ನೇತ್ರ ತಪಾಸಣೆ, ಆರೋಗ್ಯ ತಪಾಸಣೆ, ಸಸಿಗಳ ನೆರವುದು, ಹೃದಯ ರೋಗ ಪರೀಕ್ಷೆ, ಅವಶ್ಯಕತೆ ಇರುವವರಿಗೆ ನೆರವು, ಕೋವಿಡ್ ಅವಧಿಯಲ್ಲಿ ಕಿಟ್ ವಿತರಣೆ ಸೇರಿದಂತೆ ಅನೇಕ ಜನಪರ ಸೇವೆಗಳನ್ನು ಕ್ಲಬ್ ನೆರವೇರಿಸಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷೆ ಪಾರ್ವತಮ್ಮ, ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಎಸ್‌ಡಿಎಂಸಿ ಸಮನ್ವಯ ಸಮಿತಿ ಮುಖಂಡರಾದ ಬಿ.ಬಸವರಾಜ್, ಎಸ್.ಆಂಜನೇಯ, ನಾಗರಾಜ್, ಡಾ. ಚಂದ್ರಕಾಂತ್, ಮುಖ್ಯ ಶಿಕ್ಷಕರಾದ ಹನುಮಂತಪ್ಪ, ಸುನೀತಾ ಪಅಲ್ಗೊಂಡಿದ್ದರು. ಶಿಬಿರದಲ್ಲಿ ೨೬೦ಕ್ಕೂ ಹೆಚ್ಚು ಮಕ್ಕಳಿಗೆ ದಂತ ತಪಾಸಣೆ ನಡೆಸಿ, ತೊಂದರೆ ಇರುವ ಮಕ್ಕಳಿಗೆ ಬಾಪೂಜಿ ದಂತ ವಿಭಾಗದಲ್ಲಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.

- - - -೨೨ಎಂಬಿಆರ್೧: ದಂತ ತಪಾಸಣೆ ಶಿಬಿರದಲ್ಲಿ ಡಾ.ಗಜಾಲ ಸುಲ್ತಾನ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ