ಚಿಕ್ಕಮಗಳೂರು: ಜಿಲ್ಲಾಡಳಿತದ ಆದೇಶದಂತೆ ಪರಿಸರಕ್ಕೆ ಪೂರಕವಾಗಿ ತಯಾರಾಗಿರುವ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ನಿಗಧಿತ ಸ್ಥಳದಲ್ಲಿ ವಿಸರ್ಜಿಸಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ನಗರಸಭೆಯಿಂದ ಕೋಟೆಕೆರೆ ಸೇರಿದಂತೆ ನಗರದ ಮತ್ತಿತರೆಡೆ ಗಣಪತಿ ವಿಸರ್ಜಿಸಲು ಸಿದ್ಧತೆ ನಡೆಸಿರುವ ಬಗ್ಗೆ ಪರಿಶೀಲಿಸಿ ಮಾತನಾಡಿದರು. ನಗರದ ಜನತೆ ಗೌರಿ ಗಣೇಶ ಹಬ್ಬಗಳ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು ಜೊತೆಗೆ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮೆರವಣಿಗೆ ನಡೆಸಬೇಕೆಂದು ವಿನಂತಿಸಿದರು.ಕೆರೆಗಳು ದೂರ ಇರುವುದರಿಂದ ನಗರಸಭೆಯಿಂದ ಆಜಾದ್ ಪಾರ್ಕ್ ವೃತ್ತ, ಹನುಮಂತಪ್ಪ ವೃತ್ತ, ದಂಟರಮಕ್ಕಿಕೆರೆ ಬದಿ, ಟೌನ್ ಕ್ಯಾಂಟಿನ್ ವೃತ್ತ, ಎಐಟಿ ವೃತ್ತ ಸೇರಿದಂತೆ 5 ಕಡೆಗಳಲ್ಲಿ ಟ್ರ್ಯಾಕ್ಟರ್‌ನಲ್ಲಿಯೇ ಗಣಪತಿಯನ್ನು ವಿಸರ್ಜಿಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಕೋಟೆ ಕೆರೆ ಅಭಿವೃದ್ಧಿಪಡಿಸಲು ನಗರಸಭೆಯಿಂದ ಕೋಟೆ ಕೆರೆಯಲ್ಲಿ ಕಲ್ಯಾಣಿ ನಿರ್ಮಿಸಿ, ನಗರ ಸೇರಿದಂತೆ ಸುತ್ತಮುತ್ತಲ ನಾಗರಿಕರು ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ವಿಸರ್ಜಿಸಲು ಅನುಕೂಲ ಕಲ್ಪಿಸಲಾಗಿದೆ ಎಂದ ಅವರು, ಬಸವನಹಳ್ಳಿ ಕೆರೆ ಅಭಿವೃದ್ಧಿಗೆ ಕೆಲವು ತಾಂತ್ರಿಕ ತೊಂದರೆಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ ಅಭಿವೃದ್ಧಿ ಪಡಿಸ ಲಾಗುವುದು ಎಂದು ಹೇಳಿದರು.ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗಣೇಶ ಮೂರ್ತಿ ವಿಸರ್ಜನೆ ಸಂಬಂಧ ಕೋಟೆಕೆರೆಯನ್ನು ಕಳೆದ ಒಂದು ವಾರ ದಿಂದ ನಗರಸಭೆ ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕೇಶ್, ಆರೋಗ್ಯ ನಿರೀಕ್ಷಕ ಈಶ್ವರ, ರಂಗಪ್ಪ,26 ಕೆಸಿಕೆಎಂ 2ಗಣೇಶ ಮೂರ್ತಿ ವಿಸರ್ಜಿಸಲು ಚಿಕ್ಕಮಗಳೂರಿನ ಕೋಟೆ ಕೆರೆಯಲ್ಲಿ ನಗರಸಭೆ ಸಿದ್ಧತೆ ಮಾಡಿಕೊಂಡಿರುವ ಸ್ಥಳವನ್ನು ಶಾಸಕ ಎಚ್.ಡಿ. ತಮ್ಮಯ್ಯ ವೀಕ್ಷಿಸಿದರು. ಪೌರಾಯುಕ್ತ ಬಸವರಾಜ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಲೋಕೇಶ್, ದಿನೇಶ್ ಇದ್ದರು.