ಐಎಂಜೆಐಎಸ್‌ಸಿ ಕಲೋತ್ಸವ: ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ

KannadaprabhaNewsNetwork |  
Published : Apr 26, 2026, 03:30 AM IST
ಕಲೋತ್ಸವವನ್ನು ಜ್ಯೋತಿ ಸಾಲಿಗ್ರಾಮ ಅವರು ಉದ್ಘಾಚಿಸಿದರು | Kannada Prabha

ಸಾರಾಂಶ

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿ (ಐಎಂಜೆಐಎಸ್‌ಸಿ)ನ ಲಲಿತಾ ಕಲಾಸಂಘದ ವತಿಯಿಂದ ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ ದಿನ ‘ಕಲೋತ್ಸವ –2026’ವನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಯಿತು.

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿ (ಐಎಂಜೆಐಎಸ್‌ಸಿ)ನ ಲಲಿತಾ ಕಲಾಸಂಘದ ವತಿಯಿಂದ ವಿದ್ಯಾರ್ಥಿ ಪ್ರತಿಭಾ ಪ್ರದರ್ಶನ ದಿನ ‘ಕಲೋತ್ಸವ –2026’ವನ್ನು ಅತ್ಯಂತ ಉತ್ಸಾಹದಿಂದ ಆಯೋಜಿಸಲಾಯಿತು. ಕುಂದಾಪುರದ ಭಂಡಾರ್ಕಾರ್ಸ್ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನ ಸಮುದಾಯ ರೇಡಿಯೋ ಕೇಂದ್ರ 89.6 ಎಫ್‌ಎಂನ ಕಾರ್ಯಕ್ರಮ ಸಂಯೋಜಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ಉದ್ಘಾಟಿಸಿ, ದೊರೆತ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಒಬಿಜಿ ವಿಭಾಗದ ಮುಖ್ಯಸ್ಥೆ ರೂಪಶ್ರೀ ಕೆ. ಎಸ್. ಅವರು ಸರ್ವತೋಮುಖ ಅಭಿವೃದ್ಧಿಗೆ ಪಠ್ಯ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಭಾಗವಹಿಸುವಿಕೆಯನ್ನು ಸಮತೋಲನಗೊಳಿಸುವ ಮಹತ್ವ ಹೇಳಿದರು.

ಐಎಂಜೆಐಎಸ್‌ಸಿಯ ಪ್ರಾಂಶುಪಾಲ ಡಾ. ಪ್ರತಿಭಾ ಎಂ ಪಟೇಲ್ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ವಿದ್ಯಾರ್ಥಿಗಳು ಮತ್ತು ಸಂಘಟಕರ ಪ್ರಯತ್ನಗಳನ್ನು ಶ್ಲಾಘಿಸಿದರು.

ರಾಜೇಶ್ವರಿ ಆರ್ ಶೆಟ್ಟಿ ನಿರೂಪಿಸಿದರು. ಬೋಧಕ ಸಂಯೋಜಕಿ ಶ್ರೀನಿಧಿ ಸ್ವಾಗತಿಸಿದರು ಮತ್ತು ನಿಧಿ ವಂದಿಸಿದರು. ವಿದ್ಯಾರ್ಥಿ ಸಂಯೋಜಕರಾದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸನ್ನಿಧಿ ಪಿ ವೈ ಮತ್ತು ತೀರ್ಥಾ ಕುಲಾಲ್ ಕಾರ್ಯಕ್ರಮದ ಯಶಸ್ವಿ ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಾರ್ಯಕ್ರಮದಲ್ಲಿ ಯುಗ, ಸಂಸ್ಕೃತಿ ಮತ್ತು ದಿವ್ಯಾಗ್ನಿ ಎಂಬ ಮೂರು ತಂಡಗಳ ನಡುವೆ ಅಂತರ-ತರಗತಿ ಸ್ಪರ್ಧೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ಯಾಡಿ ಶ್ರೀ ರಾಮ ಕ್ಷೇತ್ರ ಸಂಸ್ಥಾನ ಅಯೋಧ್ಯೆ ಶಾಖಾ ಮಠ ನಿರ್ಮಾಣ ಸಮಿತಿ ಅಧ್ಯಕ್ಷ ನಳಿನ್‌
ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಹೆಚ್ಚಳ: ಡಾ. ಮಂತರ್ ಗೌಡ