ತುಂಬೆ ಡ್ಯಾಂಗೆ ಎಎಂಆರ್‌ ಡ್ಯಾಂ ನೀರು ಕೂಡಲೇ ಹರಿಸಿ: ವೇದವ್ಯಾಸ್‌ ಕಾಮತ್‌

KannadaprabhaNewsNetwork |  
Published : May 03, 2026, 02:30 AM IST
ತುಂಬೆ ಡ್ಯಾಂ ವೀಕ್ಷಿಸುತ್ತಿರುವ ಶಾಸಕ ವೇದವ್ಯಾಸ್‌ ಕಾಮತ್‌  | Kannada Prabha

ಸಾರಾಂಶ

ಬಂಟ್ವಾಳದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್‌ಗೆ ಇಳಿಕೆಯಾಗುವ ಮೂಲಕ ಮಂಗಳೂರು ನಗರದಲ್ಲಿ ಕೃತಕ ಜಲಕ್ಷಾಮವನ್ನು ಸೃಷ್ಟಿಸಲಾಗಿದೆ. ಕೂಡಲೇ ಎಎಂಆರ್‌ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

ಮಂಗಳೂರು: ಬಂಟ್ವಾಳದ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್‌ಗೆ ಇಳಿಕೆಯಾಗುವ ಮೂಲಕ ಮಂಗಳೂರು ನಗರದಲ್ಲಿ ಕೃತಕ ಜಲಕ್ಷಾಮವನ್ನು ಸೃಷ್ಟಿಸಲಾಗಿದೆ. ಕೂಡಲೇ ಎಎಂಆರ್‌ ಡ್ಯಾಂನಿಂದ ತುಂಬೆ ಡ್ಯಾಂಗೆ ನೀರು ಹರಿಸಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ. ತುಂಬೆ ಡ್ಯಾಂಗೆ ಶನಿವಾರ ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಿದ ಶಾಸಕರು, ನಗರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರು ಇದ್ದರೂ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತ ನೇತೃತ್ವದ ಪಾಲಿಕೆಯು ನೀರಿನ ರೇಷನಿಂಗ್ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ವಾಸ್ತವದಲ್ಲಿ ಆಪತ್ಕಾಲದ ಬಳಕೆಗೆ ಇರುವ ಎಎಂಆರ್‌ ಡ್ಯಾಂನಲ್ಲಿ ಸಾಕಷ್ಟು ನೀರಿದ್ದು ತುಂಬೆಗೆ ಹರಿಸಿ ನೀರಿನ ಮಟ್ಟ 6 ಮೀಟರ್ ವರೆಗೆ ಏರಿಸಿ ಜನರಿಗೆ ದಿನನಿತ್ಯ ನೀರು ಸರಬರಾಜು ಮಾಡಬಹುದು. ಇದನ್ನು ಬಿಜೆಪಿಯು ಹಿಂದಿನ ಪಾಲಿಕೆಯ ಆಡಳಿತದಲ್ಲಿ ಮಾಡಿ ತೋರಿಸಿರುವಾಗ, ಜನರನ್ನು ಹೀಗೆ ಭಯ ಭೀತಗೊಳಿಸುವುದು ಎಷ್ಟು ಸರಿ? ಆದ್ದರಿಂದ ಭಾನುವಾರದೊಳಗೆ ಎಎಂಆರ್ ಡ್ಯಾಂನಿಂದ ನೀರು ಬಿಡಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಮಾಜಿ ಮೇಯರ್‌ಗಳಾದ ಪ್ರೇಮಾನಂದ ಶೆಟ್ಟಿ ಹಾಗೂ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಖಂಡಿತ ನೀರಿನ ಸಮಸ್ಯೆ ಇಲ್ಲ. ಆಡಳಿತ ನಡೆಸುವವರು ಅನುಭವವಿಲ್ಲದೆ ಇಂತಹ ನಿರ್ಧಾರ ಕೈಗೊಂಡಂತಾಗಿದೆ. ಇನ್ನಿತರ ಬಳಕೆಗೆ ನೀರು ಬಳಸುವುದನ್ನು ತಡೆಯುವುದು ಬಿಟ್ಟು ಜನರ ಕುಡಿಯುವ ನೀರು ನಿಲ್ಲಿಸುವುದು ಎಷ್ಟು ಸರಿ? ನಗರದ ಹಲವೆಡೆ ನೀರೇ ಬರುತ್ತಿಲ್ಲ ಎಂಬ ಆರೋಪವಿದ್ದು 24 ಗಂಟೆ ಎಲ್ಲ ಮನೆಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳಾದ ಪೂರ್ಣಿಮಾ, ಭಾನುಮತಿ, ವೀಣಾಮಂಗಳ, ಲೀಲಾವತಿ ಪ್ರಕಾಶ್, ಜಯಲಕ್ಷ್ಮಿ ಶೆಟ್ಟಿ, ಸಂದೀಪ್ ಗರೋಡಿ, ಭರತ್ ಕುಮಾರ್, ಶೈಲೇಶ್ ಶೆಟ್ಟಿ, ಗಣೇಶ್ ಕುಲಾಲ್, ಶೋಭಾ ಪೂಜಾರಿ, ಕಿಶೋರ್ ಕೊಟ್ಟಾರಿ, ಮನೋಹರ್ ಶೆಟ್ಟಿ, ಪ್ರಮುಖರಾದ ಅಶ್ವಿತ್ ಕೊಟ್ಟಾರಿ, ರಮೇಶ್ ಹೆಗ್ಡೆ, ಮೋಹನ್ ಪೂಜಾರಿ, ಪಾಲಿಕೆಯ ಹಿರಿಯ ಅಧಿಕಾರಿಗಳಾದ ನರೇಶ್ ಶೆಣೈ, ಅಶ್ವಿನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಾಯಣದ ಭಕ್ತಿರಸದಲ್ಲಿ ಮಿಂದೆದ್ದ ಗೋಕುಲಂ ಗೋಶಾಲೆ
ದುಬೈನಿಂದ ಪತಿ ಪಾರ್ಸೆಲ್‌ ಕಳುಹಿಸಿದ್ದಾರೆ ಎಂದು ನಂಬಿಸಿ ಮಹಿಳೆಗೆ ವಂಚನೆ