ರಾಣಿಬೆನ್ನೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜತೆ ಸೇರಿ ಹೆತ್ತ ಮಗಳನ್ನು ಕೊಲೆಗೈದ ಘಟನೆ ತಾಲೂಕಿನ ಗುಡ್ಡದ ಆನ್ವೇರಿ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಿಯಾಂಕಾ (5) ಕೊಲೆಯಾದ ನತದೃಷ್ಟ ಮಗು. ಗಂಗವ್ವ ಉರ್ಫ್ ಜ್ಯೋತಿ ಗುತ್ತಲ (36) ಎಂಬಾಕೆ ನಗರದ ಎಕೆಜಿ ಕಾಲನಿ ನಿವಾಸಿ ಮಂಜುನಾಥ (40) ಎಂಬವರ ಜತೆ ವಿವಾಹವಾಗಿದ್ದಳು. ಈ ದಂಪತಿ ಮಗಳೆ ಪ್ರಯಾಂಕ.ಗಂಗವ್ವ ಇಲ್ಲಿನ ಗೌರಿಶಂಕರ ನಗರದ ನಿವಾಸಿ, ಗುಡ್ಡದ ಆನ್ವೇರಿ ಗ್ರಾಮದ ವಾಸಿ ಅಣ್ಣಪ್ಪ ಮಡಿವಾಳರ (40) ಜತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಗಂಗವ್ವ ಮತ್ತು ಅಣ್ಣಪ್ಪ ತಮ್ಮ ಜತೆ ಪ್ರಿಯಾಂಕಾಳನ್ನು ಕರೆದುಕೊಂಡು ತಾಲೂಕಿನ ಗುಡ್ಡದ ಆನ್ವೇರಿ ಗ್ರಾಮದಲ್ಲಿ ವಾಸವಾಗಿದ್ದರು.
ಇದು ಗಂಗವ್ವನ ಪತಿ ಮಂಜುನಾಥನಿಗೆ ಗೊತ್ತಾಗಿ ಅವರಿದ್ದ ಸ್ಥಳಕ್ಕೆ ತೆರಳಿ ಅಣ್ಣಪ್ಪನನ್ನು ಪ್ರಶ್ನಿಸಿದ್ದಾನೆ. ಆಗ ಅಣ್ಣಪ್ಪ ಮಂಜುನಾಥನಿಗೆ ಬೈದು ಕಳುಹಿಸಿದ್ದಾನೆ. ನಂತರ ತಮ್ಮಿಬ್ಬರ ಸಂಬಂಧಕ್ಕೆ ಗಂಗವ್ವನ ಮಗಳು ಪ್ರಿಯಾಂಕಾ ಅಡ್ಡಿಯಾಗುತ್ತಾಳೆ ಎಂಬ ಕಾರಣದಿಂದ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಶವವನ್ನು ಬೈಕ್‌ನಲ್ಲಿ ತೆಗೆದುಕೊಂಡು ಯಲ್ಲಾಪುರ ಬಳಿ ಕಾಲುವೆಯಲ್ಲಿ ಎಸೆದು ಸಾಕ್ಷಿನಾಶಕ್ಕೆ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ಈ ಪ್ರಕರಣ ದಾಖಲಿಸಕೊಂಡು ಗ್ರಾಮೀಣ ಠಾಣೆಯ ಲ್ಲಿ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಿಂದೂಗಳಿಗೆ ಲಾಠಿಭಾಗ್ಯ: ಬಿಜೆಪಿ ಆರೋಪ
ಶಿಗ್ಗಾಂವಿ: ರಾಜ್ಯದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಸರ್ಕಾರದ ನಿರ್ವಹಣೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳ ಜತೆಗೆ ಲಾಠಿಭಾಗ್ಯ ಯೋಜನೆಯನ್ನೂ ನೀಡಿದೆ ಎಂದು ಬಿಜೆಪಿ ಯುವ ಮುಖಂಡ ನರಹರಿ ಕಟ್ಟಿ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ ಬಳಕೆಗೆ ಪರವಾನಗಿ ನೀಡದೆ ಹಬ್ಬದ ಉತ್ಸಾಹವನ್ನು ಕುಂಠಿತಗೊಳಿಸಿರುವುದು ದುರದೃಷ್ಟಕರ. ಧಾರವಾಡದಲ್ಲಿ ಗಣಪತಿ ವಿಸರ್ಜನೆ ವೇಳೆ ಸಾಮಾನ್ಯ ಜನರ ಮೇಲೆ ಲಾಠಿ ಚಾರ್ಜ್ ಮಾಡಲಾಗಿದೆ. ಇದು ಹಿಂದೂಗಳ ಮೇಲೆ ನಡೆದ ಅನ್ಯಾಯಕ್ಕೆ ನಿದರ್ಶನವಾಗಿದೆ ಎಂದಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಟೀಕಿಸಿದ್ದಾರೆ.